ವ್ಯಾಕ್ಸಿನ್​​ ಪಡೆದ ಬಳಿಕ ವರ್ಷಗಳಿಂದ ಕಾಡ್ತಿದ್ದ ಕಾಯಿಲೆ ವಾಸಿ- ನ್ಯೂಸ್​​​ಫಸ್ಟ್​​​ ಸುದ್ದಿ ಬೆನ್ನಲ್ಲೇ ವರದಿ ಕೇಳಿದ ಸರ್ಕಾರ

ವ್ಯಾಕ್ಸಿನ್​​ ಪಡೆದ ಬಳಿಕ ವರ್ಷಗಳಿಂದ ಕಾಡ್ತಿದ್ದ ಕಾಯಿಲೆ ವಾಸಿ- ನ್ಯೂಸ್​​​ಫಸ್ಟ್​​​ ಸುದ್ದಿ ಬೆನ್ನಲ್ಲೇ ವರದಿ ಕೇಳಿದ ಸರ್ಕಾರ

ಬಳ್ಳಾರಿ:  ಕಳೆದ 10 ವರ್ಷಗಳಿಂದ ಮೈ-ಕೈ ನೋವು ಹಾಗೂ ಶುಗರ್​​ನಿಂದ ಬಳಲುತ್ತಿದ್ದ ಇಬ್ಬರು ಕೊರೊನಾ ಲಸಿಕೆ ಪಡೆದ ಬಳಿಕ ಆ ಸಮಸ್ಯೆಗಳಿಂದ ದೂರವಾಗಿ ನಾರ್ಮಲ್​​ ಆಗಿದ್ದಾರೆ ಎಂಬ ಬಗ್ಗೆ ನ್ಯೂಸ್​​ಫಸ್ಟ್​ ವರದಿ ಪ್ರಕಟಿಸಿತ್ತು. ಈ ವರದಿ ಬಿತ್ತರಿಸಿದ ಬೆನ್ನಲ್ಲೇ  ಸರ್ಕಾರ  ಈ ಕುರಿತಂತೆ ವರದಿ ನೀಡುವಂತೆ ಆದೇಶ ನೀಡಿದೆ.

ಗುಡೇಕೋಟೆ ಗ್ರಾಮದಲ್ಲಿ 10 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಲಾಕ್ಷ, ಬಸವೇಶ ಅನ್ನೋರು ವ್ಯಾಕ್ಸಿನ್​ ಪಡೆದ ಬಳಿಕ ಕಾಯಿಲೆಗಳಿಂದ ಮುಕ್ತಿ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. ಫಸ್ಟ್ ಡೋಸ್ ವ್ಯಾಕ್ಸಿನ್​ ಪಡೆದ ಬಳಿಕ ಕೀಲು ನೋವು ಮಾಯವಾಗ್ಬಿಟ್ಟಿದೆ ಅಂತಾ ಇಬ್ಬರು ತಿಳಿಸಿದ್ದಾರೆ.

ಪಾಲಾಕ್ಷ ಅವರು ಮೈ-ಕೈ ನೋವು, ಶುಗರ್‌ನಿಂದ ಬಳಲುತ್ತಿದ್ದರು. ನಡೆಯಲೂ ಆಗದೇ ಮತ್ತೊಬ್ಬರ ಸಹಾಯ ಪಡೆಯುತ್ತಿದ್ದರು. ಇತ್ತ ಬಸವೇಶ ಅನ್ನೋರಿಗೆ 6 ವರ್ಷದಿಂದ ಕೀಲುನೋವು ಇತ್ತು. ಮೈ-ಕೈ ನೋವು, ಅಸ್ತಮಾದಿಂದ ನರಳುತ್ತಿದ್ದರು. ಬಸವೇಶ ಅವರು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಕೂಡಾ ತೆಗೆದುಕೊಂಡಿದ್ರು, ಆದರೆ ವಾಸಿಯಾಗಿರಲಿಲ್ಲ. ಚರಂಡಿಯಲ್ಲಿ ಬಿದ್ದು ಮತ್ತಷ್ಟು ಕಾಲುನೋವಾಗಿದ್ದರಿಂದ ಸ್ಟಿಕ್‌ ಹಿಡಿದು ನಡೆದಾಡುತ್ತಿದ್ದರು. ಆದ್ರೆ ಇವರಿಬ್ಬರೂ ಕೋವಿಡ್‌ ವ್ಯಾಕ್ಸಿನ್‌ ತಗೊಂಡ ನಂತರ, ಈಗ ಯಾರ ಸಹಾಯವಿಲ್ಲದೆ ನಾರ್ಮಲ್‌ ಆಗಿ ನಡೆದಾಡುತ್ತಿದ್ದಾರೆ.

ವ್ಯಾಕ್ಸಿನ್ ಪಡೆದ ಬಳಿಕ ಒಂದೇ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಆರೋಗ್ಯದಲ್ಲಿ ಬದಲಾವಣೆಯಾಗಿದ್ದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವರದಿ ಮಾಡಿದ ಬಳಿಕ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.

ಕಾಯಿಲೆಯಿಂದ ವಾಸಿಯಾದ ಪಾಲಾಕ್ಷ ಹಾಗೂ ಬಸವೇಶ ಇಬ್ಬರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 5ರಂದು ವ್ಯಾಕ್ಸಿನ್ ಪಡೆದ ಬಳಿಕ ಕೀಲುನೋವು ವಾಸಿಯಾಗಿದೆ ಎಂದು ಪಾಲಾಕ್ಷ ಹಾಗೂ ಬಸವೇಶ ಅವರು ಹೇಳಿಕೆ ನೀಡಿದ್ದಾರೆ. ಸದ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಬಳ್ಳಾರಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

The post ವ್ಯಾಕ್ಸಿನ್​​ ಪಡೆದ ಬಳಿಕ ವರ್ಷಗಳಿಂದ ಕಾಡ್ತಿದ್ದ ಕಾಯಿಲೆ ವಾಸಿ- ನ್ಯೂಸ್​​​ಫಸ್ಟ್​​​ ಸುದ್ದಿ ಬೆನ್ನಲ್ಲೇ ವರದಿ ಕೇಳಿದ ಸರ್ಕಾರ appeared first on News First Kannada.

Source: newsfirstlive.com

Source link