ಚಾಮರಾಜನಗರ: ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಾಗೂ ವ್ಯಾಕ್ಸಿನ್ ಪಡೆಯಲು ಜಿಲ್ಲೆಯ ಹನೂರಿನ ಹಾವಿನಮೂಲೆ ಹಾಡಿ ಸೋಲಿಗ ಸಮುದಾಯದ ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ವ್ಯಾಕ್ಸಿನ್ ಪಡೆಯವಂತೆ ಆರೋಗ್ಯ ಸಿಬ್ಬಂದಿ ಮನವೊಲಿಸಿದರೂ, ಗ್ರಾಮ ಪಂಚಾಯ್ತಿ ಸದಸ್ಯರು ಮನವಿ ಮಾಡಿಕೊಂಡರೂ ಸೋಲಿಗರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಪ್ಪುತ್ತಿಲ್ಲ. ಆರೋಗ್ಯ ಸಿಬ್ಬಂದಿ ಹಾಡಿಗಳಿಗೆ ತೆರಳಿದ್ರೆ ಸೋಲಿಗರು ಕಾಡಿನತ್ತ ತೆರಳುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ಆ ಭಾಗದಲ್ಲಿ ಹತ್ತು ಮಂದಿಗೆ ಸೋಂಕು ದೃಢವಾಗಿದ್ದರೂ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರಂತೆ. 250 ಮಂದಿ ಪೈಕಿ ಈವರೆಗೆ ಲಸಿಕೆ ಹಾಕಿಸಿಕೊಂಡವರು 20 ಮಂದಿ ಮಾತ್ರ ಎಂದು ತಿಳಿದುಬಂದಿದೆ.

The post ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು; ಕಾಡಿನತ್ತ ಓಡ್ತಿರೋ ಸೋಲಿಗರು appeared first on News First Kannada.

Source: newsfirstlive.com

Source link