ನವದೆಹಲಿ: ಇಷ್ಟು ದಿನ ಕೋವಿಡ್​ ಲಸಿಕೆ ಪಡೆಯಬೇಕೆಂದರೆ ಮೊದಲಿಗೆ ಕೋವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಮೊಬೈಲ್​ಗೆ ಮೆಸೇಜ್ ಬಂದ ನಂತರವಷ್ಟೇ ತಿಳಿಸಿದ ದಿನಾಂಕ, ಸಮಯದಂದು ನಿಗದಿತ ವ್ಯಾಕ್ಸಿನ್ ಕೇಂದ್ರಕ್ಕೆ ತೆರಳಿ ವ್ಯಾಕ್ಸಿನ್ ಪಡೆಯಬೇಕಿತ್ತು. ಆದ್ರೆ ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಪಕ್ಷಗಳು ಕಳಕಳಿ ವ್ಯಕ್ತಪಡಿಸಿದ್ದವು.

ಇದೀಗ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರವೆಂಬಂತೆ ವ್ಯಾಕ್ಸಿನ್ ಪಡೆಯಲು ಕೋವಿನ್ ವೆಬ್​ಸೈಟ್​​​ನಲ್ಲಿ ನೋಂದಣಿ ಕಡ್ಡಾಯವಲ್ಲ ಎಂದು ಹೇಳಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ನೇರವಾಗಿ ವ್ಯಾಕ್ಸಿನ್ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

18 ವರ್ಷ ಮೇಲ್ಪಟ್ಟವರು ನೇರವಾಗಿ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ತೆರಳಿ ಸ್ಥಳದಲ್ಲೇ ನೋಂದಣಿ ಮಾಡುವ ವ್ಯಾಕ್ಸಿನೇಟರ್​ ಅವರನ್ನ ಸಂಪರ್ಕಿಸಿ ವ್ಯಾಕ್ಸಿನ್ ಪಡೆಯಬಹುದು. ಇದನ್ನು ವಾಕ್​ ಇನ್ಸ್ ಎಂದು ಕರೆಯಲಾಗುತ್ತದೆ. ಇನ್ನು ನೋಂದಣಿಗಾಗಿ ಗ್ರಾಮೀಣ ಮತ್ತು ನಗರಗಳ ಸ್ಲಮ್ ಏರಿಯಾಗಳಲ್ಲಿ ಆಶಾ ಕಾರ್ಯಕರ್ತೆಯರನ್ನ ನೇಮಿಸಲಾಗಿದ್ದು ಫಲಾನುಭವಿಗಳು ಇವರ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

The post ವ್ಯಾಕ್ಸಿನೇಷನ್​ ಈಗ ಮತ್ತಷ್ಟು ಸುಲಭ: ಕೋವಿನ್ ಪೋರ್ಟಲ್​ನಲ್ಲಿ ರೆಜಿಸ್ಟ್ರೇಷನ್ ಕಡ್ಡಾಯವಲ್ಲ appeared first on News First Kannada.

Source: newsfirstlive.com

Source link