ಯಾರಿಗೆ ಯಾವ ವ್ಯಾಕ್ಸಿನ್ ಸಿಗುತ್ತೋ ಅದೇ ಉತ್ತಮ ವ್ಯಾಕ್ಸಿನ್ ಅಂತಾರೆ ಅಂತಾರಾಷ್ಟ್ರೀಯ ತಜ್ಞರು ಹಾಗೂ ವಿಜ್ಞಾನಿಗಳು. ಹೀಗಾಗಿ ಇಂದಿಗೂ ಯಾರಲ್ಲದ್ರೂ ಹಿಂಜರಿಕೆ, ಸಂಶಯ ಇದ್ದರೆ ನಿಸ್ಸಂಶಯವಾಗಿ ಮುಂದೆ ಸಾಗಿ ಲಭ್ಯವಿರುವ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು.

ಭಾರತದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನೇ ದಿನೇ ಹೆಚ್ಚಾಗ್ತಿದೆ. ಆಕ್ಸಿಜನ್​ ಸಿಗದೇ, ಬೆಡ್​ಗಳಿಲ್ಲದೇ, ಕಣ್ಮುಂದೆಯೇ ಕುಟುಂಬದವರನ್ನ ಕಳೆದುಕೊಳ್ತಿದ್ದಾರೆ. ಇದರ ನಡುವೆ, ಎಲ್ಲರಿಗೂ ವ್ಯಾಕ್ಸಿನೇಷನ್​​ ಹಾಕಿಸಿಕೊಳ್ಬೇಕು ಅನ್ನೋ ಮಾತು. ಹೋಗ್ಲಿ, ಹಾಕಿಸಿಕೊಳ್ಳೋಣ ಅಂತ ಅಂದ್ರೆ, ಎಲ್ಲೂ ವ್ಯಾಕ್ಸಿನೇಷನ್​ ಪೂರೈಕೆ ಕೂಡ ಕುಂಠಿತಗೊಂಡಿದೆ.

ಈ ನಡುವೆ, ಜನರಿಗೆ ಈಗ ಕನ್​ಫ್ಯೂಷನ್​ವೊಂದು​ ಶುರುವಾಗಿದೆ.. ಕೋವಿಶೀಲ್ಡ್​ ಬೆಸ್ಟಾ..? ಕೋವ್ಯಾಕ್ಸಿನ್​ ಬೆಸ್ಟಾ..? ಅಥವ ಈಗ ಬಂದಿರೋ ಸ್ಪುಟ್ನಿಕ್​ ಬೆಸ್ಟಾ..? ಯಾವುದಪ್ಪ ಬೆಸ್ಟ್​? ಅನ್ನೋ ಹುಳ ಜನಸಾಮಾನ್ಯರಲ್ಲಿ ಮೂಡಿದೆ. ಅಲ್ಲದೇ, ಯಾವ ವ್ಯಾಕ್ಸಿನೇಷನ್​ ಪಡೆದರೆ ಯಾವರೀತಿಯ ಅಡ್ಡ ಪರಿಣಾಮವಾಗುತ್ತೆ ಅನ್ನೋ ಗೊಂದಲ ಕೂಡ ಇದೆ.  ಗೊಂದಲ ಬೇಡ ಮೂರು ವ್ಯಾಕ್ಸಿನೇಷನ್​ಗಳು ಕೂಡ ಬೆಸ್ಟ್​. ಇದರಿಂದ, ಅಪಾಯಕಾರಿ ಅಡ್ಡ ಪರಿಣಾಮಗಳು ಆಗೋದಿಲ್ಲ.ಈ ಮೂರು ಕೂಡ ಕೋವಿಡ್​-19ನನ್ನ ತಡೆಗಟ್ಟುವು ಒಂದು ವೇಳೆ ಬಂದರೆ ಹೆಚ್ಚಿನ ಪರಿಣಾಮ ಉಂಟಾಗದಂತೆ ತಡೆಯುವ ಹೊಂದಿವೆಯಂತಾರೆ ತಜ್ಞರು.

ಸದ್ಯ, ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್​ನ ಕೋವಿಶೀಲ್ಡ್​, ಭಾರತ್​ ಬಯೋಟೆಕ್​ನ ಕೋವ್ಯಾಕ್ಸಿನ್​ ಹಾಗೂ ಕಳೆದ ತಿಂಗಳಷ್ಟೇ ಡ್ರಗ್​ ಕಂಟ್ರೋಲರ್​ ಜನರಲ್ ​ಆಫ ಇಂಡಿಯಾ ಅನುಮತಿ ಮೇರೆಗೆ ಸಲಹೆ ಮೇರೆಗೆ ರಷ್ಯಾದಿಂದ ಭಾರತಕ್ಕೆ ಆಮದಾದ ಸ್ಪುಟ್ನಿಕ್​ ವಿ ವ್ಯಾಕ್ಸಿನೇಷನ್​ ಭಾರತದಲ್ಲೀಗ ಉಪಯೋಗಿಸಲಾಗ್ತಾಯಿದೆ.

ಯಾವ ವ್ಯಾಕ್ಸಿನ್​ ಹೆಚ್ಚು ಪರಿಣಾಮಕಾರಿ.?
ಎಲ್ಲಾ ಮೂರು ವ್ಯಾಕ್ಸಿನೇಷನ್​ಗಳು ಹೆಚ್ಚು ಪರಿಣಾಮಕಾರಿಯಾಗಿದೆ ಅನ್ನೋದು ಈಗಾಗ್ಲೇ ಸಾಬೀತರಾಗಿದೆ.

ಕೋವಿಶೀಲ್ಡ್​: ಈ ವ್ಯಾಕ್ಸಿನೇಷನ್​, ಶೇ.70ರಷ್ಟು ಪರಿಣಾಮಕಾರಿಯಾಗಿದ್ಯಂತೆ.ಎರಡು ಡೋಸೇಜ್​ಗಳ ಗ್ಯಾಪ್​ನಲ್ಲಿ ಕೋವಿಶೀಲ್ಡ್​ನ ಪರಿಣಾಮ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತಂತೆ.ಅಲ್ಲದೇ,ಕೋವಿಶೀಲ್ಡ್​ ವ್ಯಾಕ್ಸಿನ್,​ ಒಬ್ಬ ಸೋಂಕಿತನಿಗೆ ಯಾವುದೇ ರೀತಿಯ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳದೇ ಇರೋ ಹಾಗೇ ಜೊತೆಗೆ ಪಾಸಿಟಿವ್ ಆದ ಒಂದೇ ವಾರದಲ್ಲಿ ನೆಗೆಟಿವ್​ ಬರೋ ಸಾಧ್ಯತೆಗಳು ಕೋವಿಶೀಲ್ಡ್​​ ವ್ಯಾಕ್ಸಿನ್​ನಿಂದ ಆಗುತ್ತಂತೆ.​

ಕೋವ್ಯಾಕ್ಸಿನ್​: ಈ ವ್ಯಾಕ್ಸಿನೇಷನ್​, ಶೇ. 78ರಷ್ಟು ಪರಿಣಾಮಕಾರಿಯಾಗಿದ್ಯಂತೆ.ಇದಕ್ಕೆ ಕಾರಣ, ಈ ವ್ಯಾಕ್ಸಿನ್​ ಪಡೆದವ್ರಿಗೆ 100% ಯಾವುದೇ ರೀತಿಯ ಕೋವಿಡ್​ನ ಗಂಭೀರ ಲಕ್ಷಣಗಳಾಗ್ಲೀ, ಕೊರೊನಾದಿಂದ ಸಾವಾಗ್ಲಿ ಸಂಭವಿಸೋದಿಲ್ಲ ಅನ್ನೋದು ಸಾಬೀತಾಗಿದ್ಯಂತೆ.

ಸ್ಪುಟ್ನಿಕ್​-ವಿ: ಇನ್ನ, ಈ ಸ್ಪುಟ್ನಿಕ್​ ವಿ ವ್ಯಾಕ್ಸಿನೇಷನ್​ ಕೂಡ ಅತೀ ಹೆಚ್ಚು ಪರಿಣಾಮಕಾರಿಯಾಗಿದ್ಯಂತೆ. ಶೇ.91.6ರಷ್ಟು ಈ ವ್ಯಾಕ್ಸಿನ್​ ಪಡಿಣಾಮಕಾರಿಯಗಿದ್ಯಂತೆ.

ವಿಶೇಷ ಬರಹ: ರಕ್ಷಾ ಪ್ರಸಾದ್, ಡಿಜಿಟಲ್ ಡೆಸ್ಕ್

The post ವ್ಯಾಕ್ಸಿನ್ ಬಗ್ಗೆ ಹಿಂಜರಿತ ಬೇಡ? ಕೋವ್ಯಾಕ್ಸಿನ್​-ಕೋವಿಶೀಲ್ಡ್​-ಸ್ಪುಟ್ನಿಕ್​-ವಿ ಯಾವುದು ಉತ್ತಮ appeared first on News First Kannada.

Source: newsfirstlive.com

Source link