ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು   | Diversified diets are important tools to ensure adequate supply of protein for children


ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು  

ಪ್ರಾತಿನಿಧಿಕ ಚಿತ್ರ

ಶಾಲಾ ಮಕ್ಕಳಲ್ಲಿ ಇಂತಹ ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು 2001 ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಚಯಿಸಿತು.

ಸಾಕಷ್ಟು ಪ್ರಮಾಣದ ಆಹಾರ ಲಭ್ಯತೆಯ ಹೊರತಾಗಿಯೂ, ಭಾರತದ ಮಕ್ಕಳು ಕಳಪೆ ಪೋಷಣೆಯಿಂದ ಬಳಲುತ್ತಿದ್ದಾರೆ. ಪ್ರೋಟೀನ್ಶಕ್ತಿ ಅಪೌಷ್ಟಿಕತೆಯ ಭೀಕರ ಕಾಯಿಲೆಯಿಂದಾಗಿ 2014 15ರಲ್ಲಿ ಶೇ37ರಷ್ಟು ಭಾರತೀಯ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದರೆ, ಶೇ 21ರಷ್ಟು ಮಕ್ಕಳು ಕೃ‍ಶವಾದ ದೇಹ ಹೊಂದಿದ್ದರು. ಮತ್ತು ಶೇ 34ರಷ್ಟು ಮಕ್ಕಳು ಕಡಿಮೆ ತೂಕ ವನ್ನು ಹೊಂದಿದ್ದರು. ಸಾಂಕ್ರಾಮಿಕ ಸಮಯದಲ್ಲಿಇದು ಉಲ್ಬಣಗೊಂಡಿರುವ ಸಾಧ್ಯತೆಯಿದೆ ಎನ್ನುವುದು ದುಃಖದ ಸಂಗತಿಯಾಗಿದೆ. ಭಾರತೀಯ ಮನೆಗಳಲ್ಲಿ ಅಕ್ಕಿ ಮತ್ತು ಗೋಧಿಯಂತಹ ಪ್ರಧಾನ ಧಾನ್ಯಗಳ ಸೇವನೆಯ ಮೇಲಿನ ಪಟ್ಟುಬಿಡದ ಗಮನವು ಆಹಾರ ಕ್ರಮಗಳಲ್ಲಿನ ವೈವಿಧ್ಯತೆಯನ್ನು ಮತ್ತು ದೇಹದ ಕಾರ್ಯಗಳನ್ನು ಸಮತೋಲನಗೊಳಿಸಲು ಸಮಾನವಾಗಿ ನಿರ್ಣಾಯಕವಾಗಿರುವ ಇತರ ಪೋಷಕಾಂಶಗಳ ಸೇವನೆಯನ್ನು ತಡೆಯುತ್ತಿದೆ. ರಾಷ್ಟ್ರೀಯ ನ್ಯೂಟ್ರಿಷನ್ಮಾನಿಟರಿಂಗ್ಬೋರ್ಡ್‌ನ (ಎನ್‌ಎನ್‌ಎಮ್‌ಬಿ) ಸಮೀಕ್ಷೆಗಳು ಭಾರತೀಯ ಆಹಾರಕ್ರಮಗಳು ತಮ್ಮ ಪ್ರೋಟೀನ್‌ನ ಸುಮಾರು ಶೇ 60ರಷ್ಟನ್ನು ಕಡಿಮೆ ಜೀರ್ಣ ಸಾಧ್ಯತೆ ಮತ್ತು ಗುಣಮಟ್ಟವನ್ನು ಹೊಂದಿರುವ ಧಾನ್ಯಗಳಿಂದ ಪಡೆಯುತ್ತವೆ ಎಂದು ತೋರಿಸುತ್ತವೆ.

“ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಾಕಷ್ಟು ಹೆಚ್ಚಾಗಿ ಮತ್ತು ವ್ಯಾಪಕವಾಗಿ ಇರುವುದರಿಂದ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ವಿಶೇಷ ಗುರಿಯನ್ನು ಹೊಂದಿದ ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು. ನಾವು ತಿನ್ನುವ ಆಹಾರದ ಗುಣಮಟ್ಟಕ್ಕೆ ಮೌಲ್ಯವನ್ನು ಸೇರಿಸುವುದು ಹಾಗೂ ಸಿರಿಧಾನ್ಯಗಳು ಮತ್ತು ಬೇಳೆ-ಕಾಳುಗಳಂತಹ ವೈವಿಧ್ಯಮಯ ಮೂಲಗಳನ್ನು ಬಳಸುವುದು ಬಹಳ ಮುಖ್ಯ ಎಂದು ಐಸಿಎಆರ್​ ನ್ಯಾಷನಲ್ಬ್ಯೂರೋ ಆಫ್ಪ್ಲಾಂ ಟ್ಜೆನೆಟಿ ಕ್ರಿಸೋರ್ಸಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಕೆ.ಸಿ.ಬನ್ಸಲ್ ಹೇಳುತ್ತಾರೆ.

TV9 Kannada


Leave a Reply

Your email address will not be published. Required fields are marked *