ಹಲವು ಕಥೆಗಳ ಒಂದು ಸಿನಿಮಾ ಚಿತ್ರ ಗಾಂಧಿನಗರದಲ್ಲಿ ಯಶಸ್ಸು ಪಡೆದಿದೆ. ಅದೇ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರ್ಪಡಣೆಗೆ ಮುಂದಾಗಿದೆ. ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ ಕಥೆಗಳನ್ನು ಒಗ್ಗೂಡಿಸಿ "ಶಾಂತಿಯನ್ನು ಕಳೆದುಕೊಳ್ಳಬೇಡಿ" ಎಂಬ ಹೊಸ ಸಿನಿಮಾ ಗಾಂಧಿನಗರದಲ್ಲಿ ಸದ್ದಿಲ್ಲದೇ ಸೆಟ್ಟೇರಿದೆ. 

ಈ ಸಿನಿಮಾ ವಿಶೇಷತೆ ಎಂದರೆ ಮೂರು ಕತೆ, ಮೂವರು ನಿರ್ದೇಶಕರು. ಈಗಾಗಲೇ ಚಂದನವನದಲ್ಲಿ ಇದೇ ಮಾದರಿಯ ಕಥಾಸಂಗಮ ಎನ್ನುವ ಸಿನಿಮಾ ರಿಲೀಸ್ ಆಗಿದೆ. ಇದೀಗ ಅದೇ ರೀತಿಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸಬರ ತಂಡವೊಂದು ಸದ್ದು ಮಾಡುತ್ತಿದೆ.

ಈಗಾಗಲೇ ಕಿರುತೆರೆಯಲ್ಲಿ ಸಹ ನಿರ್ದೇಶಕರಾಗಿ ಅನುಭವ ಹೊಂದಿದ್ದ ವಿಘ್ನೇಶ್ ಶೇರೆಗಾರ್ ಶಾಂತಿಯನ್ನು ಕಳೆದುಕೊಳ್ಳಬೇಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ಗೆ ಕಾಲಿಡುತ್ತಿದ್ದಾರೆ. ಇನ್ನು ಗಿರೀಶ್ ಕಾಸರವಳ್ಳಿ ಜೊತೆ ಕೆಲಸ ಮಾಡಿರುವ ಬಾಸುಮಕೊಡಗು ಮತ್ತು ಕಿರುಚಿತ್ರ ನಿರ್ದೇಶನ ಮಾಡಿರುವ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ವಿಘ್ನೇಶ್ ನಿರ್ದೇಶನದ ಮೊದಲ ಭಾಗದ ಕಥೆ ಮಾನವನ ಅಸ್ತಿತ್ವದ ಬಗ್ಗೆ ಹೇಳಲಿದೆಯಂತೆ. 

ಮನುಷ್ಯ ಸತ್ತ ಮೇಲೂ ಜೀವಂತವಾಗಿರುವ ಬಗ್ಗೆ ಕಥೆ ಹೇಳುತ್ತಾರೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ನಿರ್ದೇಶಿಸುತ್ತಿದ್ದು ಇದರಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ. 

ಮೂರನೇ ಕಥೆ, ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಕೆಲಸ  ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕುರಿತಾಗಿದೆ.

ನಾಯಕ ನಟನಾಗಿ ಕಾರ್ತಿಕ್ ಹಾಗೂ ನಾಯಕಿಯಾಗಿ ಹರ್ಷಿತಾ ಅಭಿನಯಿಸಿದ್ದು, ನಿರ್ದೇಶಕರಿಂದ ಹಿಡಿದು ಈ ಸಿನಿಮಾದಲ್ಲಿ ಹಿರಿಯ ನಟರಾದ ಜಿ.ಕೆ. ಶಂಕರ್, ರಾಜಣ್ಣ, ಹಾಗೂ ನಟರನ್ನೂ ಸೇರಿ ಎಲ್ಲವೂ ಹೊಸಬರ ತಂಡವೇ ಆಗಿದೆ. ಕಾರ್ತಿಕ್, ಇಂದ್ರಜಿತ್, ಹರ್ಷಿತಾ, ಸಂಗೀತ, ಚಂದ್ರಕಲಾ ಭಟ್,ರಾಕೇಶ್, ಸಂಪತ್ ಶಾಸ್ತ್ರೀ ,ಮುಂತಾದವರು ನಟಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More