ಮುಂಬೈ: ಬಹುತೇಕ ಸೆಲೆಬ್ರಿಟಿಗಳಿಗೆ ಬೈಕ್ ಕಾರ್​ಗಳ ಮೇಲೆ ಕ್ರೇಜ್ ಇರುತ್ತೆ. ಅಂತೆಯೇ ಇಂಡಿಯನ್ ಕ್ರಿಕೆಟ್​ ಟೀಂನ ಫಾಸ್ಟ್ ಬೌಲರ್ ನವ್​ದೀಪ್ ಸೈನಿ ಕೂಡ ತಮ್ಮ ಬೈಕ್​ ಮೇಲಿನ ಮೋಹವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೆಚ್ಚಿನ ಹಾರ್ಲೆ ಡೇವಿಡ್​ಸನ್ ಬೈಕ್​ ಮೇಲೆ ಶರ್ಟ್​ ಕಳಚಿ ಕೂತ ಸೈನಿ ನಿಂತಲ್ಲೇ ಗಾಡಿ ಸ್ಟಾರ್ಟ್ ಮಾಡಿ ಅಕ್ಷರಶಃ ಧೂಳೆಬ್ಬಿಸಿದ್ದಾರೆ.

ಸದ್ಯ ಕೊರೊನಾದಿಂದಾಗಿ ಮನೆಯಲ್ಲೇ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿರುವ ಕ್ರಿಕೆಟಿಗರ ಪೈಕಿ ನವ್​ದೀಪ್ ಸೈನಿ ಕೂಡ ಒಬ್ಬರು. ಬೈಕ್ ಕ್ರೇಜ್ ಪ್ರದರ್ಶಿಸುವುದರ ಜೊತೆಗೆ ಸೈನಿ ಫಿಟ್ನೆಸ್​ ಮೇಲೂ ಸಹ ಗಮನ ಹರಿಸಿದ್ದಾರೆ. ಆಗಾಗ್ಗೆ ತಮ್ಮ ಮನೆಯ ಟೆರೇಸ್ ಮೇಲೆ ವರ್ಕೌಟ್ ಮಾಡುವ ವಿಡಿಯೋಗಳನ್ನ ಸಹ ಸೈನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿರ್ತಾರೆ.

The post ಶರ್ಟ್ ಕಳಚಿ, ಹಾರ್ಲೆ ಡೇವಿಡ್​ಸನ್ ಬೈಕ್ ಮೇಲೆ ಕೂತು ಧೂಳೆಬ್ಬಿಸಿದ ನವ್​ದೀಪ್ ಸೈನಿ appeared first on News First Kannada.

Source: newsfirstlive.com

Source link