ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಮಕ್ಕಳ ತಜ್ಞ ದೀಪಕ್ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ, ವೈದ್ಯರ ಸಾಮೂಹಿಕ ರಕ್ಷಣೆಗೆ ಬೃಹತ್ ಅಭಿಯಾನ ಶುರುವಾಗಿದೆ.

ತರೀಕೆರೆಯಲ್ಲಿ ಇಂದಿನಿಂದ ಜೂನ್ 6ರವರೆಗೆ ಎಲ್ಲಾ ಖಾಸಗಿ  ಆಸ್ಪತ್ರೆಗಳು ಮತ್ತು ಕ್ಲಿನಿಕ್​ಗಳನ್ನ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ವೈದ್ಯ ದೀಪಕ್

ದೀಪಕ್ ಮೇಲಿನ ಹಲ್ಲೆ ಇಡೀ ವೈದ್ಯ ಸಮೂಹದ ಮೇಲೆ ನಡೆದ ದೌರ್ಜನ್ಯ. ಜೀವ ಬಲಿಪಡೆಯುವಂಥ ಕ್ರೌರ್ಯಕ್ಕೆ ಮುಂದಾದ್ರೆ ಹೇಗೆ? ಕೊರೊನಾದಂಥ ಸನ್ನಿವೇಶದಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ರು ಡಾ.ದೀಪಕ್. ವೈದ್ಯರ ರಕ್ಷಣೆಗೆ ಸರ್ಕಾರ ಮುಂದಾಗಲೇಬೇಕು ಅಂತ ಭಾರತೀಯ ವೈದ್ಯಕೀಯ ಮಂಡಳಿಯ ತರೀಕೆರೆ ಶಾಖೆ ಒತ್ತಾಯ ಮಾಡಿವೆ.

ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದಾರೆ. ಈವರೆಗೂ 85 ಲಕ್ಷದಷ್ಟು ಸಹಿ ಸಂಗ್ರಹವಾಗಿದೆ. ಡಾ.ದೀಪಕ್ ಮೇಲಿನ ಹಲ್ಲೆಗೆ ನ್ಯಾಯ ಸಿಗದಿದ್ರೆ, ಬೆಂಗಳೂರಿನಲ್ಲೂ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ವೈದ್ಯರು ಚಿಂತಿಸಿದ್ದಾರೆ.

ಇದನ್ನೂ ಓದಿ: ಜೀವ ಉಳಿಸೋ ವೈದ್ಯನ ಮೇಲೆ ಲಾಂಗು, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ

The post ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಅಭಿಯಾನ; ತರೀಕೆರೆಯ ಖಾಸಗಿ ಆಸ್ಪತ್ರೆಗಳು ಬಂದ್ appeared first on News First Kannada.

Source: newsfirstlive.com

Source link