ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀಕರತೆಯ ಬಗ್ಗೆ ಆಂಬ್ಯುಲೆನ್ಸ್ ಡ್ರೈವರ್ ಒಬ್ಬರು ಬಿಚ್ಚಿಟ್ಟಿದ್ದಾರೆ. ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸ್ಥಳ ಹುಡುಕುವಂತ ಪರಿಸ್ಥಿತಿ ಬಂದೋದಗಿದೆ. ಕೊರೊನಾ ಬಗ್ಗೆ ಉಢಾಪೆಯಿಂದ ವರ್ತಿಸುತ್ತಿದ್ದವರಿಗೆ ಆಂಬ್ಯುಲೆನ್ಸ್ ಡ್ರೈವರ್ ಹೇಳಿದ ಸತ್ಯ ವಾಸ್ತವ ಸ್ಥಿತಿಯ ಕರಾಳ ಮುಖದ ದರ್ಶನ ಮಾಡಿಸುವಂತಿದೆ.

ಶವ ಹೂಳಲು ಕಲ್ಪಲ್ಲಿ ಸ್ಮಶಾನದಲ್ಲಿ ಸ್ಥಳಕ್ಕಾಗಿ ಹುಡುಕಾಟ
ರಾಜ್ಯದಲ್ಲಿ ಕೊರೊನಾ ತನ್ನ ರಣಭೀಕರ ನಗೆ ಬೀರುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಮಹಾಮಾರಿ ಭೀಕರತೆ ಎಷ್ಟಿದೆ ಅಂದ್ರೆ ಶವಗಳನ್ನ ಹೂಳುತ್ತಿದ್ದ ಸ್ಮಶಾನದಲ್ಲಿ ಈಗ ಅಂತ್ಯಕ್ರಿಯೇ ನಡೆಸಲು ಸ್ಥಳವನ್ನ ಹುಡುಕುವ ಪರಿಸ್ಥಿತಿ ಬಂದೋದಗಿದೆ. ಹೌದು 3 ಎಕರೆಗಿಂತ ಹೆಚ್ಚಿದ್ದ ಕಲ್ಲಪಳ್ಳಿ ಸ್ಮಶಾನ ಈಗ ಸಂಪೂರ್ಣವಾಗಿ ಭರ್ತಿಯಾಗಿದೆ. ಶವ ಹೂಳಲು ಸ್ಥಳವಿಲ್ಲದೆ ಎಲ್ಲಿ ಹೂಳುವುದೆಂದು ಹುಡುಕಾಟ ನಡೆಸುವಂತಾಗಿದೆ.

ನಾನು ಪ್ರತಿದಿನ ಅನಾಥ ಕೊರೊನಾ ಶವಗಳನ್ನು ಅಂತ್ಯ ಸಂಸ್ಕಾರ ಮಾಡುವ ಕಾರ್ಯವನ್ನ ಮಾಡುತ್ತಿದ್ದೇವೆ. ಕೊರೊನಾ ಬರೋದಕ್ಕೂ ಮುಂಚೆ ಕಲ್ಲಪಳ್ಳಿ ಸ್ಮಶಾನ ಫುಲ್​​ ಖಾಲಿ ಇತ್ತು. ಸುಮಾರು ಎರಡು ಎಕರೆ ಪ್ರದೇಶ ಖಾಲಿ ಇತ್ತು. ಈಗ ಮೃತದೇಹಗಳನ್ನು ಅಂತ್ಯ ಸಂಸ್ಕಾರ ಮಾಡಲು ಸ್ಥಳವನ್ನು ಹುಡುಕಿ ಹುಡುಕಿ ಮಣ್ಣು ಮಾಡುತ್ತಿದ್ದೇವೆ. ಮಣ್ಣು ಮಾಡುವುದು ಬೇಡ ಎಂದರೇ ಚಿತಾಗಾರಕ್ಕೆ ಹೋದರೆ ಕನಿಷ್ಠ 24 ಗಂಟೆ ಕಾಯಬೇಕು ಎಂದು ಆಂಬ್ಯುಲೆನ್ಸ್ ಚಾಲಕ ಡ್ಯಾನಿಲ್ ಹೇಳಿದ್ದಾರೆ.

ಮೊದಲೆಲ್ಲಾ ಮಕ್ಕಳು, ಯುವಕರು ಮೈದಾನದಲ್ಲಿ ಆಟವಾಡುತ್ತಿದ್ದರು. ಆದರೆ ಈಗ ಸ್ಥಳದಲ್ಲಿ ಬರೀ ಕಲ್ಲಿನ ಗೋರಿಗಳಿವೆ. ಸ್ಮಶಾನದ ಚಿತ್ರಣವನ್ನು ನೀವೇ ಒಮ್ಮೆ ನೋಡಿ… ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ವಿವರಿಸಿದ್ದಾರೆ.

ಅಂದಹಾಗೇ, ಮೊದಲಿನಿಂದಲೂ ಅನಾಥ ಶವಗಳನ್ನ ಡ್ಯಾನಿಲ್ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಯಾರೇ ಕರೆ ಮಾಡಿದ್ರೂ ಕೂಡಲೇ ಹೋಗಿ ಅಂತ್ಯಕ್ರಿಯೆ ನೇರವೇರಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಹೆಚ್ಚಾದ ಮೇಲೆ ಪ್ರತಿನಿತ್ಯ ನಾಲ್ಕೈದು ಅನಾಥ ಶವಗಳನ್ನ ಹೂಳುತ್ತಿದ್ದಾರೆ. ಕೋವಿಡ್ ಎರಡನೇ ಅಲೆ ಪ್ರಾರಂಭವಾದಗಿನಿಂದ 60 ಕ್ಕೂ ಹೆಚ್ಚು ಮತದೇಹಗಳ ಅಂತ್ಯಕ್ರಿಯೆ ನೆರವೇರೆಸಿದ್ದಾರೆ. ಈ ಸ್ಮಶಾನದ ಚಿತ್ರಣ ನೋಡಿದ ಮೇಲಾದರೂ ಕೊರೊನಾ ಬಗ್ಗೆ ಉಢಾಪೆ ಮಾಡುವವರು ಬದಲಾದರೇ ಸಾಕು ಎಂದು ಡ್ಯಾನಿಲ್​ ಹೇಳಿದ್ದಾರೆ.

The post ಶವ ಹೂಳಲು ಸ್ಮಶಾನದಲ್ಲಿ ಜಾಗವೇ ಇಲ್ಲ.. ಕರಾಳ ಸತ್ಯ ಬಿಚ್ಚಿಟ್ಟ ಆಂಬ್ಯುಲೆನ್ಸ್ ಡ್ರೈವರ್ appeared first on News First Kannada.

Source: newsfirstlive.com

Source link