ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿಯಾಗಿರುವ ರೆಮಿಡಿಸಿವಿರ್​​​ಅನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಆಸ್ಪತ್ರೆಯ ಸ್ಟಾಪ್ ನರ್ಸ್ ಮತ್ತು ಆಯುರ್ವೇದ ಆಸ್ಪತ್ರೆಯ ವೈದ್ಯನೊಬ್ಬನ ಸೇರಿದಂತೆ ಆರು ಮಂದಿಯ ಬಂಧನವಾಗಿದ್ದು, ಒಟ್ಟು 18 ರೆಮಿಡಿಸಿವಿರ್ ಇಂಜಕ್ಷನ್​​ಗಳನ್ನು ಸಿಸಿಬಿ ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಸುನಾಮಿ ದಿನೇ ದಿನೇ ವ್ಯಪಿಸುತ್ತಿದ್ದು, ವೈದ್ಯರು, ರೋಗಿಗಳು ರೆಮ್ಡೆಸಿವಿರ್ ಪಡೆಯಲು ಪರದಾಡುವಂತಾಗಿದೆ. ವಾರಗಳ ಕಾಲ ಅಲೆದರೂ ಔಷಧಿ ಸಿಗುತ್ತಿಲ್ಲ ಎಂದು ಹಲವರು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಇದನ್ನೇ ತಮ್ಮ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವ ಕೆಲ ವೈದ್ಯಕೀಯ ಸಿಬ್ಬಂದಿ, ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಸದ್ಯ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

The post ವೈದ್ಯನೋ ರಕ್ಕಸನೋ.. ಪ್ರಾಣ ಉಳಿಸಬೇಕಾದವನೇ ರೆಮಿಡಿಸಿವಿರ್ ಬ್ಲಾಕ್ ಮಾಡಿ ಅರೆಸ್ಟ್ ಆದ appeared first on News First Kannada.

Source: newsfirstlive.com

Source link