ಸೌಂಥಾಪ್ಟನ್: ಭಾರತ ತಂಡದ ವೇಗಿಗಳಾದ ಮೊಹಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರ ಸೂಪರ್ ಸ್ಪೇಲ್‍ನಿಂದಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್‍ನ 5ನೇ ದಿನ ನ್ಯೂಜಿಲ್ಯಾಂಡ್ ತಂಡವನ್ನು ಮೊದಲ ಇನ್ನಿಂಗ್ ನಲ್ಲಿ 249ರನ್‍ಗೆ ಆಲೌಟ್ ಮಾಡಿದೆ. ಆದರು ಕಿವೀಸ್ 32ರನ್‍ಗಳ ಅಲ್ಪ ಮುನ್ನಡೆ ಸಾಧಿಸಿದೆ.

ನಾಲ್ಕನೇ ದಿನ ಮಳೆಯಿಂದಾಗಿ ದಿನದಾಟ ರದ್ದಾಗಿತ್ತು. ಬಳಿಕ ಐದನೇ ದಿನ ಪಂದ್ಯ ಸರಾಗವಾಗಿ ನಡೆಯಿತು. 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದ್ದ  ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮುಂದುವರಿಸಿ 249ಕ್ಕೆ ಆಲೌಟ್ ಆಯಿತು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ವೇಗಿಗಳಾದ ಶಮಿ 26 ಓವರ್ ಎಸೆದು 4 ವಿಕೆಟ್ ಪಡೆದರೆ, ಇಶಾಂತ್ 25 ಓವರ್ ಎಸೆದು 3 ವಿಕೆಟ್ ಕಿತ್ತು ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇದನ್ನೂ ಓದಿ: ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ ಶುಭನ್ ಗಿಲ್ ಮತ್ತೆ ನಿರಾಸೆ ಮೂಡಿಸಿದರು ಕೇವಲ 8 ರನ್(55 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೋರ್ವ ಓಪನರ್ ರೋಹಿತ್ ಶರ್ಮಾ 30 ರನ್(81 ಎಸೆತ, 2 ಬೌಂಡರಿ) ಸಿಡಿಸಿ ಉತ್ತಮವಾಗಿ ಆಡುತ್ತಿದ್ದಾಗ ದಾಳಿಗಿಳಿದ ಸೌಥಿ, ಎಲ್‍ಬಿ ಬಲೆಗೆ ಬಿಳಿಸಿ ವಿಕೆಟ್ ಕಿತ್ತರು. ಬಳಿಕ ದಿನದಾಟದ ಅಂತ್ಯಕ್ಕೆ ಭಾರತ 64 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು 32ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೀಸಲು ದಿನವನ್ನು ಬಳಕೆ ಮಾಡಲು ಐಸಿಸಿ ನಿರ್ಧರಿಸಿರುವ ಕಾರಣ ಭಾರತ ಪರ ಚೇತೇಶ್ವರ ಪೂಜಾರ 12 ರನ್(55 ಎಸೆತ, 2 ಬೌಂಡರಿ) ಮತ್ತು ವಿರಾಟ್ ಕೊಹ್ಲಿ 8ರನ್ (12 ಎಸೆತ) ಮಾಡಿ 6ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

ಆರನೇ ದಿನದಾಟ ಭಾರೀ ಕುತೂಹಲ ಮೂಡಿಸಿದ್ದು, ಭಾರತ ಬೃಹತ್ ಮೊತ್ತ ಪೇರಿಸಿ ಕಿವೀಸ್‍ಗೆ ಒತ್ತಡ ಹಾಕಲು ಎದುರು ನೋಡುತ್ತಿದ್ದರೆ, ನ್ಯೂಜಿಲೆಂಡ್ ಭಾರತವನ್ನು ಆದಷ್ಟು ಬೇಗ ಆಲೌಟ್ ಮಾಡಿ ಗೆಲುವಿನ ಸಂಭ್ರಮ ಆಚರಿಸಲು ಹಾತೊರೆಯುತ್ತಿದೆ. ಈ ನಡುವೆ ಪಂದ್ಯ ಡ್ರಾ ಆಗುವ ಸಾಧ್ಯತೆಯು ಹೆಚ್ಚಿದೆ. ಹಾಗಾಗಿ ಅಭಿಮಾನಿಗಳಲ್ಲಿ ಕ್ಲೈಮ್ಯಾಕ್ಸ್ ಕುತೂಹಲ ಮೂಡಿಸಿದೆ.

ಮೊದಲ ಇನ್ನಿಂಗ್ಸ್ ಕುಸಿದ ಕೀವಿಸ್:
ಐದನೇ ದಿನದಾಟ ಆರಂಭಿಸಿದ ಕಿವೀಸ್ ದಿನದ ಮೊದಲ ಅವಧಿಯಲ್ಲಿ 23 ಓವರ್‍ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 34 ರನ್‍ಗಳಿಸಿತು. ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದ ಕೇನ್ ವಿಲಿಯಮ್ಸನ್ ಒಂದು ಕಡೆ ನಿಧಾನವಾಗಿ ರನ್ ಗಳಿಸಲು ಆರಂಭಿಸಿದರು ಆದರೆ ಇವರಿಗೆ ಮಧ್ಯಮ ಕ್ರಮಾಂಕದ ಆಟಗಾರ ಬೆಂಬಲ ಸಿಗಲಿಲ್ಲ. ರಾಸ್ ಟೇಲರ್ 11ರನ್(37 ಎಸೆತ, 2 ಬೌಂಡರಿ), ಬಿಜೆ ವಾಟ್ಲಿಂಗ್ 1ರನ್, ಡಿ ಗ್ರ್ಯಾಂಡ್‍ಹೋಮ್ 13ರನ್(30 ಎಸೆತ,1 ಬೌಂಡರಿ) ಕೈಲ್ ಜೇಮಿಸನ್ 21 ರನ್ (16 ಎಸೆತ 1ಸಿಕ್ಸ್), ಬಾರಿಸಿ ಔಟ್ ಆದರು ಇವರೊಂದಿಗೆ ವಿಲಿಯಮ್ಸನ್ 49 ರನ್(177 ಎಸೆತ,6 ಬೌಂಡರಿ) ಸಿಡಿಸಿ ಪೇವಿಲಿಯನ್ ಸೇರಿಕೊಂಡರು. ಬಳಿಕ ಟಿಮ್ ಸೌಥಿ 30ರನ್ (46 ಎಸೆತ, 1ಬೌಂಡರಿ, 1 ಸಿಕ್ಸ್) ಸಿಡಿಸಿ ಕಿವೀಸ್‍ಗೆ ಮುನ್ನಡೆ ತಂದು ಕೊಟ್ಟರು.

The post ಶಮಿ, ಇಶಾಂತ್ ಸೂಪರ್ ಸ್ಪೇಲ್ – ಭಾರತಕ್ಕೆ ಅಲ್ಪ ಮುನ್ನಡೆ appeared first on Public TV.

Source: publictv.in

Source link