ನವದೆಹಲಿ: ದೇಶದಾದ್ಯಂತ ಎರಡನೇ ಕೊರೊನಾ ಸೋಂಕಿನ ಅಲೆ ಹೆಚ್ಚಾದ ಬೆನ್ನಲ್ಲೇ ಕೊರೊನಾ ಸೋಂಕಿತರ ಸಾವುನೋವುಗಳೂ ಹೆಚ್ಚಾದವು. ಒಂದೇ ದಿನ ನೂರಾರು ಮೃತದೇಹಗಳು ಆಸ್ಪತ್ರೆಗಳಿಂದ ಹೊರಬಂದವು. ಇದರ ಮಧ್ಯೆ ವೈದ್ಯರ ಮೇಲೆ ಕೆಲವು ಮೃತ ಸೋಂಕಿತರು ಹಲ್ಲೆ ನಡೆಸಿದ ವರದಿಗಳು ಕೇಳಿಬಂದವು. ಅಷ್ಟೇ ಯಾಕೆ ನಿನ್ನೆಯಷ್ಟೇ ಕೊರೊನಾ ಸೋಂಕಿತನೊಬ್ಬ ಸಾವನ್ನಪ್ಪಿದ್ದರಿಂದ ಬೇಸತ್ತ ಗುಂಪೊಂದು ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಅಸ್ಸಾಂನ ಹೊಜಾಯಿ ಜಿಲ್ಲೆಯಲ್ಲಿ ನಡೆಯಿತು.

ಈ ಹಿನ್ನೆಲೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವೈದ್ಯರ ಮೇಲೆ ಹಲ್ಲೆ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೋರಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್.. ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ತಡೆಯಲು ಪರಿಣಾಮಕಾರಿ ಮತ್ತು ಕಠಿಣ ಕಾಯ್ದೆಯೊಂದನ್ನು ರೂಪಿಸಬೇಕಿದೆ ಎಂದು ಮನವಿ ಮಾಡಿದೆ.

The post ವೈದ್ಯರ ಮೇಲಿನ ಹಲ್ಲೆ ತಡೆಯಲು ಕಠಿಣ ಕಾಯ್ದೆ ರೂಪಿಸಿ: ಅಮಿತ್ ಶಾಗೆ IMA ಪತ್ರ appeared first on News First Kannada.

Source: newsfirstlive.com

Source link