ನವದೆಹಲಿ: ದೇಶದಲ್ಲಿ ನೀಡಲಾಗ್ತಿರುವ ಕೋವಿಶೀಲ್ಡ್ ಮತ್ತು ಭಾರತ್​ ಬಯೋಟೆಕ್​​ನ ಕೋವ್ಯಾಕ್ಸಿನ್ ಲಸಿಕೆಗಳು, ಕೊರೊನಾ ವಿರುದ್ಧದ ಹೋರಾಟದಲ್ಲಿ ಒಳ್ಳೆಯ ಫಲಿತಾಂಶವನ್ನ ನೀಡಿವೆ. ಅದರಲ್ಲೂ ಅಸ್ಟ್ರಾಝೆನೆಕಾ ಕೋವಿಡ್ ವ್ಯಾಕ್ಸಿನ್​ನ ಸೆರೊಪಾಸಿಟಿವಿಟಿ ರೇಟ್​ ಮತ್ತು ಆ್ಯಂಟಿಬಾಡೀಸ್​ಗಳ ಪ್ರಮಾಣವನ್ನ ಪರಿಣಾಮಕಾರಿಗಾಗಿ ಹೆಚ್ಚಿಸುತ್ತದೆ ಅಂತಾ ಭಾರತೀಯ ವೈದ್ಯರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಇಂಟರ್​ನೆಟ್​ ಸೈಟ್​ MedRxiv ನಲ್ಲಿ ಜೂನ್​ 2 ರಂದು ಈ ಬಗ್ಗೆ ಪ್ರಕಟವಾಗಿದ್ದು, 215 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನಲ್ಲಿ ಎರಡೂ ವ್ಯಾಕ್ಸಿನ್​​ಗಳ ಸರಾಸರಿ ಶೇಕಡಾ 95 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಕೋವಿಶೀಲ್ಡ್​ ಲಸಿಕೆ ಪಡೆದ 425 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಶೇಕಡಾ 98.1% ಸೆರೊಪಾಸಿಟಿವಿಟಿ ರೇಟ್​ ಹಾಗೂ 90 ಮಂದಿ ಕೋವ್ಯಾಕ್ಸಿನ್ ಪಡೆದವರಲ್ಲಿ ಶೇಕಡಾ 80.0% ಸೆರೊಪಾಸಿಟಿವಿ ಹೊಂದಿದ್ದಾರೆ. ಎರಡನೇ ಡೋಸ್​ ಪಡೆದು 21 ರಿಂದ 26 ದಿನಗಳು ಕಳೆದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

ಸೆರೊಪಾಸಿಟಿವಿಟಿ (seropositivity) ಅಂದ್ರೆ ಒಬ್ಬ ವ್ಯಕ್ತಿಯಲ್ಲಿ ಆಂಟಿಬಾಡೀಸ್​ಗಳನ್ನ ಹೆಚ್ಚಿಸುವುದಾಗಿದೆ. ಟೈಟರ್​ (titre) ಅಂದರೆ ದೇಹದಲ್ಲಿ ಉತ್ಪಾದಿಯಾಗುವ ಆಂಟಿಬಾಡೀಸ್​ಗಳ ಪ್ರಮಾಣವಾಗಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಕೆಲವು ಆರೋಗ್ಯ ಕಾರ್ಯಕರ್ತರು ಕೊರೊನಾದಿಂದ ಚೇತರಿಸಿಕೊಂಡ 6 ವಾರಗಳು ಕಳೆದ ಬಳಿಕ ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದರು. ನಂತರ ಎರಡನೇ ಡೋಸ್​ ಪಡೆದ ಮೇಲೆ ಇವರಿಗೆ ಶೇಕಡಾ 100 ರಷ್ಟು ಸೆರೊಪಾಸಿಟಿವಿಟಿ ಹಾಗೂ ಟೈಟ್ರೆಸ್​​ಗಳನ್ನ ಹೊಂದಿದ್ದಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ.

ಸದ್ಯ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. 18 ವರ್ಷದ ಮೇಲ್ಪಟ್ಟವರಿಗೂ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಇದುವರೆಗೆ 22,86,31,127 ಮಂದಿಗೆ ವ್ಯಾಕ್ಸಿನೇಷನ್ ಆಗಿದೆ. ಅದರಲ್ಲಿ ಕೋವಿಶೀಲ್ಡ್​ 20,21,62,310 ಡೋಸ್ ನೀಡಲಾಗಿದ್ರೆ, ಕೋವ್ಯಾಕ್ಸಿನ್​​ 2,64,52,082 ಡೋಸ್​ ನೀಡಲಾಗಿದೆ.

The post ವ್ಯಾಕ್ಸಿನ್​​ ಸ್ಟಡಿ ಸಿಹಿ ಸುದ್ದಿ; ಎರಡೂ ಲಸಿಕೆಗಳು ಬೆಸ್ಟ್​, ಆಂಟಿಬಾಡೀಸ್ ಹೆಚ್ಚಿಸುವಲ್ಲಿ ಒಂದು​ ನಂ.1  appeared first on News First Kannada.

Source: newsfirstlive.com

Source link