ಈಗಾಗಲೇ ಹಲವಾರು ಸಿನಿಮಾಗಳಲ್ಲಿ ವ್ಯಸ್ತರಾಗಿರುವ ನಟಿ ರಚಿತ ರಾಮ್ ಈಗ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. 

ರಚಿತ ಅವರ 36 ನೇ ಯೋಜನೆಯಾಗಿದ್ದು ಹೊಸ ಸಿನಿಮಾದ ಯೋಜನೆ #RR36 ಎಂದೇ ಜನಜನಿತವಾಗಿತ್ತು. ಈ ಸಿನಿಮಾಗೆ ಶಬರಿ ಸರ್ಚಿಂಗ್ ಫಾರ್ ರಾವಣ ಎಂದು ನಾಮಕರಣ ಮಾಡಲಾಗಿದ್ದು, ಏ.21 ರಂದು ಅಂದರೆ ರಾಮನವಮಿಯಂದು ಫಸ್ಟ್ ಲುಕ್ ಬಿಡುಗಡೆಯಾಗಿದೆ. 

ಸಿನಿಮಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಿನಿಮಾ ನಾಯಕಿಯ ಕೇಂದ್ರೀಕೃತವಾಗಿದ್ದು, ರಿವೆಂಜ್ ಥ್ರಿಲ್ಲರ್ ಆಗಿದೆ. ನವೀನ್ ಶೆಟ್ಟಿ ಅವರ ಮೊದಲ ನಿರ್ದೇಶನದ ಸಿನಿಮಾ ಇದಾಗಿದ್ದು, ಕಿರಣ್ ಕುಮಾರ್ ಕೆಕೆ ಪ್ರೊಡಕ್ಷನ್ಸ್ ಹಾಗೂ ಎಟಿಎಂ ಸ್ಟೂಡಿಯೋಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚೇತನ್ ಕೇಶವ್ ಚಿತ್ರಕಥೆ ಬರೆದಿದ್ದು, ಅನೂಪ್ ಸಿಳಿನ್ ಸಂಗೀತ ಇದೆ. 

ವೈದ್ಯ್ ಎಸ್ ಜೊತೆಗೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ವಿಶಾಲ್ ಕುಮಾರ್ ಗೌಡ ಈ ಸಿನಿಮಾಗೆ ಛಾಯಾಗ್ರಾಹಕರಾಗಿದ್ದಾರೆ. ಪ್ರೇಮ್ ಅವರ ಏಕ್ ಲವ್ ಯಾ, ತೆಲುಗು ಸಿನಿಮಾ ಸೂಪರ್ ಮಚಿ ಬಿಡುಗಡೆಗೆ ಕಾಯುತ್ತಿರುವ ರಚಿತಾ ರಾಮ್, ಈಗ ಸೂರಿ ಅವರ ಬ್ಯಾಡ್ ಮ್ಯಾನರ್ಸ್, ರಚ್ಚು ಐ ಲವ್ ಯು, ವೀರಮ್, ಮ್ಯಾಟ್ನೀ ಹಾಗೂ ಇನ್ನಷ್ಟೇ ಹೆಸರಿಡಬೇಕಿರುವ ಎಸ್ ರವೀಂದ್ರನಾಥ್ ಅವರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೀಪಕ್ ಗಂಗಾಧರ್ ಅವರ ಮೊದಲ ಸಿನಿಮಾದಲ್ಲೂ ರಚಿತ ರಾಮ್ ಅಭಿನಯಿಸುತ್ತಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More