ಪೊಲೀಸ್ ಕಾನ್​ಸ್ಟೇಬಲ್ ಓರ್ವರು 82 ವರ್ಷದ ವೃದ್ಧೆಯನ್ನ ವ್ಯಾಕ್ಸಿನೇಷನ್ ಸೆಂಟರ್​ಗೆ ಹೊತ್ತುಕೊಂಡು ಬಂದು ಲಸಿಕೆ ಹಾಕಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕುಲದೀಪ್ ಸಿಂಗ್ ವೃದ್ಧೆಗೆ ಸಹಾಯ ಮಾಡಿದ ಪೊಲೀಸ್. ಶೈಲಾ ಅನ್ನೋ ವೃದ್ಧೆಗೆ ನಡೆಯಲು ಆಗಲ್ಲ. ಹೀಗಾಗಿ ಆಕೆಯ ಮನೆಗೆ ತೆರಳಿದ್ದ ಪೊಲೀಸ್.. ಮನೆಯಿಂದ ವೃದ್ಧೆಯನ್ನ ಎತ್ತಿಕೊಂಡು ಬಂದು ಕಾರಿನಲ್ಲಿ ಕೂರಿಸಿಕೊಂಡು ವ್ಯಾಕ್ಸಿನೇಷನ್ ಸೆಂಟರ್​ಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಅಲ್ಲಿಂದ ವ್ಯಾಕ್ಸಿನೇಷನ್ ಸೆಂಟರ್​ಗೆ ಎತ್ತಿಕೊಂಡು ಬಂದೇ ಲಸಿಕೆಯನ್ನ ಹಾಕಿಸಿದ್ದಾರೆ.

ಇನ್ನು ಸಿಂಗ್​ಗೆ ಸಂಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡೋದು ಅಂದ್ರೆ ತುಂಬಾ ಖುಷಿ ಅಂತೆ. ಅದರಂತೆ ಇವರು ಪ್ರತಿ ದಿನ ಜನರಿಗೆ ಸಹಾಯ ಮಾಡೋದನ್ನ ರೂಢಿಸಿಕೊಂಡು ಬರ್ತಿದ್ದಾರೆ ಅಂತಾ ವರದಿಯಾಗಿದೆ.

ಅದರಂತೆ ಇಂದು ಶೈಲಾ ಡಿಸೋಜಾ ಅನ್ನೋ ವೃದ್ಧೆ ಒಬ್ಬರಿಗೆ ಸಹಾಯ ಮಾಡಿದ್ದಾರೆ. ಇವರು ಕೊರೊನಾ ವ್ಯಾಕ್ಸಿನೇಷನ್ ಸೆಂಟರ್​ಗೆ ನಡೆದುಕೊಂಡು ಬರಲು ಪರದಾಡಬೇಕಾಗಿತ್ತು. ಇದನ್ನ ಗಮನಿಸಿದ ಸಿಂಗ್, ಕೂಡಲೇ ವೃದ್ಧೆಯ ಸಹಾಯಕ್ಕೆ ಮುಂದಾಗಿದ್ದಾರೆ. ಶೈಲಾ ಅವರು ನಿವೃತ್ತ ಇಂಗ್ಲಿಷ್ ಟೀಚರ್ ಆಗಿದ್ದಾರೆ. ಸದ್ಯ ಇವ್ರು ಲೇಡಿ ಅಟೆಂಡೆಂಟ್ ಜೊತೆ ವಾಸವಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಂಗ್.. ಅವರು ನನ್ನ ಬೀಟ್ ಏರಿಯಾದ ಹಿರಿಯ ನಾಗರಿಕರಾಗಿದ್ದಾರೆ. ಆಕೆಯ ಆರೋಗ್ಯ ಕ್ಷೇಮ ವಿಚಾರಿಸಲು ಆಗಾಗ ಭೇಟಿ ನೀಡುತ್ತಾ ಇರುತ್ತೇನೆ. ಈ ಸಂದರ್ಭದಲ್ಲಿ ಅವರು ವ್ಯಾಕ್ಸಿನ್ ಪಡೆಯುಲು ಬಯಸಿದ್ದರು. ಅದರಂತೆ ನಾನು ವ್ಯಾಕ್ಸಿನ್ ರಿಜಿಸ್ಟ್ರೇಷನ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆ ಮಾಡಿಕೊಟ್ಟೆ. ಯುವಕರು ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡಬೇಕು ಅಂತಾ ನಾನು ಬಯಸುತ್ತೇನೆ ಅಂತಾ ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

The post ವ್ಯಾಕ್ಸಿನ್ ಕೊಡಿಸಲು ವೃದ್ಧೆಯನ್ನ ಎತ್ತಿಕೊಂಡು ವ್ಯಾಕ್ಸಿನೇಷನ್ ಸೆಂಟರ್​ಗೆ ಬಂದ ಪೊಲೀಸ್ appeared first on News First Kannada.

Source: newsfirstlive.com

Source link