ವಿಶ್ವದ ಅತಿದೊಡ್ಡ ವ್ಯಾಕ್ಸಿನ್ ತಯಾರಿಕಾ ಸಂಸ್ಥೆ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ, ವ್ಯಾಕ್ಸಿನ್ ತಯಾರಿಕೆ ಮತ್ತು ಪೂರೈಕೆ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಹಾಗಾದರೆ ಆದಾರ್ ಪೂನಾವಾಲಾ ಏನು ಹೇಳಿದ್ದಾರೆ? ಅವರ ಮಾತುಗಳಲ್ಲೇ ಓದಿ..

ನನ್ನ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಹೀಗಾಗಿ ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಮೊದಲನೇಯದಾಗಿ, ವ್ಯಾಕ್ಸಿನ್ ಉತ್ಪಾದನೆ ಸ್ಪೆಷಲೈಜ್ ಆಗಿರುವಂಥ ವಿಧಾನ. ಹೀಗಾಗಿ, ರಾತ್ರೋ ರಾತ್ರಿ ವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅಲ್ಲದೇ ಭಾರತದ ಜನಸಂಖ್ಯೆ ಅತ್ಯಂತ ಹೆಚ್ಚು ಮತ್ತು ಎಲ್ಲ ವಯಸ್ಕರಿಗೆ ವ್ಯಾಕ್ಸಿನ್ ಉತ್ಪಾದಿಸುವುದು ಸುಲಭಸ ಕೆಲಸವಲ್ಲ. ಅತ್ಯಂತ ಕಡಿಮೆ ಜನಸಂಖ್ಯೆ ಇರೋ ಮುಂದುವರೆದ ರಾಷ್ಟ್ರಗಳು, ಅತ್ಯಂತ ದೊಡ್ಡ ಸಂಸ್ಥೆಗಳು ಕೂಡ ವ್ಯಾಕ್ಸಿನ್ ಉತ್ಪಾದನೆ ಮಾಡಲಾಗದೇ ಕಷ್ಟ ಪಡುತ್ತಿವೆ.

ಎರಡನೇಯದಾಗಿ ನಾವು ಭಾರತ ಸರ್ಕಾರದೊಂದಿಗೆ ಕಳೆದ ಏಪ್ರಿಲ್ ನಿಂದ ಕೇಂದ್ರ ಸರ್ಕಾರದೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ವೈಜ್ಞಾನಿಕ, ಕಾನೂನಾತ್ಮಕ ಹಾಗೂ ಆರ್ಥಿಕ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಇವತ್ತಿನ ತನಕ ನಾವು 26 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ತಯಾರಿಕೆಗೆ ಆರ್ಡರ್ ಪಡೆದಿದ್ದೇವೆ. ಅದರಲ್ಲಿ 15 ಕೋಟಿ ಡೋಸ್​ ವ್ಯಾಕ್ಸಿನ್ ಸಪ್ಲೈ ಮಾಡಿದ್ದೇವೆ. ಅಲ್ಲದೇ ಮುಂದಿನ ಕೆಲ ತಿಂಗಳಲ್ಲಿ ನಾವು ಪೂರೈಸಲಿರುವ 11 ಕೋಟಿ ಡೋಸ್ ವ್ಯಾಕ್ಸಿನ್​ಗಾಗಿ ಶೇ.100ರಷ್ಟು ಅಂದ್ರೆ ₹1732.50 ಕೋಟಿ ಅಡ್ವಾನ್ಸ್ ಅನ್ನು ಕೂಡ ಕೇಂದ್ರ ಸರ್ಕಾರ ನೀಡಿದೆ. ಇದಲ್ಲದೇ ಇನ್ನೂ 11 ಕೋಟಿ ಡೋಸ್ ವ್ಯಾಕ್ಸಿನ್ ಅನ್ನು ರಾಜ್ಯ ಸರ್ಕಾರ ಹಾಗೂ ಖಾಸಗೀ ಆಸ್ಪತ್ರೆಗಳಿಗೂ ನಾವು ಕೆಲ ತಿಂಗಳಲ್ಲಿ ಪೂರೈಕೆ ಮಾಡುತ್ತಿದ್ದೇವೆ.

ಕೊನೆಯದಾಗಿ ಎಲ್ಲರೂ ಆದಷ್ಟು ಬೇಗ ವ್ಯಾಕ್ಸಿನ್ ಲಭ್ಯವಾಗಬೇಕು ಎಂದು ಬಯಸುತ್ತಾರೆ. ಅದು ನಮ್ಮ ಗುರಿ ಕೂಡ ಆಗಿದೆ. ಮತ್ತು ಇದಕ್ಕಾಗಿ ನಾವು ಸರ್ವಸನ್ನದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ಮತ್ತಷ್ಟು ಹಾರ್ಡ್ ವರ್ಕ್ ಮಾಡುತ್ತೇವೆ ಮತ್ತು ಸೋಂಕಿನ ವಿರುದ್ಧ ದೇಶವನ್ನು ಸಶಕ್ತಗೊಳಿಸುತ್ತೇವೆ.

ಆದಾರ್ ಪೂನಾವಾಲಾ
ಸಿಇಒ
ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ

The post ವ್ಯಾಕ್ಸಿನ್ ರಾತ್ರೋ ರಾತ್ರಿ ಸಿದ್ಧವಾಗಲ್ಲ.. ಆದ್ರೂ ಅತ್ಯಂತ ವೇಗದಲ್ಲಿ ಸಿದ್ಧ ಮಾಡ್ತಿದ್ದೀವಿ -ಆದಾರ್ ಪೂನಾವಾಲಾ appeared first on News First Kannada.

Source: newsfirstlive.com

Source link