ನವದೆಹಲಿ: ಕೊರೊನಾ ವ್ಯಾಕ್ಸಿನ್ ನಮ್ಮನ್ನ ಶೇಕಡಾ 97.38 ರಷ್ಟು ರಕ್ಷಿಸುತ್ತದೆ. ಕೇವಲ ಶೇ.0.06 ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುವ ಪ್ರಸಂಗ ಬರುತ್ತದೆ ಅಂತಾ ಇಂದ್ರಪ್ರಸ್ತ ಅಪೊಲೋ ಹಾಸ್ಪಿಟಲ್ ನಡೆಸಿದ ಅಧ್ಯಯನ ತಿಳಿಸಿದೆ.

ಕೊರೊನಾ ವ್ಯಾಕ್ಸಿನ್ ಪಡೆದುಕೊಂಡವರ ಮೇಲೆ ಅಧ್ಯಯನ ನಡೆಸಿ, ಬಿಡುಗಡೆ ಮಾಡಿರುವ ವರದಿ ಇದಾಗಿದೆ. ಕೋವಿಶೀಲ್ಡ್ ಪಡೆದುಕೊಂಡ ಮೊದಲ 100 ದಿನಗಳಲ್ಲಿ ಅಪೊಲೋ ಆರೋಗ್ಯ ಕಾರ್ಯಕರ್ತರಿಗೆ ಕಾಣಿಸಿಕೊಂಡ ಕೊರೊನಾ ಸೋಂಕಿನ ಗುಣಲಕ್ಷಣಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಯಿತು ಅಂತಾ ಪೀರ್ ರಿವಿವ್ಯೂಡ್​​ ಮೆಡಿಕಲ್ (peer-reviewed medical) ಜರ್ನಲ್ ವರದಿಯನ್ನ ಪ್ರಕಟ ಮಾಡಿದೆ.

ತಜ್ಞರು ಏನಂತಾರೆ..?
ಅಪೊಲೋ ಹಾಸ್ಪಿಟಲ್ಸ್​ ಗ್ರೂಪ್​​ನ, ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ.ಅನುಪಮ ಸಿಬಲ್ ನೀಡಿರುವ ಮಾಹಿತಿ ಪ್ರಕಾರ.. ದೇಶದಲ್ಲಿ ಕೊರೊನಾ ಎರಡನೇ ಅಲೆಗೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವ್ಯಾಕ್ಸಿನೇಷನ್ ಡ್ರೈವ್ ಪ್ರಗತಿಯಲ್ಲಿದೆ. ಲಸಿಕೆ ನೀಡಿದ ನಂತರವೂ ಸೋಂಕಿನ ವರದಿಗಳು ಬಂದಿವೆ. ಇದನ್ನು ಬ್ರೇಕ್​ ಥ್ರೂ ಸೋಂಕು ಎಂದು ಕರೆಯಲಾಗುತ್ತದೆ. ವ್ಯಾಕ್ಸಿನ್ ಪಡೆದ ಕೆಲವೇ ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಳ್ಳಬಹುದು ಅಂತಾ ತಿಳಿಸಿದ್ದಾರೆ.

ಅಧ್ಯಯದಲ್ಲಿ ತಿಳಿದುಬಂದಿರುವ ಪ್ರಕಾರ ವ್ಯಾಕ್ಸಿನ್ ನಮಗೆ ಶೇಕಡಾ 100ರಷ್ಟು ಇಮ್ಯುನಿಟಿ ಪವರ್ ನೀಡಲ್ಲ. ಆದರೆ ವ್ಯಾಕ್ಸಿನ್ ನಮ್ಮನ್ನ ರಕ್ಷಣೆ ಮಾಡೋದಂತೂ ಪಕ್ಕ. ನಮ್ಮ ಅಧ್ಯಯನದ ಪ್ರಕಾರ ವ್ಯಾಕ್ಸಿನ್ ಶೇಕಡಾ 97.38 ರಷ್ಟು ರಕ್ಷಣೆ ನೀಡಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇಕಡಾ 0.06 ರಷ್ಟು ಮಾತ್ರ ಎಂದು ಅಧ್ಯಯನ ತೋರಿಸುತ್ತದೆ ಎಂದಿದ್ದಾರೆ.

ಎಷ್ಟು ಜನರ ಮೇಲೆ ಅಧ್ಯಯನ..?
ಬ್ರೇಕ್​ ಥ್ರೂ ಸೋಂಕಿನಲ್ಲಿ ಹೆಚ್ಚು ಗಂಭೀರತೆ ಕಂಡುಬರುವುದಿಲ್ಲ. ಸಣ್ಣಪುಟ್ಟ ಲಕ್ಷಣಗಳನ್ನ ನಾವು ನೋಡಬಹುದಾಗಿದೆ. ಉದಾಹರಣೆಗೆ ವಾಸನೆ ಗ್ರಹಿಸಲು ಸಾಧ್ಯವಾಗದೇ ಇರೋದು ಸೇರಿದಂತೆ ಮೈನರ್ ಇನ್ಫೆಕ್ಷನ್ ಕಂಡು ಬರುತ್ತದೆ. ಯಾರೂ ಕೂಡ ಐಸಿಯು ಸೇರುವಂತಹ ಪ್ರಮೇಯ ಬರಲ್ಲ ಅಂತಾ ತಜ್ಞರು ತಿಳಿಸಿದ್ದಾರೆ.

ಇನ್ನು ಈ ಅಧ್ಯಯನಕ್ಕೆ 3,235 ಆರೋಗ್ಯ ಕಾರ್ಯಕರ್ತರನ್ನ ಬಳಸಿಕೊಳ್ಳಲಾಯಿತು. ವ್ಯಾಕ್ಸಿನ್ ಪಡೆದುಕೊಂಡಿದ್ದ 3,235 ಮಂದಿಯಲ್ಲಿ ಕೇವಲ 85 ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ಮತ್ತೆ ಹರಡಿತ್ತು ಅಂತ ವರದಿಯಾಗಿದೆ.

The post ವ್ಯಾಕ್ಸಿನ್ ಪಡೆದು ಆಸ್ಪತ್ರೆಗೆ ದಾಖಲಾಗಬಹುದಾದವ್ರ ಸಂಖ್ಯೆ ಶೇ 0.06ರಷ್ಟು ಮಾತ್ರ- ಅಧ್ಯಯನ appeared first on News First Kannada.

Source: newsfirstlive.com

Source link