ನವದೆಹಲಿ: ಭಾರತ್ ಬಯೋಟೆಕ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಆಗಷ್ಟೇ ಜನಿಸಿದ ಕರುಗಳ ರಕ್ತದಲ್ಲಿರುವ ಸೆರಮ್ ದ್ಯವ್ಯವನ್ನ ಬಳಸಲಾಗ್ತಿದೆ ಎಂಬ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಈ ವದಂತಿಗಳನ್ನ ಹಂಚಿಕೊಂಡಿದ್ದರು. ಆದ್ರೀಗ ಇದಕ್ಕೆ ಸ್ಪಷ್ಟನೆ ನೀಡಿರೋ ಕೇಂದ್ರ ಸರ್ಕಾರ ವ್ಯಾಕ್ಸಿನ್ ತಯಾರಿಕೆಯ ಪೂರ್ವದಲ್ಲಿ ಸೆರಮ್ ಅನ್ನು ಬಳಸಲಾಗುತ್ತಾದ್ರೂ ಕೊನೆಯದಾಗಿ ವ್ಯಾಕ್ಸಿನ್ ತಯಾರಾಗುವಷ್ಟರಲ್ಲಿ ಸೆರಮ್ ಸಂಪೂರ್ಣ ನಾಶವಾಗಿರುತ್ತದೆಂದು ಹೇಳಿದೆ. ಅಲ್ಲದೇ ಸೇರಂ ಪಡೆಯಲು ಕರುಗಳನ್ನು ಸಾಯಿಸಲಾಗಲ್ಲ.. ಉದಾಹರಣೆಗೆ ಪ್ಲಾಸ್ಮಾ ಪಡೆಯಲು ಮನುಷ್ಯರನ್ನು ಹೇಗೆ ಸಾಯಿಸುವುದಿಲ್ಲವೋ ಅದೇ ರೀತಿ ಇಲ್ಲಿ ಕರುಗಳನ್ನ ಸಾಯಿಸದೇ ಸೆರಂ ಪಡೆಯಲಾಗುತ್ತೆ ಅಂತ ಕೂಡ ತಜ್ಞರು ಹೇಳ್ತಾರೆ.

ಬೇಡ ತಪ್ಪು ಕಲ್ಪನೆ

ಆರ್​ಟಿಐಗೆ ಸಲ್ಲಿಸಿದ್ದ ಅರ್ಜಿಯೊಂದರಲ್ಲಿ ಕೊವ್ಯಾಕ್ಸಿನ್ ತಯಾರಿಕೆಯಲ್ಲಿ ಕರುವಿನಿಂದ ಹೊರತೆಗೆದ ರಕ್ತದಲ್ಲಿಮ ಸೆರಮ್ ದ್ರವ್ಯವನ್ನ ಬಳಸಲಾಗಿದೆಯೇ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ವೆರೋ ಸೆಲ್​ಗಳನ್ನ ಪ್ರಿಪೇರ್ ಮಾಡಲು ಮತ್ತು ಬೆಳೆಸಲು ಉಪಯೋಗಿಸಲಾಗುತ್ತದೆ ಎನ್ನಲಾಗಿತ್ತು. ಆದ್ರೆ ಇದನ್ನ ಸೋಷಿಯಲ್ ಮೀಡಿಯಾದಲ್ಲಿ ತಿರುಚಿದ ರೂಪದಲ್ಲಿ ಹಂಚಿಕೊಂಡು ವ್ಯಾಕ್ಸಿನ್ ಬಗೆಗೆ ತಪ್ಪುಕಲ್ಪನೆ ಸೃಷ್ಟಿಯಾಗುವಂತೆ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡುತ್ತಾ..ವೆರೋ ಸೆಲ್​ಗಳ ಬೆಳವಣಿಗೆಗಾಗಿ ಜಾಗತಿಕವಾಗಿ ಹಲವು ಬಗೆಯ ಬೊವಿನ್ ಮತ್ತು ಇತರೆ ಪ್ರಾಣಿಗಳ ಸೆರಮ್ ಅನ್ನು ಬಳಸಲಾಗುತ್ತದೆ. ಲಸಿಕೆಗಳ ಉತ್ಪಾದನೆಗೆ ಬಳಕೆಯಾಗುವ ಜೀವಕೋಶಗಳನ್ನು ಜೀವಂತವಾಗಿಡಲು ವೆರೋಸೆಲ್​ಗಳನ್ನ ಬಳಸಲಾಗುತ್ತದೆ. ವೆರೋಸೆಲ್​ಗಳು ಬೆಳವಣಿಗೆಯಾದ ನಂತರ ನೀರು ಮತ್ತು ಕೆಮಿಕಲ್​ಗಳನ್ನ ಬಳಸಿ ಹಲವು ಬಾರಿ ಬಫರ್ ಮಾಡಲಾಗುತ್ತದೆ. ಈ ಹಂತದಲ್ಲಿ ಈ ಮೊದಲು ಬಳಸಲಾಗಿದ್ದ ಕರುವಿನ ಸೆರಮ್ ತೊಳೆದುಹೋಗುತ್ತದೆ. ಇದೆಲ್ಲ ಮುಗಿದ ನಂತರ ಈ ವೆರೋಸೆಲ್​ಗಳು ಕೊರೊನಾ ವೈರಸ್​ನ ಸೋಂಕಿಗೆ ಒಳಗಾಗುತ್ತವೆ ಇದರಿಂದ ವೈರಲ್ ಬೆಳವಣಿಗೆಯಾಗುತ್ತದೆ.

ವ್ಯಾಕ್ಸಿನ್​​ ಅಲ್ಲಿ ಯಾವುದೇ ಕರುವಿನ ಅಂಶ ಇರಲ್ಲ

ವೈರಲ್ ಬೆಳವಣಿಗೆಯ ಹಂತದಲ್ಲಿ ವೆರೋ ಸೆಲ್​ಗಳು ಸಂಪೂರ್ಣವಾಗಿ ನಾಶಹೊಂದುತ್ತವೆ. ಇದರನಂತರ ವೆರೋ ಸೆಲ್​ಗಳಲ್ಲಿ ಬೆಳೆದ ವೈರಸ್​​ನ್ನೂ ಸಹ ಕೊಲ್ಲಲಾಗುತ್ತದೆ ಮತ್ತು ಶುಚಿಗೊಳಿಸಲಾಗುತ್ತದೆ. ಹೀಗೆ ಕೊಲ್ಲಲಾದ ವೈರಸ್​ನ್ನು ಫೈನಲ್ ವ್ಯಾಕ್ಸಿನ್ ತಯಾರಿಸಲು ಬಳಸಲಾಗುತ್ತದೆ. ಮತ್ತು ಪೈನಲ್ ವ್ಯಾಕ್ಸಿನ್ ರೂಪಾಂತರಗೊಳ್ಳುವ ಹಂತದಲ್ಲಿ ಕರುವಿನ ಸೆರಮ್​ನ್ನು ಬಳಸಲಾಗುವುದಿಲ್ಲ. ಹೀಗಾಗಿ ಫೈನಲ್ ವ್ಯಾಕ್ಸಿನ್​ನಲ್ಲಿ ಕರುವಿನ ಸೆರಮ್​​ ಇರುವುದಿಲ್ಲ.. ಫೈನಲ್ ವ್ಯಾಕ್ಸಿನ್ ತಯಾರಿಕೆಗೆ ಕರುವಿನ ಸೆರಮ್ ಇನ್​ಗ್ರೀಡಿಯಂಟ್​ ಕೂಡ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ನಮ್ಮ ಪಾರ್ಟಿಯ ಎಲ್ಲರದ್ದೂ ಒಂದೇ ದೃಷ್ಟಿಕೋನವಿದೆ.. ಪ್ರತ್ಯೇಕ ವಿಚಾರಗಳಿದ್ದರೆ ಅದನ್ನ ಪಾರ್ಟಿಯ ಜೊತೆಗೆ ಬಂದು ಮಾತನಾಡಿ.. ಮಾಧ್ಯಮಗಳ ಮುಂದೆ ಮಾತನಾಡಬೇಡಿ ಎಂದು ಹೇಳುತ್ತೇನೆ. ರಾಜ್ಯ ಬಿಜೆಪಿ ಕೋವಿಡ್ ಪರಿಸ್ಥಿತಿಯನ್ನ ಚೆನ್ನಾಗಿ ಎದುರಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಪಕ್ಷಗಳು ಕೊರೊನಾ ಪರಿಸ್ಥಿತಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದಿದ್ದಾರೆ.

The post ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಹರಡಿದ ಕಿಡಿಗೇಡಿಗಳು- ಕೇಂದ್ರದಿಂದ ಸ್ಪಷ್ಟನೆ appeared first on News First Kannada.

Source: newsfirstlive.com

Source link