ನವದೆಹಲಿ: ಲಸಿಕೆ ಹಾಕಿಸಿಕೊಳ್ಳದ 18 ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ನಿಷೇಧ ಹೇರಲಾಗುತ್ತಿದೆ. ಡಿಸೆಂಬರ್ 12 ರಿಂದ ಈ ನಿಯಮ ಜಾರಿಯಾಗಲಿದೆ ಎಂದು ತಮಿಳುನಾಡಿನ ಮಧುರೈ ಜಿಲ್ಲಾಧಿಕಾರಿ ಡಾ. ಎಸ್ ಅನೀಶ್ ಶೇಖರ್ ಹೇಳಿದ್ದಾರೆ.
ಯಾರೆಲ್ಲ ಲಸಿಕೆ ಹಾಕಿಸಿಕೊಂಡಿಲ್ಲವೋ ಅಂತವರಿಗೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತಿದೆ. ಅದರಂತೆ ಮಾರುಕಟ್ಟೆಗಳು, ಹೋಟೆಲ್ಸ್, ಶಾಪಿಂಗ್ ಮಾಲ್ಸ್, ಥಿಯೇಟರ್ಸ್, ಮ್ಯಾರೇಜ್ ಹಾಲ್ಸ್, ಪಿಡಿಎಸ್ ಶಾಪ್ಸ್, TASMAC ಸೇರಿದಂತೆ 18 ಸಾರ್ವಜನಿಕ ಸ್ಥಳಗಳಿಗೆ ನಿಷೇಧ ಹೇರಿದೆ.
ದೇಶದಲ್ಲಿ ಒಮಿಕ್ರಾನ್ ಕೊರೊನಾ ಪತ್ತೆಯಾದ ಬೆನ್ನಲ್ಲೇ, ಜಿಲ್ಲಾಧಿಕಾರಿಗಳು ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಇನ್ನೂ ಯಾರೆಲ್ಲಾ ಒಂದೂ ಡೋಸ್ ಲಸಿಕೆ ಪಡೆದುಕೊಂಡಿಲ್ಲವೋ, ಅವರಿಗೆ ಒಂದು ವಾರ ಅವಕಾಶ ನೀಡಲಾಗುತ್ತದೆ. ವಾರದೊಳಗೆ ಲಸಿಕೆಯನ್ನ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದುಕೊಂಡವರ ಸಂಖ್ಯೆ ತುಂಬಾ ಕಡಿಮೆ ಇದೆ. ಇದುವರೆಗೆ 71 ಪರ್ಸೆಂಟ್ನಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್ ಆಗಿದೆ. ಸೆಕೆಂಡ್ ವ್ಯಾಕ್ಸಿನೇಷನ್ನಲ್ಲಿ ಶೇಕಡಾ 32 ರಷ್ಟು ಆಗಿದೆ. ಇನ್ನೂ ಮೂರು ಲಕ್ಷ ಮಂದಿ ಲಸಿಕೆಯನ್ನ ಪಡೆಯಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.