ವೋಟ್​​ ಬ್ಯಾಂಕ್​​ ಮೇಲೆ ಕಣ್ಣು; ಕಾಂಗ್ರೆಸ್​ ಕಾರ್ಯಕಾರಣಿ ಸಮಿತಿಯಲ್ಲಿ ಲಿಂಗಾಯತರಿಗೆ ಬಂಪರ್..!

ಬೆಂಗಳೂರು: 2023ರ ಸಾರ್ವತ್ರಿಕ ಚುನಾವಣೆ ಗೆಲ್ಲಲು ಲಿಂಗಾಯತ ಮತ ಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್​​ ಸಮುದಾಯದ ಪ್ರಮುಖರಿಗೆ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯಲ್ಲಿ (CWC) ಸ್ಥಾನ ನೀಡಲಿದೆ. ಸದ್ಯದಲ್ಲೇ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರ ಪಟ್ಟಿ ಪ್ರಕಟಿಸಲಿದ್ದು, ಲಿಂಗಾಯತ ನಾಯಕರಿಗೆ ಬಂಪರ್ ಆಫರ್ ಸಿಗಲಿದೆ.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿಕೊಂಡಿದೆ. ರಾಜ್ಯದ ಲಿಂಗಾಯತ ನಾಯಕರಿಗೆ ಈ ಬಾರಿಯ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಲು ಹೈಕಮಾಂಡ್ ಸಜ್ಜಾಗಿದೆ.

ಇನ್ನು, ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಹೈಕಮಾಂಡ್​​ ಮಾಹಿತಿ ಪಡೆದಿದೆ. ಉಭಯ ನಾಯಕರಿಂದಲೂ ಲಿಂಗಾಯತ ಸಮುದಾಯಕ್ಕೆ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಲು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹೀಗಾಗಿ ಹಿರಿಯ ನಾಯಕರಾದ ಎಚ್​​.ಕೆ ಪಾಟೀಲ್, ಎಸ್​.ಆರ್​​ ಪಾಟೀಲ್, ಎಂ.ಪಿ ಪಾಟೀಲ್ ಈ ಮೂವರಲ್ಲಿ ಒಬ್ಬರಿಗೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸ್ಥಾನ ಫಿಕ್ಸ್​ ಆಗಿದೆ.

The post ವೋಟ್​​ ಬ್ಯಾಂಕ್​​ ಮೇಲೆ ಕಣ್ಣು; ಕಾಂಗ್ರೆಸ್​ ಕಾರ್ಯಕಾರಣಿ ಸಮಿತಿಯಲ್ಲಿ ಲಿಂಗಾಯತರಿಗೆ ಬಂಪರ್..! appeared first on News First Kannada.

News First Live Kannada

Leave a comment

Your email address will not be published. Required fields are marked *