ಬೆಂಗಳೂರು: ರಾಜ್ಯದಲ್ಲಿ 2 ನೇ ಡೋಸ್ ಕೋವ್ಯಾಕ್ಸಿನ್ ಕೊರತೆ ವಿಚಾರವಾಗಿ ರಾಜ್ಯ ಸರ್ಕಾರದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರ ವ್ಯಾಕ್ಸಿನ್ ವಿಚಾರವಾಗಿ ಜನರಿಗೆ ಸರಿಯಾದ ಮಾಹಿತಿ ನೀಡಬೇಕು.. ಲಸಿಕೆ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ.. ಯಾವಾಗ ವ್ಯಾಕ್ಸಿನ್ ಸಿಗುತ್ತದೆಂದು ಜನರಿಗೆ ಹೇಳಿ.. ಜನರ ಮುಂದೆ ತೆರಳಿ ಸತ್ಯಾಂಶ ಹೇಳಿ. ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಆಗಲಾದರೂ ಎಚ್ಚರಿಕೆ ವಹಿಸುತ್ತಾರೆ.. ಜನರಿಗೆ ಸುಳ್ಳು ನಂಬಿಕೆ ಹುಟ್ಟಿಸಬೇಡಿ.. ನೀವು ವ್ಯಾಕ್ಸಿನ್ ಬಗ್ಗೆ ಸರಿಯಾದ ನೀತಿ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

The post ವ್ಯಾಕ್ಸಿನ್ ಬಗ್ಗೆ ಜನರಿಗೆ ಸುಳ್ಳು ನಂಬಿಕೆ ಹುಟ್ಟಿಸಬೇಡಿ- ಸರ್ಕಾರಕ್ಕೆ ಹೈಕೋರ್ಟ್ ತರಾಟೆ appeared first on News First Kannada.

Source: newsfirstlive.com

Source link