ವೈರಲ್ ಆಯ್ತು ‘ಡಾಕ್ಟರ್​ ಸ್ಟ್ರೇಂಜ್​’ ಚಿತ್ರದ ಕ್ಲಿಪ್; ಸಿನಿಮಾ ಬಗ್ಗೆ ಫ್ಯಾನ್ಸ್​ ಕಡೆಯಿಂದ ಬಂತು ಗಂಭೀರ ದೂರ | Doctor Strange in the Multiverse of Madness clip goes viral Fans Complaint on CGI


ವೈರಲ್ ಆಯ್ತು ‘ಡಾಕ್ಟರ್​ ಸ್ಟ್ರೇಂಜ್​’ ಚಿತ್ರದ ಕ್ಲಿಪ್; ಸಿನಿಮಾ ಬಗ್ಗೆ ಫ್ಯಾನ್ಸ್​ ಕಡೆಯಿಂದ ಬಂತು ಗಂಭೀರ ದೂರ

‘ಡಾಕ್ಟರ್​ ಸ್ಟ್ರೇಂಜ್​’

ಮಾರ್ವೆಲ್​ ಸಿನಿಮಾಗಳಿಗೆ (Marvel Movies) ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ ಚಿತ್ರ ಭಾರತದಲ್ಲಿ 250 ಕೋಟಿ ರೂಪಾಯಿ ಗಳಿಸಿದ್ದು ಇದಕ್ಕೆ ತಾಜಾ ಉದಾಹರಣೆ. ಈಗ ‘ಡಾಕ್ಟರ್​ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್​ನೆಸ್​’ ಸಿನಿಮಾ (Doctor Strange in the Multiverse of Madness)  ತೆರೆಗೆ ಬರುತ್ತಿದೆ. ‘ಡಾಕ್ಟರ್​ ಸ್ಟ್ರೇಂಜ್​’ ಚಿತ್ರದ ಸೀಕ್ವೆಲ್ ಇದಾಗಿದ್ದು, ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದೆ. ಮೇ 6ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಅದಕ್ಕೂ ಮೊದಲು ಸಿನಿಮಾದ ಕ್ಲಿಪ್ ಒಂದು ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ದೂರುಗಳ ಸುರಿಮಳೆ ಬಂದಿದೆ.

ಬೆನೆಡಿಕ್ಟ್​ ಕಂಬರ್​​ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸ್ಪೈಡರ್ ಮ್ಯಾನ್​: ನೋ ವೇ ಹೋಮ್​’ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಮಾರ್ವೆಲ್​ ಸರಣಿಯ ‘ಡಾಕ್ಟರ್​ ಸ್ಟ್ರೇಂಜ್ ಇನ್​ ​ ದಿ ಮಲ್ಟಿವರ್ಸ್​ ಆಫ್ ಮ್ಯಾಡ್​ನೆಸ್​’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಮೂಲಕ ಹೊಸ ಮಾರ್ವೆಲ್ ಪಾತ್ರಗಳನ್ನು ಪರಿಚಯಿಸುವ ಆಲೋಚನೆ ನಿರ್ಮಾಣ ಸಂಸ್ಥೆಗೆ ಇದೆ ಎನ್ನಲಾಗಿದೆ.  ಟ್ರೇಲರ್ ಮೂಲಕ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗ ವೈರಲ್ ಆಗುತ್ತಿರುವ ಕ್ಲಿಪ್ ನೋಡಿ ಫ್ಯಾನ್ಸ್ ಸಿಜಿಐ ಬಗ್ಗೆ ದೂರುತ್ತಿದ್ದಾರೆ.

ಹೊಸ ವಿಡಿಯೋದಲ್ಲಿ ಸಖತ್ ಆ್ಯಕ್ಷನ್ ಇದೆ. ಹೀರೋ ಹಾಗೂ ವಿಲನ್ ನಡುವಿನ ಫೈಟ್ ದೃಶ್ಯ ಇದರಲ್ಲಿದೆ. ಕೆಲವರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಆದರೆ, ಕೆಲವರು ಸಿಜಿಐ ಬಗ್ಗೆ ದೂರು ನೀಡಿದ್ದಾರೆ. ‘ದೃಶ್ಯಗಳು ಸರಿಯಾಗಿ ಮೂಡಿ ಬಂದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನನಗೆ ಸಿಜಿಐ ಇಷ್ಟವಾಗಿಲ್ಲ. ನಾನು ದೂರುತ್ತಿಲ್ಲ. ಆದರೆ ಇನ್ನೂ ಕೆಲವು ತಿಂಗಳು ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಸಬಹುದಿತ್ತು’ ಎನ್ನುವ ಮಾತುಗಳನ್ನು ಅಭಿಮಾನಿಗಳು ಹೇಳಿದ್ದಾರೆ.

‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ ಚಿತ್ರದಲ್ಲಿ ಬರುವ ಪಾತ್ರವೊಂದು ಗೇ. ಈ ಕಾರಣಕ್ಕೆ ಸಿನಿಮಾವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಪ್ರದರ್ಶನ ಮಾಡದಂತೆ ಸೂಚನೆ ನೀಡಿದೆ ಎಂಬ ವಿಚಾರ ಇತ್ತೀಚೆಗೆ ಸುದ್ದಿ ಆಗಿತ್ತು. ಸ್ಯಾಮ್ ರೈಮಿ ಅವರು ‘ಡಾಕ್ಟರ್​ ಸ್ಟ್ರೇಂಜ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸ್ಪೈಡರ್ ಮ್ಯಾನ್’ ಟ್ರಿಲಜಿಯನ್ನು ನಿರ್ದೇಶನ ಮಾಡಿದ ಖ್ಯಾತಿ ಇವರಿಗೆ ಇದೆ. ಸೌದಿ ಅರೇಬಿಯಾದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ರದ್ದು ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಇದನ್ನು ಅಲ್ಲಗಳೆದಿತ್ತು.

TV9 Kannada


Leave a Reply

Your email address will not be published. Required fields are marked *