ವಾವರ್ ಒಬ್ಬ ಬಾಬರ್ ಆಗಿದ್ದ, ಈತ ಮುಸ್ಲಿಂ, ಈತ ಅಯ್ಯಪ್ಪನ ಸ್ನೇಹಿತ ಎಂದು ಬಿಂಬಿಸಿ ಮಸೀದಿ ನಿರ್ಮಾಣ ಮಾಡಿ ಕೋಟಿ ಕೋಟಿ ಹಣ ಮಸೀದಿಗೆ ಸುರಿಯುವುದು ಅಯ್ಯಪ್ಪನಿಗೆ ಮಾಡಿದ ಅಪಮಾನ ಎಂದು ಹಿಂದೂ ಸಂಘಟನೆಗಳು ಹೇಳಿವೆ.

ಶಬರಿಮಲೆಯ ಯಾತ್ರೆ ಆರಂಭದಲ್ಲೇ ಮತ್ತೆ ವಾವರ್ ಮಸೀದಿ ಮುನ್ನೆಲೆಗೆ
ಬೆಂಗಳೂರು: ಶಬರಿಮಲೆಯ ಯಾತ್ರೆ ಆರಂಭದಲ್ಲೇ ವಾವರ್ ಮಸೀದಿ ವಿವಾದ (Vavar Mosque Controversy) ಮತ್ತೆ ಮುನ್ನೆಲೆಗೆ ಬಂದಿದ್ದು, ವಾವರ್ ಮಸೀದಿಗೆ ಹಿಂದೂಗಳು ಹೋಗದಂತೆ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ. ಈಗಾಗಲೇ ಶಬರಿಮಲೆ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡುತ್ತಿದ್ದೇವೆ. ಅಲ್ಲಿನ ವಾವರ್ ಮಸೀದಿಗೆ ಹೋಗುವಂತ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ವಾವರ್ ಒಬ್ಬ ಬಾಬರ್ ಆಗಿದ್ದ, ಒಬ್ಬ ಮುಸ್ಲಿಂ ಆಗಿದ್ದ. ಒಬ್ಬ ಕಳ್ಳನನ್ನು, ದರೋಡೆಕೊರನನ್ನು ಅಯ್ಯಪ್ಪ ಸ್ವಾಮಿಯ ಸ್ನೇಹಿತ ಎಂದು ಬಿಂಬಿಸಿ ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಿ ಹಿಂದೂಗಳು ಕೋಟಿಗಟ್ಟಲೇ ಹಣವನ್ನು ಆ ಮಸೀದಿ ಸುರಿಯುವಂತದ್ದು ಹಿಂದೂ ಧರ್ಮಕ್ಕೆ, ಶಬರಿಮಲೆಯ ಅಯ್ಯಪ್ಪನಿಗೆ ಮಾಡಿದ ಅಪಮಾನವಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಹೇಳಿದ್ದಾರೆ.
ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಒಬ್ಬ ಮುಸ್ಲಿಂ ವಾವರ್ ಹೇಗೆ ಅಯ್ಯಪ್ಪ ಸ್ವಾಮಿ ಭಕ್ತ ಆಗಲು ಸಾಧ್ಯವಿದೆ? ಇಸ್ಲಾಂ ಧರ್ಮ ಹುಟ್ಟಿದ್ದು ಯಾವಾಗ? ಲಕ್ಷ ಲಕ್ಷ ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಜನನ ಆಗಿದೆ. ಹೀಗಿದ್ದಾಗ ಅಯ್ಯಪ್ಪ ಸ್ವಾಮಿ ಮತ್ತು ವಾವರ್ಗೆ ಹೇಗೆ ಸಂಬಂಧ ಎಂದು ಮಹೋನ್ ಗೌಡ ಪ್ರಶ್ನಿಸಿದರು.