ಚೀನಾ ದೇಶ ವೈರಸ್ ಹರಡುವ ಮೂಲಕ ಜಗತ್ತಿನ ಆರ್ಥಿಕತೆಯನ್ನೇ ಹಳಿತಪ್ಪಿಸಿದೆ ಎಂದು ಆರೋಪಿಸಿರುವ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್.. ಯುಎಸ್, ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ಪರಿಹಾರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಚೀನಾ ಜಗತ್ತಿಗೇ ಕೊರೊನಾ ಸೋಂಕು ಹಂಚಿದ ಹೊಣೆ ಹೊತ್ತು ಯುನೈಟೆಡ್ ಸ್ಟೇಟ್ಸ್​ಗೆ 10 ಟ್ರಿಲಿಯನ್ ಯುಎಸ್​ ಡಾಲರ್ ಹಣ ನೀಡಬೇಕೆಂದು ಟ್ರಂಪ್ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಟ್ರಂಪ್.. ಚೀನಾ ನಮಗೆ ಭಾರೀ ಹಣ ಕೊಡಬೇಕಿದೆ. ಅವರು ಮಾಡಿದ್ದರಿಂದಾಗಿ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಇದನ್ನು ನಾನು ಆ್ಯಕ್ಸಿಡೆಂಟ್ ಎಂದು ಕರೆಯುತ್ತೇನೆ. ಕೆಲವು ದೇಶಗಳು ಈ ಹಿಂದೆ ಇದ್ದ ಪರಿಸ್ಥಿತಿಗೆ ಮರಳುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ನಮ್ಮ ದೇಶವೂ ಸಹ ಭಾರೀ ಹೊಡೆತ ತಿಂದಿದೆ. ಆದರೆ ಬೇರೆ ದೇಶಗಳು ನಮಗಿಂತಲೂ ಹೆಚ್ಚು ಹೊಡೆತ ತಿಂದಿವೆ ಎಂದು ಹೇಳಿದ್ದಾರೆ.

The post ವೈರಸ್ ಹರಡಿದ್ದಕ್ಕಾಗಿ ಚೀನಾ ಎಲ್ಲ ದೇಶಗಳಿಗೂ ಪರಿಹಾರ ನೀಡಬೇಕು- ಗುಡುಗಿದ ಟ್ರಂಪ್ appeared first on News First Kannada.

Source: newsfirstlive.com

Source link