ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ನೋ ವ್ಯಾಕ್ಸಿನ್ ಫಲಕಗಳನ್ನು ಹಾಕಲಾಗಿದೆ.

ಧಾರವಾಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ದಿನ 500 ವ್ಯಾಕ್ಸಿನ್ ಹಾಕಲಾಗುತಿತ್ತು. ಆದರೆ ಇವತ್ತು ವ್ಯಾಕ್ಸಿನ್ ಇಲ್ಲದ ಕಾರಣ ಆರೋಗ್ಯ ಕೇಂದ್ರದ ಎದುರು ನೋ ವ್ಯಾಕ್ಸಿನ್ ಎಂದು ಫಲಕ ಹಾಕಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್ ಕೇವಲ 210 ವೈಲ್ ಹಾಗೂ ಕೊವಿಶಿಲ್ಡ್ 4600 ವೈಲ್ ಇದ್ದವು. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬರುತ್ತಿರುವ ಸಾರ್ವಜನಿಕರು ವ್ಯಾಕ್ಸಿನ್ ಸಿಗದೆ ವಾಪಸ್ ಆಗುತ್ತಿದ್ದಾರೆ. ಇದನ್ನೂ ಓದಿ: ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?

5 ತಾಲೂಕಾ ಆರೋಗ್ಯ ಕೇಂದ್ರ ಹಾಗೂ ನಗರದ 67 ವಾರ್ಡಗಳಲ್ಲಿ ಹಂಚಿಕೆ ಮಾಡಲಾಗಿತ್ತು. ಹೀಗಾಗಿ ಬಂದಷ್ಟು ವ್ಯಾಕ್ಸಿನ್‍ಗಳನ್ನು ಆಸ್ಪತ್ರೆ ವೈದ್ಯರು ಸಾರ್ವಜನಿಕರಿಗೆ ಹಾಕಿದ್ದಾರೆ. ನಂತರ ಬಂದ ಜನರಿಗೆ ನಾಳೆ ವ್ಯಾಕ್ಸಿನ್ ಬಂದ ಮೇಲೆ ಹಾಕುತ್ತೆವೆ ಎಂದು ಹೇಳಿ ಕಳಿಸಿದ್ದಾರೆ.

ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 51,667 ಮಂದಿಯಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 1,329 ಮಂದಿ ಮಹಾಮಾರಿ ವೈರಸ್‍ಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

The post ವ್ಯಾಕ್ಸಿನ್ ಕೊರತೆ- NO STOCK ಫಲಕ ಹಾಕಿದ ಆಸ್ಪತ್ರೆಗಳು appeared first on Public TV.

Source: publictv.in

Source link