ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಮಂತ್ ಇದೀಗ ವೈಷ್ಣವಿಗೆ ಚಿನ್ನ ಎಂದು ಕರೆಯುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟತ್ತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.

ಆಗ ನಿಧಿ ಎಷ್ಟು ಚಿನ್ನ ನಿನಗೆ ಎಂದು ಶಮಂತ್ ಕೇಳುತ್ತಾರೆ. ಆಗ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ. ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ವೈಷ್ಣವಿಗೆ ಹೇಳುತ್ತಾರೆ.

ನೀನು 6 ವರ್ಷ ವಿಲನ್‍ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ? ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ ಎಂದು ವಾಲಾಡುತ್ತಾ ಶಮಂತ್ ವೈಷ್ಣವಿಗೆ ಅಗ್ನಿ ಸಾಕ್ಷಿ ಸಿರಿಯಲ್ ಬಗ್ಗೆ ಮಾತನಾಡುತ್ತಾರೆ.

ಚಿನ್ನ ಆರುವರೆ ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

The post ವೈಷ್ಣವಿಗೆ ಚಿನ್ನ ಎಂದ ಶಮಂತ್ ! appeared first on Public TV.

Source: publictv.in

Source link