ಶರಣ್​ ‘ಅವತಾರ ಪುರುಷ’ ವಿಷ್ಣುದಾದಾ ‘ಆಪ್ತಮಿತ್ರ’ ನೆನಪಿಸುತ್ತಾ? ಇದೇನಿದು ಲಿಂಕ್

ಸ್ಯಾಂಡಲ್​ವುಡ್​ನ ಅಧ್ಯಕ್ಷ ರ್ಯಾಂಬೋ ಶರಣ್​ ಬ್ಲಾಕ್​ ಮ್ಯಾಜಿಕ್​ ಮಾಡೋ ‘ಅವತಾರ ಪುರುಷನ’ ಅವತಾರದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ‘ಅವತಾರ ಪುರುಷ’ ಚಿತ್ರದಲ್ಲಿ ಶರಣ್ ಬರೋಬ್ಬರಿ ಹತ್ತು ಅವತಾರಗಳಲ್ಲಿ ಅಭಿಮಾನಿಗಳ ರಂಜಿಸೋಕೆ ರೆಡಿಯಾಗಿದ್ದಾರೆ. ಇನ್ನು ಚಿತ್ರದಲ್ಲಿ ಬ್ಲಾಕ್​ ಮ್ಯಾಜಿಕ್​ ಸಬ್ಜೆಕ್ಟ್​ ಹೈಲೆಟ್​ ಆಗಿದ್ದು. ಸಾಹಸ ಸಿಂಹ ಅಭಿನಯದ ಸೂಪರ್​ ಹಿಟ್​ ಸಿನಿಮಾ ‘ಆಪ್ತಮಿತ್ರ’ ಚಿತ್ರವನ್ನು ಅವತಾರ ಪುರುಷ ಕಣ್, ಮುಂದೆ ತರುತ್ತಾ..? ಅನ್ನೋ ಟಾಕ್​ ಕ್ರಿಯೇಟ್​ ಆಗಿದೆ. ಅಷ್ಟಕ್ಕೂ ಆಪ್ತಮಿತ್ರ ಚಿತ್ರಕ್ಕೂ ‘ಅವತಾರ ಪುರುಷ’ನಿಗೂ ಏನ್​ ಸಂಬಂಧ ಅಂತೀರ?

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ ‘ಅವತಾರ ಪುರುಷ’ ಚಿತ್ರ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಅವತಾರ ಪುರುಷ ಪುಷ್ಕರ್ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರ. ಸಿಂಪಲ್​ ಸುನಿ ಫಸ್ಟ್​ ಟೈಂ ಅವರ ರೆಗ್ಯುಲರ್​ ಜಾನರ್​ ಬಿಟ್ಟು ಬೇರೆ ಜಾನರ್​ಗೆ ಕೈ ಹಾಕಿದ್ದಾರೆ. ಚಿತ್ರದಲ್ಲಿ ಬ್ಲಾಕ್​ ಮ್ಯಾಜಿಕ್​ ಹೈಲೆಟ್ಸ್​ ಆಗಿದ್ದು, ಚಿತ್ರದ ಟ್ರೈಲರ್​ ಮೇಕಿಂಗ್​ ನೋಡಿರುವ ಚಿತ್ರಪ್ರೇಮಿಗಳು ಆಪ್ತಮಿತ್ರ ಚಿತ್ರವನ್ನು ಮೆಲುಕು ಹಾಕಿದ್ದಾರೆ.

ಅವತಾರ ಪುರುಷ” ವೆಬ್ ಸಿರೀಸ್ ಗೆ ಅಂತಾ ರೆಡಿಯಾಗಿದ್ದ ಕತೆಯನ್ನು, ಪುಷ್ಕರ್ ಕಥೆ ಕೇಳಿ, ಇಂಪ್ರೆಸ್​ ಆಗಿ ವೆಬ್ ಸಿರೀಸ್ ಮಾಡದೆ ಬಿಗ್ ಬಜೆಟ್​ನಲ್ಲಿ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಶರಣ್ ವಿಶೇಷವಾಗಿ 10 ಅವತಾರಗಳಲ್ಲಿ ಕಾಣಿಸಿದ್ದಾರೆ. ಕಾರಣ ಚಿತ್ರದ ಕತೆ..ಚಿತ್ರದಲ್ಲಿ ಮಾಟ ಮಂತ್ರ ಮೋಡಿ ಹೀಗೆ ಹಲವು ವಿಶೇಷವಾದ ಅಂಶಗಳು ಅವತಾರ ಪುರುಷನಲ್ಲಿ ಅಡಗಿವೆ. ಇನ್ನು ಈ ಎಲ್ಲಾ ಅಂಶಗಳ ಗಮನಿಸಿರುವ ಚಿತ್ರಪ್ರೇಮಿಗಳು ಅವತಾರ ಪುರುಷ ವಿಷ್ಣು ದಾದನ ಆಪ್ತಮಿತ್ರ ಚಿತ್ರವನ್ನು ನೆನೆಯುವಂತೆ ಮಾಡಿದೆ.

ಆಪ್ತಮಿತ್ರ ಚಿತ್ರದಲ್ಲೂ ಬ್ಲಾಕ್​ ಮ್ಯಾಜಿಕ್​ ಅಂಶದ ಜೊತೆಗೆ ವಿಜ್ಞಾನವು ಹದವಾಗಿ ಬೆರೆತು ಸಿನಿರಸಿಕರಿಗೆ ಹಿಡಿಸಿತ್ತು. ಈಗ ಅದೇ ದಾರಿಯಲ್ಲಿ ಸುನಿ ಸಾಗಿದ್ದು, ಮಾಟ ಮಂತ್ರದ ಜೊತೆಗೆ ವಿಜ್ಞಾನವನ್ನು ಸೇರಿಸಿ ಅವತಾರಪುರುಷನ ರೆಡಿಮಾಡಿದ್ದಾರೆ. ಆಪ್ತಮಿತ್ರ ಚಿತ್ರ ಇತಿಹಾಸ ಸೃಷ್ಠಿಸಿದ್ದು, ಈಗ ಅವತಾರ ಪುರುಷ ಕೂಡ ಹೊಸ ಚರಿತ್ರೆ ಬರೆಯೋಕೆ ಸಿದ್ದವಾಗ್ತಿದ್ದಾನೆ.

‘ಅವತಾರ ಪುರುಷ’ 2 ಭಾಗಗಳಲ್ಲಿ ರಿಲೀಸ್​ ಆಗಲಿದೆ. ಮೊದಲ ಭಾಗ ಡಿಸೆಂಬರ್​ 10ಕ್ಕೆ ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್​ ಆದ್ರೆ.  ಭಾಗ-೧ ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ. ಇನ್ನು ಇತ್ತಿಚೀನ ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಅವತಾರ ಪುರುಷನಿಗಾಗಿ ಸಖತ್​ ಎಫರ್ಟ್​ ಹಾಕಿದ್ದು, ಆ ಶ್ರಮಕ್ಕೆ ಪ್ರತಿಫಲ ಡಿ.10 ಯಾವ ರೀತಿ ಸಿಗಲಿದೆ ಕಾದು ನೋಡಬೇಕು.

News First Live Kannada

Leave a comment

Your email address will not be published. Required fields are marked *