ನವದೆಹಲಿ: ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್ ಪ್ರಾರಂಭಿಸಿದಾಗಿನಿಂದ ಈವರೆಗೆ ಒಟ್ಟು 20 ಕೋಟಿಗೂ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು ಈವರೆಗೆ 20,06,62,456 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಈ ಪೈಕಿ 15,71,49,593 ಮಂದಿ ಮೊದಲ ಮೋಸ್ ಪಡೆದುಕೊಂಡಿದ್ರೆ 4,35,12,863 ಮಂದಿ ಮೊದಲ ಮತ್ತು ಎರಡನೇ ಡೋಸ್​ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ದೇಶದಲ್ಲಿ ಮಹಾವ್ಯಾಕ್ಸಿನೇಷನ್ ಪ್ರಾರಂಭವಾಗಿ ಈವರೆಗೆ 130 ದಿನಗಳು ಕಳೆದಿವೆ.

ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 45 ವರ್ಷ ಮೇಲ್ಪಟ್ಟ 34 ಪರ್ಸೆಂಟ್ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ 42 ಪರ್ಸೆಂಟ್ ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ವೇಗವಾಗಿ ಲಸಿಕೆ ನೀಡುತ್ತಿರುವ ಟಾಪ್ ದೇಶಗಳು

  1. ಅಮೆರಿಕ 124 ದಿನಗಳಲ್ಲೇ 20 ಕೋಟಿಗೂ ಹೆಚ್ಚು ಜನರಿಗೆ ವ್ಯಾಕ್ಸಿನ್
  2. ಭಾರತದ 130 ದಿನಗಳಲ್ಲಿ 20 ಕೋಟಿಗೂ ಹೆಚ್ಚು ಜನರಿಗೆ ವ್ಯಾಕ್ಸಿನ್
  3. ಯುಕೆ 168 ದಿನಗಳಲ್ಲಿ 5.1 ಕೋಟಿ ಜನರಿಗೆ ವ್ಯಾಕ್ಸಿನ್
  4. ಬ್ರೆಜಿಲ್ 128 ದಿನಗಳಲ್ಲಿ 5.9 ಕೋಟಿ ಜನರಿಗೆ ವ್ಯಾಕ್ಸಿನ್
  5. ಜರ್ಮನಿ 149 ದಿನಗಳಲ್ಲಿ 4.5 ಕೋಟಿ ಜನರಿಗೆ ವ್ಯಾಕ್ಸಿನ್

The post ಶರವೇಗದಲ್ಲಿ ಸಾಗುತ್ತಿದೆ ವ್ಯಾಕ್ಸಿನೇಷನ್​.. ಲಸಿಕೆ ಪಡೆದವರ ಸಂಖ್ಯೆ 20 ಕೋಟಿಗೆ ಏರಿಕೆ appeared first on News First Kannada.

Source: newsfirstlive.com

Source link