ಚಾಮರಾಜನಗರ: ಕೊರೊನಾಗೆ ವ್ಯಾಕ್ಸಿನ್ ಬಂದಿದೆ, ದಯವಿಟ್ಟು ಎಲ್ಲರೂ ಹಾಕಿಸಿಕೊಳ್ಳಿ. ಪ್ರತೀ ಗ್ರಾಮ ಪಂಚಾಯತ್, ವಾರ್ಡ್​​ ವ್ಯಾಪ್ತಿಯಲ್ಲಿ ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ಆಗಬೇಕು ಅಂತಾ ಸರ್ಕಾರ, ಹಿರಿಯ ಅಧಿಕಾರಿಗಳು ಆದೇಶವೇನೋ ಮಾಡಿ ಬಿಡುತ್ತಾರೆ.. ಆದ್ರೆ ಅದನ್ನ ಜಾರಿಗೆ ತರವಲ್ಲಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಪಾಡು ಮಾತ್ರ ಯಾರಿಗೂ ಬೇಡ ಎನ್ನುವಂತಾಗಿದೆ.

ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಇಂದು ಸಚಿವ ಸುರೇಶ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಗ್ರಾಪಂ ಟಾಸ್ಕ್​​ ಫೋರ್ಸ್​ ಸಭೆ ನಡೆಸಿದ್ರು. ಈ ವೇಳೆ ಆಶಾ ಕಾರ್ಯಕರ್ತರು ತಮಗಾದ ಅನುಭವಗಳ ಇಂಚಿಂಚೂ ಮಾಹಿತಿಯನ್ನೂ ಸಚಿವರ ಮುಂದೆ ಅನಾವರಣ ಮಾಡಿದ್ರು.

ಈ ವೇಳೆ ಮಾತನಾಡಿದ ಓರ್ವ ಅಶಾ ಕಾರ್ಯಕರ್ತೆ..‘ಸಾರ್ ಜನರು ನಮ್ ಮಾತ್ ಕೇಳ್ತಿಲ್ಲ. ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಆತ್ಮಹತ್ಯೆ ಮಾಡ್ಕೊಳ್ತೇವೆ ಅಂತಾರೆ. ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ ಅಂತಾ ಜನರಲ್ಲಿ ಮನವಿ ಮಾಡ್ತಿದ್ದೇವೆ. ಆದರೆ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ನಿಮಗೆ ಲಾಭ ಇದೆ, ಇದ್ರಿಂದ ಲಸಿಕೆ ಹಾಕಿಸಿಕೊಳ್ಳಿ‌ ಅಂತಾ ಬರ್ತೀರಿ. ನೀವು ಬಲವಂತ ಮಾಡಿದ್ರೆ ನಾವು ಆತ್ಮಹತ್ಯೆ ಮಾಡ್ಕೋತ್ತೀವಿ ಅಂತಾರೆ. ಮತ್ತೊಂದು ಕಡೆ ಗ್ರಾ.ಪಂ ಸದಸ್ಯರೇ ಲಸಿಕೆ ಹಾಕಿಸಿಕೊಳ್ತಿಲ್ಲ. ಅವರು ಲಸಿಕೆ ಹಾಕಿಸ್ಕೊಂಡ್ರೆ ಎಲ್ಲರೂ ಹಾಕಿಸ್ಕೊಳ್ತಾರೆ ಅಂತಾ ದೂರಿದ್ರು.

The post ‘ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದ್ರೆ ಆತ್ಮಹತ್ಯೆ ಮಾಡ್ಕೋತಿವಿ.. ಅಂತಾರೆ ಸಾರ್’ appeared first on News First Kannada.

Source: newsfirstlive.com

Source link