ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಸಿನಿಮಾ ತಂಡ ವೈದ್ಯೋ ನಾರಾಯಣೋ ಹರಿಃ ಎನ್ನುತ್ತಿದೆ.
ಪ್ರೇಮ್ ಸಿನಿಮಾದ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಯವರು ಆಶೀರ್ವಾದವನ್ನ ನೀಡಿದ್ದಾರೆ.

ನೆನಪಿರಲಿ ಪ್ರೇಮ್ ಅವರಿಗೆ ಪ್ರೇಮಂ ಪೂಜ್ಯಂ ಸಿನಿಮಾ ಮಹಾತ್ವಕಾಂಕ್ಷೆಯ ಸಿನಿಮಾ. ತನ್ನ ಸಿನಿ ಕರಿಯರ್​​ನ 25ನೇ ಸಿನಿಮಾ ಸಂಭ್ರಮದಲ್ಲಿರೋ ನಟ ಪ್ರೇಮ್ ‘‘ಪ್ರೇಮಂ ಪೂಜ್ಯಂ’’ ಸಿನಿಮಾದ ಟೀಸರ್ ಮತ್ತು ಹಾಡುಗಳ ಮೂಲಕ ಭರವಸೆಯನ್ನ ಮೂಡಿಸುತ್ತಿದ್ದಾರೆ.

ತಮ್ಮಲ್ಲಿರೋ ಒಂದೊಂದೇ ಅಂದವಾದ ಕಂಟೆಂಟ್​​ಗಳನ್ನ ಹೊರ ಬಿಡ್ತಿರೋ ‘‘ಪ್ರೇಮಂ ಪೂಜ್ಯಂ’’ ಸಿನಿಮಾ ತಂಡ ಈ ಬಾರಿ ಹಾಡೊಂದನ್ನ ಹೊರ ಬಿಟ್ಟಿದೆ. ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್​ ಸಂಗೀತ ಮತ್ತು ಸಾಹಿತ್ಯ ವಿರೋ ಈ ಹಾಡು ವೈದ್ಯರಿಂದ ವೈದ್ಯರಿಗಾಗಿ ವೈದ್ಯರಿಗೋಸ್ಕರ ಪ್ರಸ್ತುತಪಡಿಸಿರುವ ಹಾಡು.

ವೈದ್ಯರಿಂದ ವೈದ್ಯರಿಗಾಗಿ ವೈದ್ಯರಿಗೋಸ್ಕರ ಹೊರ ಬಿಟ್ಟಿರೋ ಹಾಡಿದು. ಮೂಲತಃ ಈ ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಬಿ.ಎಸ್​ ಡಾಕ್ಟರ್ ಆಗಿರೋ ಕಾರಣ ತನ್ನ ವೃತ್ತಿಧರ್ಮದ ಬಂದುಗಳಿಗಾಗಿ ಸಮಾಜದ ಆರೋಗ್ಯ ರಕ್ಷಕರಿಗಾಗಿ ‘‘‘ವೈದ್ಯೋ ನಾರಾಯಣೋ ಹರಿಃ’’’ ಹಾಡನ್ನ ಬಿಡುಗಡೆ ಮಾಡಿಸಿದ್ದಾರೆ. ಅದ್ರಲೂ ಪರಮ ಪೂಜ್ಯ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರಿಂದ ‘‘ವೈದ್ಯೋ ನಾರಾಯಣೋ ಹರಿಃ’’’ ಹಾಡನ್ನ ಹೊರ ಬಿಟ್ಟಿರೋದು ವಿಶೇಷವಾಗಿದೆ.

ಪ್ರೇಮ್ ನಟನೆಯ ‘‘ ಪ್ರೇಮಂ ಪೂಜ್ಯಂ’’ ಸಿನಿಮಾ ಈಗಾಗಲೇ ಹಾಡುಗಳಿಂದ ಭರವಸೆ ಮೂಡಿಸಿದೆ. ಸ್ಯಾಂಡಲ್​ವುಡ್​ನ ಹಿರಿಯ ನಟ ನಟಿಯರು ಪ್ರೇಮ್​ ಅವರ 25ನೇ ಚಿತ್ರಕ್ಕೆ ಶುಭಾಶಗಳನ್ನ ಅರ್ಪಿಸುತ್ತ ಪ್ರೋತ್ಸಾಹಿಸುತ್ತಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿರೋ ವೈದ್ಯರ ಬಗ್ಗೆ ನಟ ಪ್ರೇಮ್ ಮಾತುಗಳನ್ನ ಆಡಿದ್ದಾರೆ.

The post ವೈದ್ಯರಿಂದ.. ವೈದ್ಯರಿಗಾಗಿ.. ವೈದ್ಯರಿಗೋಸ್ಕರ.. ‘ಪ್ರೇಮಂ ಪೂಜ್ಯಂ’ ಚಿತ್ರತಂಡದಿಂದ ಹೊರಬಂತು ಹಾಡು appeared first on News First Kannada.

Source: newsfirstlive.com

Source link