ಬೆಳಗಾವಿ: ಜಿಲ್ಲೆಯಲ್ಲಿ ವ್ಯಾಕ್ಸಿನ್​ ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಕ್ಸಿನ್​ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಜಿಲ್ಲಾ ವ್ಯಾಕ್ಸಿನ್ ನಿಯಂತ್ರಣಾಧಿಕಾರಿ ಡಾ. ಈಶ್ವರ ಗಡಾದೆ ತಿಳಿಸಿದ್ದಾರೆ.

ವ್ಯಾಕ್ಸಿನ್​ ಅಭಿಯಾನದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ವೈದ್ಯರು, ಜಿಲ್ಲೆಯಲ್ಲಿ ಸದ್ಯ ಮೂರು ಸಾವಿರದಷ್ಟು ವ್ಯಾಕ್ಸಿನ್ ಇದೆ. ಮೂರು ಸಾವಿರ ವ್ಯಾಕ್ಸಿನ್ ಮುಗಿದ ಬಳಿಕ ಎಲ್ಲವೂ ಕೇಂದ್ರಗಳನ್ನು ಸಂಪೂರ್ಣ ಸ್ಥಗಿತ ಮಾಡುತ್ತಿದ್ದೇವೆ. ಏಕೆಂದರೆ ವ್ಯಾಕ್ಸಿನ್​ ಪೂರೈಕೆ ಆಗುತ್ತಿಲ್ಲ ಎಂದರು.

ಜಿಲ್ಲೆಗೆ ಇಂದು ಸಂಜೆ ಅಥವಾ ತಡರಾತ್ರಿ ಸುಮಾರು 30 ಸಾವಿರ ವ್ಯಾಕ್ಸಿನ್​ ಬರಬಹುದು ಎಂಬ ಮಾಹಿತಿ ಇದೆ. ವ್ಯಾಕ್ಸಿನ್ ಬಂದ ನಂತರ ಎಲ್ಲಾ ವ್ಯಾಕ್ಸಿನ್ ವಿತರಣೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇವತ್ತು ‌ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆ ಇರುವುದರಿಂದ ಕೇಂದ್ರಗಳನ್ನು ಬಂದ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

The post ವ್ಯಾಕ್ಸಿನ್ ಕೊರತೆ; ಬೆಳಗಾವಿಯಲ್ಲಿ ವ್ಯಾಕ್ಸಿನ್ ಕೇಂದ್ರಗಳು ಸ್ಥಗಿತ appeared first on News First Kannada.

Source: newsfirstlive.com

Source link