ಬೆಂಗಳೂರು: ಆಟೋ ಚಾಲಕನನ್ನು ವೈದ್ಯರ ಗ್ಯಾಂಗ್ವೊಂದು ವಿವಸ್ತ್ರಗೊಳಿಸಿ, ಚಾಲಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಮಾರಾಣಂತಿಕವಾಗಿ ಹಲ್ಲೆ ಮಾಡಿರೋ ಘಟನೆ ನಗರದ ಯಲಹಂಕದ ಕಂಟ್ರಿ ಕ್ಲಬ್ನಲ್ಲಿ ನಡೆದಿದೆ.
ಯಲಹಂಕ ನಿವಾಸಿ 26 ವರ್ಷದ ಮುರುಳಿ ಹಲ್ಲೆಗೊಳಗಾದ ಆಟೋ ಚಾಲಕರಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಆಟೋ ಚಾಲಕನನ್ನು ಮನಬಂದಂತೆ ಥಳಿಸಿ, ಬಳಿಕ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಬಾಗಲೂರಿನ ಮಾರುತಿ ಕ್ಲಿನಿಕ್ ವೈದ್ಯರಾದ ರಾಕೇಶ್, ಸ್ವಾಮಿ ಗ್ಯಾಂಗ್ ಅಮಾನವೀಯ ಕೃತ್ಯ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ..? ನಡೆದಿದ್ದೇನು..?
ನ.4 ರ ರಾತ್ರಿ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಗಳು ಚಾಲಕ ಪರಿಚಯ ಹಿನ್ನೆಲೆ ಅಡುಗೆ ಸಾಗಿಸಲು ಬಾಡಿಗೆ ಕರೆದಿದ್ದರು. ಮೊದಲು ಆಸ್ಪತ್ರೆಯಲ್ಲಿ ಆಯುಧ ಪೂಜೆಗೆ ಬಿರಿಯಾನಿ ಮಾಡಿಸಿದ್ದೇವೆ.. ಪಾತ್ರೆಗಳನ್ನ ಕಂಟ್ರಿ ಕ್ಲಬ್ಗೆ ತೆಗೆದುಕೊಂಡು ಬರಲು ವೈದ್ಯ ರಾಕೇಶ್ ಬಾಡಿಗೆ ನೀಡಿದ್ದರು. ಅದರಂತೆ ಆಟೋ ಚಾಲಕ ಮುರುಳಿ, ಬಿರಿಯಾನಿ ಪಾತ್ರೆಯನ್ನ ಕಂಟ್ರಿ ಕ್ಲಬ್ಗೆ ಕೊಂಡೊಯ್ದಿದ್ದರು. ಆದರೆ ಮತ್ತೆ ಚಾಲಕನಿಗೆ ವಾಪಸ್ ಹೋಗಿ ಬಾಗಲೂರಿನ ಕ್ಲಿನಿಕ್ ಹೋಗಿ ವೈದ್ಯ ಸ್ವಾಮಿಯನ್ನ ಕರೆದುಕೊಂಡು ಎಂದು ವೈದ್ಯ ರಾಕೇಶ್ ಹೇಳಿದ್ದನಂತೆ.
ಬಾಡಿಗೆ ದುಡ್ಡು ಕೇಳಿದಕ್ಕೆ ಅಸಮಾಧಾನಗೊಂಡ ವೈದ್ಯ..
ಈ ವೇಳೆ ಮತ್ತೆ ಕ್ಲಿನಿಕ್ ಬಳಿ ಹೋಗಿದ್ದ ಚಾಲಕ, ವೈದ್ಯ ಸ್ವಾಮಿಯನ್ನು ತಡವಾಯ್ತು ಬನ್ನಿ ಸಾರ್.. ಬಾಡಿಗೆ ಮುಗಿಸಿ ಮನೆಗೆ ಹೋಗಬೇಕು ಬಾಡಿಗೆ ಕೊಡಿ ಬೇಗ ಎಂದು ಆಟೋ ಚಾಲಕ ಕೇಳಿದ್ದರಂತೆ. ಆ ಬಳಿಕ ಮತ್ತೆ ಆಟೋ ಚಾಲಕ ಆರೋಪಿ ಮುರುಳಿಯನ್ನು ಕ್ಲಿನಿಕ್ನಿಂದ ಕಂಟ್ರಿ ಕ್ಲಬ್ಗೆ ಡ್ರಾಪ್ ಮಾಡಿದ್ದ. ಈ ವೇಳೆ ಬಾಡಿಗೆ ಹಣ ನೀಡಿದೆ ಕ್ಲಬ್ ಒಳಗೆ ಕರೆದು ಊಟ ಬಡಿಸುವಂತೆ ಸೂಚನೆ ಕರೆದಿದ್ದರಂತೆ.
ವಿವಸ್ತ್ರಗೊಳಿಸಿ ಮಧ್ಯ ಕುಡಿಸಿ ಹಲ್ಲೆ..
ಆದರೆ ಇದಕ್ಕೆ ನಿರಾಕರಿಸಿದ ಆಟೋ ಚಾಲಕ ಬಾಡಿಗೆ ಹಣ ಕೊಟ್ಟರೇ ನಾನು ಇಲ್ಲಿಂದ ಹೊರಡುತ್ತೇನೆ ಎಂದು ಹೇಳಿದ್ದು, ಈ ಮಾತಿಗೆ ಕೆರಳಿದ ವೈದ್ಯ ಸ್ವಾಮಿ, ಆಟೋ ಚಾಲಕ ಮುರಳಿನ ಬಗ್ಗೆ ವೈದ್ಯ ರಾಕೇಶ್ ಬಳಿ ದೂರಿ.. ಕ್ಲಿನಿಕ್ ಬಳಿ ರೌಡಿಯಂತೆ ವರ್ತಿಸಿದ್ದ ಎಂದು ಹೇಳಿದ್ದನಂತೆ. ಆ ವೇಳೆಗೆ ಕುಡಿತ ಮತ್ತಿನಲ್ಲಿದ್ದ ವೈದ್ಯ ರಾಕೇಶ್ ಶೆಟ್ಟಿ ಹಾಗೂ ಸ್ವಾಮಿ ಗ್ಯಾಂಗ್, ಡಾಕ್ಟರ್ ಗಳಿಗೆ ಮರ್ಯಾದೆ ಕೊಡದೇ ಮಾತಾಡ್ತಿಯಾ ಎಂದು ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಆತನನ್ನು ವಿವಸ್ತ್ರಗೊಳಿಸಿ ಬಲವಂತವಾಗಿ ಮಧ್ಯ ಕುಡಿಸಿದ್ದಾರೆ. ಬಳಿಕ ಆತನನ್ನು ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಮತ್ತೆ ಬಿಯರ್ ಬಾಟಲ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಂತೆ. ಅಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಆರೋಪವನ್ನು ಆಟೋ ಚಾಲಕ ಮಾಡಿದ್ದಾರೆ.

ಬಾಗಲೂರು ಪೊಲೀಸರಿಂದ ವೈದ್ಯ ರಾಕೇಶ್ ಅರೆಸ್ಟ್..
ಘಟನೆ ಸಂಬಂಧ ಚಾಲಕನ ಕುಟುಂಬಸ್ಥರು ಆತನೊಂದಿಗೆ ಬಾಗಲೂರು ಪೊಲೀಸರು ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಾಲಕ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಖಾಸಗಿ ಆಸ್ಪತ್ರೆ ವೈದ್ಯ ರಾಕೇಶ್ ಶೆಟ್ಟಿಯನ್ನು ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ನಡುವೆ ಹಲ್ಲೆಯಲ್ಲಿ ಭಾಗಿಯಾಗಿದ್ದ ಆರೇಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಪತ್ತೆಕಾರ್ಯ ನಡೆಸಿದ್ದಾರೆ.