ಕೊರೊನಾ ಮೊದನೇ ಅಲೆ ಬಂದಾಗ ಅಯ್ಯೋ ವ್ಯಾಕ್ಸಿನ್ ಬೇಗ ಬಂದ್ರೆ ಸಾಕಪ್ಪ ಅಂತಿದ್ದವರು, ವ್ಯಾಕ್ಸಿನ್ ಬಂದ ನಂತರ ದೂರ ಸರಿದಿದ್ರು. ಸೂಜಿ ಭಯದಿಂದಲ್ಲ, ವ್ಯಾಕ್ಸಿನ್ ಬಗ್ಗೆ ನಡೆದ ಅಪಪ್ರಚಾರದಿಂದ. ಇನ್ನು, ಸೂಜಿ ಅಂದ್ರೆ ಭಯ ಬೀಳುವವರು, ಮಾಮೂಲಿ ಇಂಜೆಕ್ಷನ್​ಗೂ ಭಯ ಪಡ್ತಾರೆ. ಆದ್ರೆ ಹಾಕಿಸಿಕೊಳ್ಳೋದು ಮಾತ್ರ ಮಿಸ್​ ಮಾಡಲ್ಲ. ಇಲ್ಲೊಬ್ರು ನಿರ್ದೇಶಕರದ್ದೂ ಅದೇ ಕಥೆ ನೋಡಿ.. ವ್ಯಾಕ್ಸಿನ್​ ಹಾಕಿಸಿಕೊಳ್ಳೋದಕ್ಕೆ ಧೈರ್ಯ ಮಾಡಿ ಹೋಗಿದ್ದಾರೆ. ಆದ್ರೆ ಸೂಜಿ ನೋಡ್ತಿದ್ದಂತೆಯೇ ಕಣ್ಣಗಳನ್ನ ಕೈಯಿಂದ ಮುಚ್ಚಿಕೊಂಡಿದ್ದಾರೆ. ಇವರು ಬೇಱರೂ ಅಲ್ಲ, ಸ್ಟಾರ್​ ನಿರ್ದೇಶಕ..ನರಾಚಿ ಸೃಷ್ಟಿಕರ್ತ ಪ್ರಶಾಂತ್​ ನೀಲ್​…

ಹೌದು.. ಹೀಗೊಂದು ಫೋಟೋವನ್ನ ಸ್ವತಃ ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿದ್ದಾರೆ. ನರ್ಸ್​​ ವ್ಯಾಕ್ಸಿನ್​ ಸೂಜಿ ಚುಚ್ಚೋ ಮೊದಲೇ ಪ್ರಶಾಂತ್​ ನೀಲ್​ ಕಣ್ಣುಗಳನ್ನ ಕೈಯಿಂದ ಮುಚ್ಚಿಕೊಂಡಿದ್ದಾರೆ. ಒಂದು ಸ್ವಲ್ಪ ಆತಂಕ ಮೂಡಿಸುವಂತ ಫೋಟೋವಾದ್ರೂ, ಪ್ರಶಾಂತ್​ ನೀಲ್​ ಬಹಳ ಮುದ್ದಾಗಿ ಪೋಸ್​ ನೀಡಿದ್ದಾರೆ​. ಪ್ರಶಾಂತ್​ ನೀಲ್​ ಈ ಆಟವನ್ನ ಹೊಂಬಾಳೆ ಫಿಲಂಸ್​​ನ ಮುಖ್ಯಸ್ಥ, ನಿರ್ಮಾಪಕ ವಿಜಯ್​ ಕಿರಗಂದೂರು ನೋಡಿ ಆನಂದಿಸುತ್ತಿದ್ದಾರೆ. ಆದ್ರೆ ನಿಜಕ್ಕೂ ನಿರ್ದೇಶಕ ಪ್ರಶಾಂತ್​ ನೀಲ್​ಗೆ ಸೂಜಿ ಅಂದ್ರೆ ಭಯನಾ ಅಥವಾ ನೋವಿಗೆ ಆ ರೀತಿ ಮಾಡಿದ್ದಾರಾ ಗೊತ್ತಾಗುತ್ತಿಲ್ಲ.

ಅಂದ್ಹಾಗೇ, ಈ ಫೋಟೋ ಟ್ವೀಟ್​ ಮಾಡಿರುವ ಪ್ರಶಾಂತ್​ ನೀಲ್​, ‘ಕೊನೆಗೂ ನಾನು ವ್ಯಾಕ್ಸಿನ್​ ತೆಗೆದುಕೊಂಡಿದ್ದೇನೆ. ನೀವು ಇನ್ನೂ ತೆಗೆದುಕೊಂಡಿಲ್ಲ ಅಂದ್ರೆ ಬೇಗ ಒಂದು ಸ್ಲಾಟ್​ ಕಾಯ್ದಿರಿಸಿ, ನೀವೂ ಹಾಗೂ ನಿಮ್ಮ ಕುಟುಂಬದವರು ವ್ಯಾಕ್ಸಿನ್​ ಹಾಕಿಸಿಕೊಳ್ಳಿ’ ಅಂತ ತಿಳಿ ಹೇಳಿದ್ದಾರೆ. ಇನ್ನು ಸದ್ಯ ‘ಕೆಜಿಎಫ್​ ಚಾಪ್ಟರ್​ 2’ ಪೋಸ್ಟ್​ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿರುವ ಪ್ರಶಾಂತ್​ ನೀಲ್​, ಎಲ್ಲವೂ ಅನ್​ಲಾಕ್​​ ಆಗುತ್ತಿದ್ದಂತೆಯೇ ‘ಸಲಾರ್’​ ಎರಡನೇ ಹಂತದ ಶೂಟಿಂಗ್​​ನಲ್ಲಿ ಮಗ್ನರಾಗಲಿದ್ದಾರೆ.

The post ವ್ಯಾಕ್ಸಿನ್​ ಚುಚ್ಚೋ ಮೊದಲೇ ಕಣ್ಣುಗಳನ್ನ ಕೈಯಿಂದ ಮುಚ್ಚಿಕೊಂಡ ಇವರು ಯಾರು ಗೊತ್ತಾ.? appeared first on News First Kannada.

Source: newsfirstlive.com

Source link