ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆ ಬಳಿ ವ್ಯಾಕ್ಸಿನ್ ಪಡೆಯಲು ಬಂದ ಸಾರ್ವಜನಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ವ್ಯಾಕ್ಸಿನ್ ಅಭಾವ ಎದುರಾದ ಹಿನ್ನೆಲೆ ರೊಚ್ಚಿಗೆದ್ದ ಸಾರ್ವಜನಿಕರು..ವ್ಯಾಕ್ಸಿನ್ ಕೊಡದಿದ್ರೂ ಪರವಾಗಿಲ್ಲ ಸರಿಯಾದ ಮಾಹಿತಿ ಕೊಡಿ ಎಂದು ದಬಾಯಿಸಿದ್ದಾರೆ.

ಮುಂಜಾನೆಯಿಂದಲೇ ಬಂದು ಕಾಯ್ತಿದ್ದೀವಿ.. ವ್ಯಾಕ್ಸಿನ್ ತೆಗೆದುಕೊಂಡು ಮನೆಯಲ್ಲಿ ಸುರಕ್ಷಿತವಾಗಿರಿ ಅಂತಾರೆ. ಆದ್ರೆ ಇಲ್ಲಿ ವ್ಯಾಕ್ಸಿನ್ ಪಡೆಯೋಕೆ ಬಂದ್ರೆ ಹೇಳೊರಿಲ್ಲಾ ಕೇಳೊರಿಲ್ಲಾ.. ಇಲ್ಲಿಗೆ ಬಂದು ವ್ಯಾಕ್ಸಿನ್ ಅಲ್ಲ.. ಕೊರೊನಾ ಮನೆಗೆ ತೆಗೆದ್ಕೊಂಡು ಹೋಗ್ತಿವಿ ಎಂದು ಸರ್ಕಾರ ಹಾಗೂ ಆಸ್ಪತ್ರೆಗೆ ಸಿಬ್ಬಂದಿ ವಿರುದ್ಧ ವ್ಯಾಕ್ಸಿನ್ ಪಡೆಯಲು ಬಂದವರು ಆಕ್ರೋಶ ಹೊರಹಾಕಿದ್ದಾರೆ.

The post ವ್ಯಾಕ್ಸಿನ್ ತಗೊಂಡು ಮನೇಲಿರಿ ಅಂತಾರೆ.. ಇಲ್ಲಿ ಬಂದ್ರೆ ಹೇಳೋರಿಲ್ಲ.. ಕೇಳೋರಿಲ್ಲ- ಸಾರ್ವಜನಿಕರ ಆಕ್ರೋಶ appeared first on News First Kannada.

Source: newsfirstlive.com

Source link