ಶರತ್ ಬಚ್ಚೇಗೌಡ Vs ಎಂಟಿಬಿ ನಡುವೆ ಜಟಾಪಟಿ -ಪರಸ್ಪರ ಕೈ ಕೈ ಮಿಲಾಯಿಸೋ ಹಂತಕ್ಕೆ ಗಲಾಟೆ


ಹೊಸಕೋಟೆ: ಗ್ರಾಮ ಪಂಚಾಯ್ತಿ ಕಟ್ಟಡ ಉದ್ಘಾಟನೆ ಮಾಡವ ಸಂದರ್ಭದಲ್ಲಿ ಶಾಸಕ ಶರತ್​ ಬಚ್ಚೇಗೌಡ ಹಾಗೂ ಪೌರಾಡಳಿತ ಸಚಿವರ ನಡುವೆ ಜಟಾಪಟಿ ನಡೆದಿದ್ದು, ಇಬ್ಬರು ನಾಯಕರ ನಡುವೆ ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತ್ತು.

ಇಂದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯ್ತಿ ಉದ್ಘಾಟನೆ ವೇಳೆ ಘಟನೆ ನಡೆದಿದ್ದು, ಟೇಪ್ ಕಟ್ ಮಾಡಲು ನಾ ಮುಂದು ತಾ ಮುಂದು ಅಂತಾ ಇಬ್ಬರ ನಡುವೆ ಕಿತ್ತಾಟ ನಡೆಸಿದ್ದಾರೆ. ಉದ್ಘಾಟನೆಗೆ ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಎತ್ತಿಕೊಂಡು ಕಟ್ ಮಾಡಲು ಮುಂದಾಗಿದ್ದರು. ಈ ವೇಳೆ ಸಚಿವ ಎಂಟಿಬಿ ಗರಂ ಆಗಿ ಲುಕ್​ ನೀಡಿದ್ದರು. ಇದಕ್ಕೆ ಕ್ಯಾರೇ ಎನ್ನದ ಶಾಸಕ ಶರತ್ ಬಚ್ಚೇಗೌಡ ಟೇಪ್ ಕಟ್ ಮಾಡಿದ್ದರು.

ಟೇಪ್​ ಕಟ್​​ ಮಾಡಿ ಒಳಗೆ ಹೋಗುತ್ತಿದ್ದಂತೆ ಬಚ್ಚೇಗೌಡ ನಿಂದು ಇದೇ ಹಾಗೋಯ್ತು ಅಂತಾ ಎಂಟಿಬಿ ಅಸಮಾಧಾನ ವ್ಯಕ್ತಪಡಿಸಿದ್ದು, ಹೀಗೆ ಹೇಳುತ್ತಿದ್ದಂತೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ನಡುವೆ ಟಾಕ್ ವಾರ್ ನಡೆದಿದೆ. ಒಂದು ಹಂತದಲ್ಲಿ ಇಬ್ಬರು ನಾಯಕರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಶಾಸಕರ ಹಾಗೂ ಸಚಿವರನ್ನು ಶಾಂತಗೊಳಿಸಿದ್ದಾರೆ.

News First Live Kannada


Leave a Reply

Your email address will not be published.