ಶಕ್ತಿ ಮಿಲ್​ ಗ್ಯಾಂಗ್​ ರೇಪ್​​ ಪ್ರಕರಣ: ಆರೋಪಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್​ | Bombay High Court Sets Aside death sentences to Shakti Mills gang rape convicts


ಶಕ್ತಿ ಮಿಲ್​ ಗ್ಯಾಂಗ್​ ರೇಪ್​​ ಪ್ರಕರಣ: ಆರೋಪಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್​

ಬಾಂಬೆ ಹೈಕೋರ್ಟ್​

ಮುಂಬೈನ ಶಕ್ತಿ ಮಿಲ್​ ಗ್ಯಾಂಗ್​ರೇಪ್​ ಆರೋಪಿಗಳಿಗೆ ಈ ಹಿಂದೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್​ ರದ್ದುಗೊಳಿಸಿ, ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಅಲ್ಲದೆ, ಯಾವುದೇ ನ್ಯಾಯಾಲಯಗಳು ತೀರ್ಪ ನೀಡಲು ಸಾರ್ವಜನಿಕ ಪ್ರತಿಭಟನೆಗಳು, ಆಕ್ರೋಶಗಳು ಮಾರ್ಗದರ್ಶನ ನೀಡುವಂತಾಗಬಾರದು ಎಂದು ತಿಳಿಸಿದೆ.  ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ನಡುಗಿಸಿದೆ. ಅಂದು ರೇಪ್​ಗೆ ಒಳಗಾದ ಯುವತಿ ಕೇವಲ ದೈಹಿಕವಾಗಿಯಲ್ಲದೆ, ಮಾನಸಿಕವಾಗಿಯೂ ತುಂಬ ಸಫರ್​ ಆಗಿದ್ದಾಳೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಅದೆಷ್ಟೋ ಜನರು ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಂದ ಮಾತ್ರಕ್ಕೆ ಸಾರ್ವಜನಿಕರ ಆಕ್ರೋಶ ಆಧರಿಸಿ ನ್ಯಾಯಾಲಯಗಳು ತೀರ್ಪು ನೀಡಬಾರದು ಎಂದು ಹೈಕೋರ್ಟ್ ಹೇಳಿದೆ. 

ಕೋರ್ಟ್​ನ ಈಗಿನ ತೀರ್ಪೇನು?
ಶಕ್ತಿ ಮಿಲ್​ ಗ್ಯಾಂಗ್​ರೇಪ್​​ನ ಆರೋಪಿಗಳಿಗೆ ಮರಣದಂಡನೆಯನ್ನು ರದ್ದುಗೊಳಿಸಿದ ನ್ಯಾಯಾಲಯ ಇದೀಗ ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವನ ಪರ್ಯಂತ ಅವರು ಜೈಲಿನಲ್ಲಿಯೇ ಕಳೆಯಬೇಕು ಎಂದು ಹೇಳಿದೆ. ಹಾಗೇ, ಪೆರೋಲ್​ ಅಥವಾ ಇನ್ಯಾವುದೇ ಕಾನೂನು ನಿಯಮಾನುಸಾರವೂ ಅವರು ಒಮ್ಮೆಯೂ ಹೊರಗೆ ಬರುವಂತಿಲ್ಲ. ಜಾಮೀನಿಗೆ ಅವಕಾಶವಿಲ್ಲ. ಯಾವ ಕಾರಣಕ್ಕೂ ಅವರು ಈ ಸಮಾಜದೊಟ್ಟಿಗೆ ಸೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಏನಿದು ಶಕ್ತಿ ಮಿಲ್​ ಗ್ಯಾಂಗ್​ ರೇಪ್​
2013ರಲ್ಲಿ ನಡೆದ ಗ್ಯಾಂಗ್​ ರೇಪ್ ಇದು. ಮುಂಬೈನ ನಿಷ್ಕ್ರಿಯ ಶಕ್ತಿ ಮಿಲ್​​ ಫೋಟೋ ತೆಗೆದು ವರದಿ ಮಾಡುವುದಕ್ಕೋಸ್ಕರ 22ವರ್ಷದ ಮಹಿಳಾ ಫೋಟೋ ಜರ್ನಲಿಸ್ಟ್​ವೊಬ್ಬರು ತನ್ನ ಪುರುಷ ಸಹೋದ್ಯೋಗಿಯೊಟ್ಟಿಗೆ ಅಲ್ಲಿಗೆ ತೆರಳಿದ್ದರು. ಆದರೆ ಅಲ್ಲಿ ಐದು ಮಂದಿ ಪುರುಷ ಉದ್ಯೋಗಿಯನ್ನು ಕಟ್ಟಿ ಹಾಕಿ ಯುವತಿಯನ್ನು ರೇಪ್​ ಮಾಡಿದ್ದರು. ಈ ಐವರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೂ ಆಗಿದ್ದ. ಆಗ ಆತನನ್ನು ರಿಮ್ಯಾಂಡ್ ಹೋಂಗೆ ಕಳಿಸಿ ಕೆಲವೇ ವರ್ಷಗಳ ನಂತರ ಬಿಡುಗಡೆ ಮಾಡಲಾಗಿತ್ತು.  ಇನ್ನು 2014ರಲ್ಲಿ ಈ ಆರೋಪಿಗಳಿಗೆ ಟ್ರಯಲ್​ ಕೋರ್ಟ್​ ಮರಣದಂಡನೆ ವಿಧಿಸಿತ್ತು. ಅದನ್ನೀಗ ಹೈಕೋರ್ಟ್​ ರದ್ದು ಮಾಡಿದೆ.

ಇದನ್ನೂ ಓದಿ: 200MP Smartphone: ಮೋಟೋ ಕಂಪನಿಯಿಂದ ಹೊಸ ಪ್ರಯೋಗ: ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್​ಫೋನ್

TV9 Kannada


Leave a Reply

Your email address will not be published. Required fields are marked *