ನವದೆಹಲಿ: ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆ ದೇಶದ ವೈದ್ಯರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಕೊರೊನಾ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಳೆದ ಒಂದೂವರೆ ವರ್ಷದಿಂದ ವೈದ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ದೇವದೂತರಂತೆ ಹಗಲಿರುಳು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಲಕ್ಷಾಂತರ ಜನರ ಜೀವವನ್ನ ರಕ್ಷಿಸಿದ್ದಾರೆ. ಕೊರೊನಾ ವೈರಸ್ ದಿನಕಳೆದಂತೆ ಹೊಸ ಹೊಸ ರೂಪಾಂತರಗ ಹೊಂದುತ್ತಿವೆ. ಇಂಥ ಸಂದರ್ಭದಲ್ಲಿ ವೈದ್ಯರಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.

ಈಗ ದೇಶದಲ್ಲಿ ಕೊರೊನಾ ಸಾವಿನ ಪ್ರಮಾಣ ಸಮಾಧಾನಕರವಾಗಿದೆ. ಕೆಲವು ದೇಶಗಳಲ್ಲಿ ಸಾವಿನ ಸ್ಥಿತಿ ಚಿಂತಾಜನಕವಾಗಿದೆ. ಭಾರತದಲ್ಲಿ ಉತ್ತಮ ಸ್ಥಿತಿಗೆ ವೈದ್ಯರ ಶ್ರಮವೇ ಕಾರಣ. ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ ಕೋಟಿಗೂ ಅಧಿಕ ಹಣ ಅನುದಾನ ನೀಡಲಾಗಿದೆ. 50 ಸಾವಿರ ಕೋಟಿಯ ಕ್ರೆಡಿಟ್ ಸ್ಕೀಮ್ ಜಾರಿಗೆ ತಂದಿದ್ದೇವೆ. ದೇಶದಲ್ಲಿ ಆಧುನಿಕ ವೈದ್ಯಕೀಯ ಸೌಕರ್ಯಗಳು ನಿರ್ಮಾಣವಾಗ್ತಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿವೆ. ವಿದ್ಯಾರ್ಥಿಗಳಿಗೆ ವೈದ್ಯರಾಗಲು ಹೆಚ್ಚಿನ ಅವಕಾಶ ಸಿಗುತ್ತಿದೆ. ವೈದ್ಯರ ಮೇಲಿನ ಹಲ್ಲೆ ತಡೆಗೆ ಕಾನೂನು ರೂಪಿಸಲಾಗಿದೆ. ಕೊರೊನಾ ವಾರಿಯರ್​ಗಳಿಗೆ ಕೇಂದ್ರ ಉಚಿತ ವಿಮೆ ಕಲ್ಪಿಸಿದೆ. ವೈದ್ಯರು ಮೊದಲೇ ಲಸಿಕೆ ಹಾಕಿಸಿಕೊಂಡಿದ್ದರಿಂದ ಪ್ರಯೋಜನವಾಯ್ತು, ಲಸಿಕೆ ಮೇಲಿನ ವಿಶ್ವಾಸ ಹೆಚ್ವಾಗಿದೆ.. ಕೊರೊನಾ ಬಗ್ಗೆ ಜನ ಜಾಗೃತರಾಗಲು ವೈದ್ಯರೂ ಸಹ ಕಾರಣ ಎಂದಿದ್ದಾರೆ.

The post ‘ವೈದ್ಯರು ದೇವದೂತರಂತೆ ಹಗಲಿರುಳು ಸೋಂಕಿತರಿಗಾಗಿ ಶ್ರಮಿಸಿದ್ದಾರೆ’ appeared first on News First Kannada.

Source: newsfirstlive.com

Source link