ಕೊರೊನಾ ಮಾರಿ ದೇಶದಲ್ಲಿ ಸದ್ದಿಲ್ಲದೆ ತನ್ನ ಆರ್ಭಟವನ್ನ ಶುರು ಮಾಡಿಕೊಂಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ನಡುವೆ ಈ ಸೋಂಕನ್ನು ಆದಷ್ಟು ಬೇಗ ನಿಯಂತ್ರಣ ಮಾಡಬೇಕೆಂದು ಪಣ ತೊಟ್ಟಿರುವ ಸರ್ಕಾರ ಈಗಾಗಲೇ ಡಬಲ್ ಡೋಸ್ ಲಸಿಕೆ ಪಡೆದವರಿಗೆ ಬೂಸ್ಟ್ರ್ ಡೋಸ್ ನೀಡಲು ಆರಂಭಿಸಿದೆ.
ಇಷ್ಟೆಲ್ಲಾ ಸರ್ಕಸ್ಗಳು ನಡೆಯುತ್ತಿದ್ದರು ಕೆಲವೊಂದು ಭಾಗಗಳಲ್ಲಿ ಕೋವಿಡ್ ಲಸಿಕೆ ಕುರಿತು ಸಾಕಷ್ಟು ಹಿಂಜರಿಕೆಗಳಿವೆ. ಲಸಿಕೆ ಅಂದ್ರೆ ಸಾಕು ಮಾರುದ್ಧ ದೂರ ಓಡಿಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುತ್ರನೊಬ್ಬ ತಂದೆಗೆ ಲಸಿಕೆ ಕೊಡಿಸಲು ತನ್ನ ಬೆನ್ನ ಮೇಲೆ ಹೊತ್ತು ಬರೋಬ್ಬರಿ ಆರು ಗಂಟೆ ನಡೆದಿದ್ದಾನೆ.
ಹೌದು..ವ್ಯಾಕ್ಸಿನ್ ಕೊಡಿಸಲು ತಂದೆಯನ್ನು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಮಗನೊಬ್ಬ ಹೊತ್ತೊಯ್ದ ಘಟನೆ ಬ್ರೆಜಿಲ್ನ ಅಮೆಜಾನ್ ಪ್ರದೇಶದಲ್ಲಿ ನಡೆದಿದೆ. 60 ವಯಸ್ಸಿನ ತಂದ ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡಲಿ ಅಶಕ್ತರಾಗಿದ್ದಾರೆ. ಇನ್ನು ಅವರು ವಾಸಿಸುವ ಪ್ರದೇಶದಲ್ಲಿ ವಾಹನ ಸೌಕರ್ಯಗಳಿಲ್ಲ ಹೀಗಾಗಿ ವ್ಯಾಕ್ಸಿನ್ ಕೇಂದ್ರಕ್ಕೆ ತಮ್ಮ ತಂದೆಯಯನ್ನು ಹೊತ್ತು ತಂದಿದ್ದಾರೆ. ವ್ಯಾಕ್ಸಿನ್ ಹಾಕಿಸಿದ ಬಳಿಕ ಮತ್ತೇ ಅವರನ್ನು ಹೊತ್ತು ವಾಪಸ್ಸಾಗಿ ಆಧುನಿಕ ಶ್ರವಣಕುಮಾರನ್ನು ನೆನಪಿಸಿದ್ದಾರೆ.
ಈ ಅಪರೂಪದ ಫೋಟೋವನ್ನು ಎರಿಕ್ ಜಿನ್ನಿಂಗ್ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಡಿದ್ದು ಇದನ್ನ ಕಂಡ ನೆಟ್ಟಿಗರು ಮಗನ ಕಾರ್ಯಕ್ಕೆ ಭೇಷ್ ಎಂದಿದ್ದಾರೆ. ಇನ್ನು ಕೆಲವರು ನೀವು ಆಧುನಿಕ ಶ್ರವಣಕುಮಾರನೇ ಬಿಡಿ ಎಂದಿದ್ದಾರೆ.