ನವದೆಹಲಿ: ದೆಹಲಿಯಲ್ಲಿ ಜನರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ಕೆ ವೇಗ ನೀಡಲು ಅಲ್ಲಿನ ಸಿಎಂ ಅರವಿಂದ್ ಕೇಜ್ರಿವಾಲ್ ಹೊಸದೊಂದು ಕ್ಯಾಂಪೇನ್ ಆರಂಭಿಸಿದ್ದಾರೆ. ‘ಜಹಾ ವೋಟ್, ವಹಾ ವ್ಯಾಕ್ಸಿನೇಷನ್’ ಹೆಸರಿನಲ್ಲಿ ಈ ಕ್ಯಾಂಪೇನ್ ಆರಂಭಿಸಿದ್ದು ಜನರು ತಾವು ವೋಟ್​ ಮಾಡಿದ ಚುನಾವಣಾ ಮತಗಟ್ಟೆಯಲ್ಲಿಯೇ ವ್ಯಾಕ್ಸಿನ್ ವಿತರಿಸಲು ಮುಂದಾಗಿದೆ. ಅಲ್ಲದೇ ಶೀಘ್ರವೇ ಮನೆಬಾಗಿಲಿಗೇ ತೆರಳಿ ವ್ಯಾಕ್ಸಿನ್ ನೀಡುವ ಅಭಿಯಾನವನ್ನೂ ಆರಂಭಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಅಭಿಯಾನದಲ್ಲಿ 45 ವರ್ಷ ಮೀರಿದ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ ಎಂದಿದ್ದಾರೆ.

ವ್ಯಾಕ್ಸಿನ್ ಕೊರತೆ ಎದುರಾಗದಿದ್ದರೆ ಮುಂದಿನ 4 ವಾರಗಳಲ್ಲಿ ಎಲ್ಲಾ 45 ವರ್ಷ ಮೀರಿದವರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ. ಇಡೀ ರಾಜ್ಯದಲ್ಲಿ 45 ಮೀರಿದ 57 ಲಕ್ಷ ಜನರಿದ್ದಾರೆ, ಈ ಪೈಕಿ 27 ಲಕ್ಷ ಜನರಿಗೆ ಮೊದಲ ಡೋಸ್​ಗಳನ್ನ ನೀಡಲಾಗಿದೆ. ಉಳಿದ 30 ಲಕ್ಷ ಜನರಿಗೆ ಮೊದಲ ಡೋಸ್ ವ್ಯಾಕ್ಸಿನ್ ನೀಡಬೇಕಿದೆ ಎಂದಿದ್ದಾರೆ.

ದೆಹಲಿಯಲ್ಲಿ ಒಟ್ಟು 280 ವಾರ್ಡ್​ಗಳಿದ್ದು, ಒಂದು ವಾರಕ್ಕೆ 70 ವಾರ್ಡ್​ ಲೆಕ್ಕದಲ್ಲಿ ನಾಲ್ಕು ವಾರಗಳಲ್ಲಿ ಎಲ್ಲಾ ವಾರ್ಡ್​ಗಳ 45 ವರ್ಷ ಮೀರಿದ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಇದೇ ವೇಳೆ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.

The post ‘ವೋಟ್ ಹಾಕಿದ ಬೂತ್​ನಲ್ಲೇ ವ್ಯಾಕ್ಸಿನೇಷನ್’ ಕೇಜ್ರಿವಾಲ್ ಹೊಸ ಕ್ಯಾಂಪೇನ್ appeared first on News First Kannada.

Source: newsfirstlive.com

Source link