ಶಂಕರ ಮಠದ 8 ಜನ ಪುರೋಹಿತರಿಂದ ಮಂತ್ರ ಪಾರಾಯಣ; ಇಫ್ತಾರ್ ಕೂಟದಲ್ಲಿ ಅಪರೂಪದ ಕಾರ್ಯಕ್ರಮ | Mantra recitation by 8 priests of Shankara Math at Iftar gathering organized by JDS


ಮೈಸೂರು: ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಜೆಡಿಎಸ್​​ನಿಂದ ಆಯೋಜಿಸಿದ ಇಫ್ತಾರ್​ ಕೂಟದಲ್ಲಿ ಶಂಕರಮಠದ 8 ಜನ ಪುರೋಹಿತರಿಂದ ವೇದ ಘೋಷ ಮಂತ್ರ ಪಾರಾಯಣ ಮಾಡಲಾಗಿದೆ. ನಗರದಲ್ಲಿ ರಂಜಾನ್ ಮಾಸ‌ದ ಇಫ್ತಾರ್ ಕೂಟದಲ್ಲಿ ಮಂತ್ರ ಮೇಳೈಸಿದೆ. ಸಿದ್ದರಾಮಯ್ಯ ಆಯೋಜಿಸಿದ್ದ ಸ್ಥಳದಲ್ಲೇ ಹೆಚ್‌ಡಿ.ಕುಮಾರಸ್ವಾಮಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿದ್ದು, ಇಫ್ತಾರ್​​ ಕೂಟದ ಪಾಲಿಟಿಕ್ಸ್​ ಆರಂಭವಾದಂತೆ ಕಾಣುತ್ತಿದೆ. ಇಫ್ತಾರ್ ಕೂಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್, ಆರ್.ಅಶ್ವಿನ್‌ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

TV9 Kannada


Leave a Reply

Your email address will not be published. Required fields are marked *