ನವದೆಹಲಿ: ಯುಎಸ್​ನ ಫಾರ್ಮಾಸಿಟಿಕಲ್ ದೈತ್ಯ ಫೈಜರ್ ತನ್ನ ಲಸಿಕೆಗೆ ಭಾರತದಿಂದ ಅನುಮತಿ ಪಡೆಯುವ ಕೊನೆಯ ಹಂತದಲ್ಲಿರುವುದಾಗಿ ಹೇಳಿಕೊಂಡಿದೆ.

ವರ್ಚುವಲ್ ಈವೆಂಟ್ ಒಂದರಲ್ಲಿ ಮಾತನಾಡಿದ ಫೈಜರ್​ನ ಮುಖ್ಯ ಎಕ್ಸಿಕ್ಯೂಟಿವ್ ಆಫೀಸರ್ ಆಲ್ಬರ್ಟ್ ಬೌರ್ಲಾ ಭಾರತ ಸರ್ಕಾರ ಶೀಘ್ರವೇ ನಮ್ಮ ಲಸಿಕೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಭರವಸೆ ಇದೆ ಎಂದಿದ್ದಾರೆ.

ಫೈಜರ್ ಭಾರತದ ಅನುಮತಿ ಪಡೆಯುವ ಕೊನೆಯ ಹಂತದಲ್ಲಿದೆ. ಶೀಘ್ರವೇ ಒಪ್ಪಂದವಾಗಲಿದೆ ಎಂಬ ನಂಬಿಕೆ ಎಂದು ಹೇಳಿಕೆ ನೀಡಿದ್ದಾರೆ. ಫೈಜರ್ ವ್ಯಾಕ್ಸಿನ್ ಜರ್ಮನ್​ನ ಬಯೋನ್​ಟೆಕ್​ ಸಹಯೋಗದೊಂದಿಗೆ ಫೈಜರ್ ಅಭಿವೃದ್ಧಿಪಡಿಸಿರುವ ಲಸಿಕೆಯಾಗಿದ್ದು ಇದು ಕೊರೊನಾ ಸೋಂಕಿನಿಂದ 90 ಪರ್ಸೆಂಟ್ ರಕ್ಷಣೆ ನೀಡುತ್ತದೆ ಎಂದು ಸಾಬೀತಾಗಿದೆ.

ಇತ್ತೀಚೆಗೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಫೈಜರ್ ಮತ್ತು ಮೊಡರ್ನಾ ಲಸಿಕೆಗಳಿಗೆ ಅನುಮತಿ ನೀಡುವ ಕುರಿತು ಗಮನಹರಿಸಲಾಗಿದೆ ಎಂದಿದ್ದರು.

The post ವ್ಯಾಕ್ಸಿನೇಷನ್​ಗೆ ಸಿಗಲಿದೆ ಮತ್ತಷ್ಟು ಬಲ: ಶೀಘ್ರವೇ ಫೈಜರ್​ ಲಸಿಕೆಗೆ ಅನುಮತಿ ಸಾಧ್ಯತೆ appeared first on News First Kannada.

Source: newsfirstlive.com

Source link