ವೈಷ್ಣವಿಗೆ ಬಹುಪರಾಕ್ ಎಂದ ಕುಚಿಕುಗಳು.. ಚಕ್ರವರ್ತಿಯಿಂದ ಹೊಸ ತಂತ್ರಗಾರಿಕೆ?

ವೈಷ್ಣವಿಗೆ ಬಹುಪರಾಕ್ ಎಂದ ಕುಚಿಕುಗಳು.. ಚಕ್ರವರ್ತಿಯಿಂದ ಹೊಸ ತಂತ್ರಗಾರಿಕೆ?

ಬಿಗ್​ ಬಾಸ್ ನೀಡಿದ​ ಟಂಕ ಶಾಲೆ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಅತೀ ಹೆಚ್ಚು ನೋಟ್​ನ್ನು ಮುದ್ರಿಸಿ ಮೊದಲ ಸಾಲಿನಲ್ಲಿ ಇದ್ದಾರೆ. ಹಾಗೇ ಎರಡನೇ ಸ್ಥಾನದಲ್ಲಿ ವೈಷ್ಣವಿ ಇದ್ದರೇ ಮೂರನೇ ಸ್ಥಾನದಲ್ಲಿ ಮಂಜು ಪಾವಗಾಡ ಇದ್ದಾರೆ.

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಇದೆ. ಪ್ರಶಾಂತ್​ ಹಾಗೂ ಚಂದ್ರಚೂಡ್,​ ವೈಷ್ಣವಿ ಅವರಿಗೆ ಬಹುಪರಾಕ್​ ಹೇಳುತ್ತಿದ್ದಾರೆ. ಹೌದು, ವಾರದ ಕೊನೆಯವರಿಗೆ ಯಾರು ಹೆಚ್ಚು ಹಣ ಗಳಿಸುತ್ತಾರೂ ಅವರು ಕ್ಯಾಪ್ಟನ್​ ಆಯ್ಕೆಗೆ ನಡೆಯುವ ಟಾಸ್ಕ್​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಹೀಗಾಗಿ ಎಲ್ಲರೂ ಅವರ ಅವರ ಬೆಸ್ಟ್​ ನೀಡಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಇಲ್ಲಿ ಒಂದು ಸ್ಟಾರ್ಟಜಿ ನಡೀತಿದೆ. ಪ್ರಶಾಂತ್​ ಹಾಗೂ ಚಂದ್ರಚೂಡ್​ ಮಾತನಾಡಿಕೊಳ್ಳುತ್ತಾರೆ. ನಮ್ಮ ಬೆಸ್ಟ್​ ಕೊಡುವುದು. ಒಂದು ವೇಳೆ ನಮ್ಮ ಹಣವನ್ನು ಬೇರೆಯವರಿಗೆ ಕೊಡಬೇಕು ಎಂದರೇ ವೈಷ್ಣವಿ ಅವರಿಗೆ ಕೊಡೋಣ. ಅವಳನ್ನು ಗೆಲ್ಲಿಸುವುದು. ಈ ಕುರಿತು ವೈಷ್ಣವಿ ಅವರಿಗೆ ಕೂಡ ಹೇಳುತ್ತಾರೆ.

ಇದು ವೀಕ್ಷಕರಲ್ಲಿ ಒಂದು ಕೂತಹಲ ಹುಟ್ಟಿಸಿದ್ದು, ಇದರ ಹಿಂದಿನ ಮರ್ಮವೇನು? ಯಾರು ಗೆಲ್ಲುತ್ತಾರೆ, ಇನ್ನೂ ಏನೇನು ನಡೆಯುತ್ತದೆ ನೋಡೋಣ.

The post ವೈಷ್ಣವಿಗೆ ಬಹುಪರಾಕ್ ಎಂದ ಕುಚಿಕುಗಳು.. ಚಕ್ರವರ್ತಿಯಿಂದ ಹೊಸ ತಂತ್ರಗಾರಿಕೆ? appeared first on News First Kannada.

Source: newsfirstlive.com

Source link