ಬೆಂಗಳೂರು: ಕೊರೊನಾ ಕೇಸ್ ಗಳು ಕಡಿಮೆಯಾಗುತ್ತೆ ಅಂತಾ ನಿಟ್ಟುಸಿರು ಬಿಡುತ್ತಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಪ್ರತಿ ದಿನ ತೈಲ ದರದಲ್ಲಿ ಏರಿಕೆ ಕಾಣುತ್ತಿದೆ. ದಿನವೂ ಪೈಸೆ ಪೈಸೆ ಲೆಕ್ಕದಲ್ಲಿ ಪೆಟ್ರೋಲ್, ಡಿಸೇಲ್ ರೇಟ್ ಹೆಚ್ಚಾಗುತ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

ಈಗಾಗಲೇ ರಾಜ್ಯದ ಕೆಲ ನಗರ ಮತ್ತು ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನ ಎಚ್.ಪಿ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್) ಬಂಕ್‍ನಲ್ಲಿ, ಇಂದು ಒಂದು ಲೀಟರ್ ಪೆಟ್ರೋಲ್ ಬೆಲೆ 98 ರೂಪಾಯಿ 81 ಪೈಸೆಯಾಗಿದೆ. ಹಾಗೆಯೇ ಒಂದು ಲೀಟರ್ ಡಿಸೇಲ್ ಬೆಲೆ 91 ರೂಪಾಯಿ 73 ಪೈಸೆಗೆ ಏರಿಕೆಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲೇ ಅತಿ ಹೆಚ್ಚು, ಶಿರಸಿಯಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿರೋದೇ ರಾಜ್ಯದಲ್ಲಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹಾಗೆಯೇ ತೈಲ ಬೆಲೆಗಳ ಮೇಲೆ ಟ್ಯಾಕ್ಸ್ ಹೇರಿಕೆ ಸಹ ರೇಟ್ ಹೈಕ್ ಗೆ ಕಾರಣವಾಗಿದೆ. ಉಳಿದಂತೆ ಬೆಂಗಳೂರಿನ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಹಾಗೂ ರಿಲಯನ್ಸ್ ಬಂಕ್ ಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.

The post ಶತಕದ ಗಡಿ ದಾಟಿದ ಪೆಟ್ರೋಲ್ ಬೆಲೆ appeared first on Public TV.

Source: publictv.in

Source link