ಶತಮಾನಗಳ ಕಾಲ ಹಿಂದೂಸ್ತಾನವನ್ನು ಅಳಿದ ಮೊಘಲರಿಂದಲೇ ಅದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದು ಸಾಧ್ಯವಾಗಲಿಲ್ಲ: ಕುಮಾರಸ್ವಾಮಿ | Moghuls who ruled Hindustan for centuries failed to make it an Islamic country: Kumaraswamyಪಿಎಫ್​ಐ ಸಂಘಟನೆಯ ಸದಸ್ಯರು ಯಾವ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಅನ್ನೋದನ್ನು ರಾಜ್ಯ ಸರ್ಕಾರ ಜನರ ಮುಂದಿಡಬೇಕೇ ಹೊರತು ಸಂಘಟನೆ ಬಗ್ಗೆ ಇಲ್ಲಸಲ್ಲದ್ದು ಹೇಳಿ ಭಯದ ವಾತಾವರಣ ಮೂಡಿಸಬಾರದು ಎಂದು ಕುಮಾರಸ್ವಾಮಿ ಹೇಳಿದರು.

TV9kannada Web Team


| Edited By: Arun Belly

Sep 29, 2022 | 5:00 PM
ಭಾರತ ಒಂದು ಬಲಾಢ್ಯ ರಾಷ್ಟ್ರ, ಹಿಂದೆ ಶತಮಾನಗಳ ಕಾಲ ಹಿಂದೂಸ್ತಾನವನ್ನು (Hindustan) ಆಳಿದ ಮೊಘಲರಿಂದಲೇ ಅದನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ (Islamic Country) ಮಾಡುವುದು ಸಾಧ್ಯವಾಗಲಿಲ್ಲ. ಇನ್ನು ಪಿಎಫ್ಐನಂಥ ಒಂದು ಸಂಘಟನೆ ಭಾರತವನ್ನು ಒಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡೀತೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಪ್ರಶ್ನಿಸಿದರು. ಕರ್ನಾಟಕದಲ್ಲಿ ನಡೆದ 3-4 ಕೊಲೆ ಮತ್ತು ಕೇರಳದಲ್ಲಿ ನಡೆದ ಕೆಲ ಘಟನೆಗಳ ಆಧಾರದಲ್ಲಿ ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಲಾಗಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಆ ಸಂಘಟನೆಯ ಸದಸ್ಯರು ಯಾವ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಅನ್ನೋದನ್ನು ರಾಜ್ಯ ಸರ್ಕಾರ ಜನರ ಮುಂದಿಡಬೇಕೇ ಹೊರತು ಸಂಘಟನೆ ಬಗ್ಗೆ ಇಲ್ಲಸಲ್ಲದ್ದು ಹೇಳಿ ಭಯದ ವಾತಾವರಣ ಮೂಡಿಸಬಾರದು ಎಂದು ಕುಮಾರಸ್ವಾಮಿ ಹೇಳಿದರು.

TV9 Kannada


Leave a Reply

Your email address will not be published.