ವೈಷ್ಣವಿ ವರ್ಸಸ್‌ ಚಂದ್ರಚೂಡ್‌! ಢಮ್ ಢಮಾರ್!

ವೈಷ್ಣವಿ ವರ್ಸಸ್‌ ಚಂದ್ರಚೂಡ್‌! ಢಮ್ ಢಮಾರ್!

ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ವಿಚಾರಗಳು ಸ್ಪರ್ಧಿಗಳ ನಡುವೆ ಸಮರಕ್ಕೆ ಕಾರಣವಾಗ್ತಿದೆ. ಶೋ ಅರ್ಧಕ್ಕೆ ಮುಗಿದ್ಮೇಲೆ ಎಲ್ಲರೂ ನೀಡಿದ್ದ ಇಂಟರ್‌ವ್ಯೂಗಳ ಆರೋಪ ಪ್ರತ್ಯಾರೋಪಗಳೇ ಬಿಗ್‌ಬಾಸ್ ಮನೆಯ ಸದ್ಯ ಚರ್ಚಾ ವಿಷಯವಾಗಿದೆ.

ಬೆಡ್​ರೂಮ್​ ಏರಿಯಾದಲ್ಲಿ ವೈಷ್ಣವಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ಈ ಕುರಿತು ವಾದ ಪ್ರತಿವಾದವೇ ನಡೆಯಿತು. ಸಂದರ್ಶನಗಳಲ್ಲಿ ಮಾತನಾಡಿದ ವಿಚಾರದ ಬಗ್ಗೆ ವೈಷ್ಣವಿ ಅಸಮಾಧಾನ ವ್ಯಕ್ತಪಡಿಸಿದರು. ನೀವು ಬಿಗ್​ಬಾಸ್​ ಮನೆಯಲ್ಲಿ ಒಟ್ಟು ಮೂರು ಜೋಡಿಗಳಿವೆ, ಆ ಜೋಡಿಗಳಿಗೆ ತಾಳಿ ತಂದು ಕೊಡಬೇಕು ಅಂತಾ ಹೇಳಿದ್ರಿ. ಆ ಒಂದು ವಿಡಿಯೋ ನೋಡಿ ನನಗೆ ತುಂಬಾ ಬೇಜಾರಾಯ್ತು ಅಂತಾ ಹೇಳ್ತಾರೆ. ಅದಕ್ಕೆ ಚಕ್ರವರ್ತಿ, ನಾನೂ ಹಾಗೆ ಹೇಳಿಲ್ಲಾ.. ಮೂರು ಜೋಡಿಗಳಿವೇ ಆದ್ರೆ ಅವರು ಒಬ್ಬರಿಗೊಬ್ಬರು ನೆರಳಾಗಿದ್ದಾರೆ ಅಂತಾ ಹೇಳ್ದೆ ಬೇಕಾದ್ರೆ ನೀವು ಇಲ್ಲಿಂದ ಹೋದಮೇಲೆ ಸರಿಯಾಗಿ ನೋಡಿ ಹಾಗೂ ಜನ ಬೇಕಾದ್ರೆ ಈಗ್ಲೇ ನೋಡ್ಲಿ ಅಂತಾ ಸ್ಪಷ್ಟನೆ ನೀಡ್ತಾರೆ.

ನಾನು ಇಂಟರ್​ವ್ಯೂವ್​ನಲ್ಲಿ ಹೇಳಿದ್ದು ಇಷ್ಟೇ… ಊಟದ ವಿಚಾರದಲ್ಲಿ ವೈಷ್ಣವಿ ಅಮ್ಮ ಹಾಗೂ ವೈಷ್ಣವಿ ಗಂಡಾಗಿ ಹುಟ್ಟಿದ್ರು ರಘು ತರ ಆಗಲ್ಲಾ ಅಂತಾ ಹೇಳ್ದೆ ಅಂತಾ ಚಕ್ರವರ್ತಿ ಚಂದ್ರಚೂಡ್​ ಹೇಳ್ತಾರೆ. ಪ್ರಶಾಂತ್​ ಸಂಬರಗಿ ನನಗೂ ಪ್ರಿಯಾಂಕಕ್ಕೆ ಸೇರಿಸಿ ಮಾತನಾಡಿದ. ಅದು ಸರಿಯಲ್ಲ. ಒಂದು ಹೆಣ್ಣು ಮಗಳ ಬಗ್ಗೆ ಹೀಗೇ ಮಾತಾಡೋದು ಸರಿಯಲ್ಲ ಅಂತಾ ಹೇಳ್ತಾರೆ. ಅದಕ್ಕೆ ಅರವಿಂದ್​ ಹಾಗೂ ವೈಷ್ಣವಿ, ನೀವು ನನ್ನ ಬಗ್ಗೆ ಹೇಳಿದ್ದು ಸರಿಯೇ ಎಂದು ಪ್ರಶ್ನಿಸುತ್ತಾರೆ.

ಈ ವೇಳೆ ಮಾತನಾಡಿದ ವೈಷ್ಣವಿ, ​ ಮನುಷ್ಯ ಅಂದ್ರೆ ಸೋಶಿಯಲ್​ ಹ್ಯೂಮನ್​ ಬೀಯಿಂಗ್. ಈ ಶೋ ಮುಗಿದ ಮೇಲೆ ಏನಾಗತ್ತೆ? ಜೀವನ ಎಲ್ಲಿ ಹೋಗತ್ತೆ ಗೊತ್ತಾಗಲ್ಲಾ? ಈ ಮನೆಯಲ್ಲಿ ಇರೊದ್ರಿಂದ ನಾನೂ ದಿವ್ಯಾ ಮಾತನಾಡ್ತಿವಿ ಅಂದ್ರೆ ನಮ್ಮಿಬ್ಬರ ಮಧ್ಯೆ ಸಂಬಂದ ಇದೆ ಅಂತಾ ಅಲ್ಲ. ಜಸ್ಟ್​ ಕಂಫರ್ಟ್​ ಜ್ಹೋನ್‌ನಲ್ಲಿ ಇದ್ದೀವಿ​ ಅಂತಾ ಅರ್ಥ ಅಷ್ಟೇ ಅಂತಾ ಹೇಳ್ತಾರೆ. ಅದಕ್ಕೆ ಚಕ್ರವರ್ತಿ ನೋಡಿ ನಾನೂ ಆ ವಿಷಯದಲ್ಲಿ ನಿಮ್ಮಕಿಂತ ಜಾಸ್ತಿ ಯೋಚ್ನೆ ಮಾಡ್ತೀನಿ ಅಂತಾ ಹೇಳಿದರು. ಹೀಗೇ ವೈಷ್ಣವಿ ಹಾಗೂ ಚಂದ್ರಚೂಡ್‌ ನಡುವೆ ದೊಡ್ಡ ಮಾತುಕತೆಯೇ ನಡೆಯಿತು. ಅದ್ಯಾಕೋ ಏನೋ ಚಂದ್ರಚೂಡ್‌ ಸ್ಪಷ್ಟನೆ ನೀಡಿದ್ರೂ ಯಾರು ಕೇಳೋ ಸ್ಥಿತಿಯಲ್ಲಿರಲಿಲ್ಲ.

The post ವೈಷ್ಣವಿ ವರ್ಸಸ್‌ ಚಂದ್ರಚೂಡ್‌! ಢಮ್ ಢಮಾರ್! appeared first on News First Kannada.

Source: newsfirstlive.com

Source link