ಬಿಗ್‍ಬಾಸ್ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‍ರವರು ವೈಷ್ಣವಿಯವರ ಬಗ್ಗೆ ಹೊಂದಿದ್ದ ಅಭಿಪ್ರಾಯವನ್ನು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಆಗ ವೈಷ್ಣವಿಯವರು ಏನದು ಎಂದು ಕುತೂಹಲದಿಂದ ಕೇಳಿದ್ದಾರೆ. ಆಗ ಸುದೀಪ್ ನೀವು ಒಳ್ಳೆ ಕಲಾವಿದೆ ಅಂತ ಗೊತ್ತಿತ್ತು. ರೇಷ್ಮೆ ಸೀರೆ ಉಟ್ಟಿಕೊಳ್ಳುವುದ ಮಾತ್ರವಲ್ಲ ಕೈನ್ಲಲಿ ಕೂಡ ಸದಾ ಹಿಡಿದುಕೊಂಡಿರುತ್ತೀರಾ ಎಂದು ತೋರಿಸಿಕೊಟ್ರಿ. ಆದರೆ ಇಷ್ಟು ಚೆನ್ನಾಗಿ ಹಾಡು ಹೇಳುತ್ತೀರಾ ಎಂದು ಗೊತ್ತಿರಲಿಲ್ಲ. ಶಮಂತ್ ಹತ್ತಿರ ಹಾಡು ಹೇಳಿಸಿ, ನಿಮ್ಮ ಹತ್ತಿರ ಹಾಡು ಹಾಡಿಸಲಿಲ್ಲ ಎಂದರೆ ನ್ಯಾಯ ಅಲ್ಲ. ಹಾಗಾಗಿ ನಮಗೋಸ್ಕರ ಒಂದು ಹಾಡು ಹೇಳಿ ಎಂದು ಕೇಳಿದ್ದಾರೆ.

ಈ ವೇಳೆ ವೈಷ್ಣವಿ ನಾಚುತ್ತಾ ನನಗೆ ನಾಯರೇ ನಾಯರೇ ಸಾಂಗ್ ಒಂದೇ ಹೇಳಲು ಬರುವುದು ಎಂದು ಹಾಡು ಹಾಡಿದ್ದಾರೆ. ನಂತರ ಹಾಡಿನ ಸಾಲನ್ನು ಕೇಳಿ ಒಂದೇ ಹಾಡಿನಲ್ಲಿ ಎಲ್ಲವನ್ನು ಎಲ್ಲರಿಗೂ ಹೇಳಿಬಿಟ್ರಿ. ಅದನ್ನು ಎಲ್ಲರೂ ಹಾಡು ಅಂದುಕೊಂಡರು, ಆದರೆ ನಾಯಿರೇ ಈ ಹಾಡಿನಲ್ಲಿ ಏನು ಅರ್ಥ ಆಯ್ತು ಮಂಜು ಎಂದು ಸುದೀಪ್ ಹೇಳಿದ್ದಾರೆ.

ಇದಕ್ಕೆ ಮಂಜು ಅದರಲ್ಲಿ ಬರುವ ನಾಯಿ ಎಂಬ ಮೊದಲ ಪದ ನನಗೆ ಅನಿಸುತ್ತದೆ ಎನ್ನುತ್ತಾರೆ. ಆಗ ಸುದೀಪ್ ನಾಯಿ ಮನದಾಳದ ಮಾತು, ರೇ- ರೇಷ್ಮೆ ಸೀರೆ ಎಂದು ಸುದೀಪ್ ರೇಗಿಸುತ್ತಾರೆ. ನಂತರ ಮತ್ತೆ ನಾಯಿ ರೇ, ನಾಯಿ ರೇ ಎಂದು ವೈಷ್ಣವಿ ಹಾಡು ಹೇಳುತ್ತಾ ಉಪ್ಪಿನಂತೆ ಗಟ್ಟಿ ಈ ನನ್ನ ಮನಸ್ಸು ಎನ್ನುತ್ತಾರೆ. ಈ ವೇಳೆ ಮಂಜು, ಕರೆಕ್ಟ್ ಆಗಿ ಸಾಂಬರ್‍ಗೆ ಉಪ್ಪನ್ನು ಹಾಕುವುದಿಲ್ಲ. ಮನಸ್ಸಿನಲ್ಲಿಯೇ ಉಪ್ಪು, ಹುಳಿ, ಖಾರ ಎಲ್ಲವನ್ನು ಸರಿಯಾಗಿ ಹಾಕುತ್ತಾರೆ ಎಂದಿದ್ದಾರೆ.

ನನ್ನ ಕಥೆಗೆ ಬಂದ್ರೆ ಅವನು ಅಲ್ಲೇ ಉಡಿಸ್ ಎಂದು ವೈಷ್ಣವಿ ಹೇಳಿದಾಗ, ಇದರ ಅನುಭವ ನನಗೆ ಸಿಕ್ಕಾಪಟ್ಟೆ ಆಗಿದೆ ಎಂದು ಮಂಜು ಹೇಳುತ್ತಾರೆ. ಬಳಿಕ ಇಕ್ಕು, ಇಕ್ಕು, ಒಂದೇ ಇಕ್ಕು, ಚಿಂದಿ ಉಡಾಯಿಸು ಎಂದಾಗ, ಆಗಾಗ ವೈಷ್ಣವಿ ಇಕ್ಕುತ್ತಾನೆ ಇರುತ್ತಾಳೆ ಎಂದು ಮಂಜು ಹಾಸ್ಯ ಮಾಡಿದ್ದಾರೆ.

ಕೊನೆಯದಾಗಿ ಸುದೀಪ್ ಒಂದೇ ಒಂದು ಹಾಡಿನಲ್ಲಿ ಎಂತೆಂಥಹ ಸಿಂಗರ್ಸ್ ನನ್ನು ವೈಷ್ಣವಿ ಸೈಡಿಗೆ ಹಾಕಿದ್ರು, ಹಾಡು ತುಂಬಾ ಚೆನ್ನಾಗಿದೆ ವೈಷ್ಣವಿಯವರೇ, ಮುಂದಿನ ವಾರ ಯಾವುದು ಬರುತ್ತದೆ ನೋಡೋಣಾ ಎಂದು ತಮಾಷೆ ಮಾಡಿದರು. ಈ ವೇಳೆ ಮನೆ ಮಂದಿಯೆಲ್ಲಾ ವೈಷ್ಣವಿ ಹಾಡನ್ನು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ಪ್ರಿಯಾಂಕಾ ಔಟ್

The post ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್ appeared first on Public TV.

Source: publictv.in

Source link