ಬಿಗ್‌ಬಾಸ್‌ ಮನೆಯಲ್ಲಿ ಈಗೇನಿದ್ದರೂ ವೈಯಕ್ತಿಕ ಟಾಸ್ಕ್​ಗಳ ಸದ್ದು. ನೀನಾ ನಾನಾ ಟಾಸ್ಕ್​ನ ಅಂಕ ಗಳಿಕೆಗೆ ಬಿಗ್​ ಬಾಸ್​ ಏನಾಗಲಿ ಮುಂದೆ ಓಡು ನೀ ಟಾಸ್ಕ್​ನಲ್ಲಿ ವೈಷ್ಣವಿ ಮತ್ತು ಪ್ರಶಾಂತ್​ ನಡುವೆ ಭಿನ್ನಭಿಪ್ರಾಯ ಉಂಟಾಗಿದೆ.

ಥರ್​ಮೋಕೋಲ್ ತುಂಬಿರುವ ಗೋಣಿಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಆಕ್ಟಿವಿಟಿ ಏರಿಯಾದಲ್ಲಿ ಓಡಬೇಕು. ಅವರವರ ಚೀಲವನ್ನು ಕಾಪಾಡಿಕೊಂಡು ಮುಂದಿನ ಸದಸ್ಯರ ಚೀಲವನ್ನು ಖಾಲಿ ಮಾಡಬೇಕಿತ್ತು. ಪ್ರಶಾಂತ್ ಮುಂದೆ ವೈಷ್ಣವಿ ಓಡುತ್ತಿರುತ್ತಾರೆ. ಹೀಗಾಗಿ ಪ್ರಶಾಂತ್​ ವೈಷ್ಣವಿಯ ಗೋಣಿಚೀಲವನ್ನು ಖಾಲಿ ಮಾಡಲು ಪ್ರಯತ್ನಿಸುವ ಭರದಲ್ಲಿ ಚೀಲವನ್ನು ಎಳೀತಿದ್ದಾರೆ ಎಂದು ವೈಷ್ಣವಿ ಆರೋಪಿಸುತ್ತಾರೆ. ಇದಕ್ಕೆ ಪ್ರಶಾಂತ್​, ನಾನು ಜಂಟಲ್​ಮೆನ್​ ತರಹ ಆಡಲು ಪ್ರಯತ್ನ ಪಡ್ತಿದ್ದೀನಿ. ಆದ್ರೆ ನೀನೇ ಹಗ್ಗನಾ ಕುತ್ತಿಗೆಗೆ ಕಟ್ಟಿಕೊಂಡಿದ್ದೀಯಾ, ಹೀಗಾಗಿ ನಿಂಗೆ ನೋವಾಗ್ತಿದೆ. ಇದು ನನ್ನ ತಪ್ಪಲ್ಲ. ನಾನು ಆಟ ಆಡ್ತಿದ್ದೀನಿ ಅಂತಾರೆ.

 

 

ಇದಕ್ಕೆ ವೈಷ್ಣವಿ ಕೋಪ ಮಾಡಿಕೊಂಡು ಆಟದಿಂದ ಹೊರನಡೆಯುತ್ತಾರೆ. ಆದ್ರೆ ಕ್ಯಾಪ್ಟನ್​ ದಿವ್ಯಾ ಸುರೇಶ್​ ವೈಷ್ಣವಿಯನ್ನು ಕನ್ವಿನ್ಸ್​ ಮಾಡಿ ಮತ್ತೆ ಆಡಲು ಪ್ರೇರೇಪಿಸುತ್ತಾರೆ. ಸೆಕೆಂಡ್​ ಟೈಮ್​ನಲ್ಲಿ ಕೂಡಾ ಪ್ರಶಾಂತ್​ ಅವರ ವರ್ತನೆ ರಿಪೀಟ್​ ಆಗಿದ್ದನ್ನು ಕಂಡ ವೈಷ್ಣವಿ, ಪ್ರಶಾಂತ್​ ಮೇಲೆ ಕೈ ಎತ್ತುತ್ತಾರೆ.

ಈ ಕುರಿತು ಚಕ್ರವರ್ತಿ ಮುಂದೆ ಪ್ರಶಾಂತ್​ ಬೇಸರ ವ್ಯಕ್ತಪಡಿಸುತ್ತಾರೆ. ವೈಷ್ಣವಿ ನನ್ನ ಮೇಲೆ ಕೈ ಮಾಡಿದ್ಳು. ನನಗೆ ಅಸಹ್ಯ ಆಯ್ತು. ಹುಡುಗಿ ಕೈ ಮಾಡ್ತಿದ್ದಾಳಲ್ಲಪ್ಪಾ ಅಂತಾ ಇನ್ಸಲ್ಟ್​ ಆಯ್ತು. ಅವಳ ಬಗ್ಗೆ ನನಗೆ ಗೌರವವಿದೆ. ಆದ್ರೆ ಗಂಡ್ಮಕ್ಕಳ ಮೇಲೆ ಕೈ ಮಾಡಿದ್ರೆ ನಂಗೆ ತುಂಬಾ ಸಿಟ್ಟು ಬರುತ್ತೆ. ಅದಕ್ಕೆ ಹಾಳಾಗಿ ಹೋಗ್ಲಿ ಅಂತಾ ಬಿಟ್ಟು ಬಿಟ್ಟೆ ಅಂತಾರೆ.

 

 

 

ಇದಕ್ಕೆ ಚಕ್ರವರ್ತಿ ನಿನ್ನ ಮೇಲೆ ಕೈ ಎತ್ತಿದಾಗ ಏನಪ್ಪಾ ವೈಷ್ಣವಿ ಹಿಂಗ್​ ಆಡ್ತಿದ್ದಾಳೆ ಎಂದು ನಕ್ಕಿದ್ವಿ. ನೀನು ಅವಳ ಚೀಲ ಬೇಗ ಖಾಲಿ ಮಾಡಿದ್ರೆ ನಂಗೆ ಹೆಲ್ಪ್​ ಆಗ್ತಿತ್ತು. ನೀನು ಸರಿಯಾಗಿ ಆಡಲಿಲ್ಲ.. ಅದಕ್ಕೆ ನಂಗೆ ಕೋಪ ಬಂದು ಆಟ ಆಡೋದೇ ಬೇಡ ಅಂತಾ ಗಿವ್​ಅಪ್​ ಮಾಡಿದೆ ಎಂದು ಹೇಳುತ್ತಾರೆ.

ಇನ್ನೊಂದು ಕಡೆ ವೈಷ್ಣವಿ ಮತ್ತು ಪ್ರಶಾಂತ್ ಈ ಕುರಿತು ಕ್ಲಾರಿಫೈ​ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ವೈಷ್ಣವಿ, ನಿಮ್ಮ ಮೇಲೆ ಕೈ ಮಾಡಿದ್ದಕ್ಕೆ ಸಾರಿ. ಆದ್ರೆ ನೀವು ಮಾಡಿದ್ದು ತಪ್ಪು. ನನ್ನ ಜೊತೆ ಆಡಿದ ಹಾಗೆ ಶಮಂತ್​ ಜೊತೆ ಆಡಲಿಲ್ಲ. ಯಾಕೆ ಅಂತಾ ಎಲ್ಲರಿಗೂ ಗೊತ್ತಾಗುತ್ತಿತ್ತು. ಎನಿ ವೇ ನಾನು ಇದನ್ನು ಕ್ಯಾರಿ ಮಾಡುವುದಿಲ್ಲ. ನಿಮ್ಮ ಆಟ ನೀವು ಆಡಿದ್ದರೆ ನಾನು ಇನ್ನೂ ಚೆನ್ನಾಗಿ ಆಡಬಹುದಿತ್ತು ಅಂತಾರೆ.

ಒಟ್ನಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದಿದ್ದು, ಇನ್ನೂ ವಾರದ ಟಾಸ್ಕ್​ ಕಂಪ್ಲೀಟ್​ ಮಾಡಲು 3 ದಿನಗಳು ಬಾಕಿ ಇದ್ದು, ಮುಂದಿನ ಆಟಗಳಲ್ಲಿ ಯಾವರೀತಿ ಟಾಸ್ಕ್​ಗಳನ್ನು ನಿಭಾಯಿಸುತ್ತಾರೆ ನೋಡೋಣ.

The post ‘ವೈಷ್ಣವಿ ನನ್ನ ಮೇಲೆ ಕೈ ಮಾಡಿದ್ಳು’.. ಕುಚಿಕು ಮುಂದೆ ಸಿಟ್ಟು ಹೊರಹಾಕಿದ ಪ್ರಶಾಂತ್ appeared first on News First Kannada.

Source: newsfirstlive.com

Source link