ಶಾಕಿಂಗ್​ ನ್ಯೂಸ್​ ಕೊಟ್ಟ ನಾಗಿಣಿ-2 ಸೀರಿಯಲ್​


ಜ್ಹೀ ಕನ್ನಡದಲ್ಲಿ ಪ್ರಸಾರವಾಗ್ತಾಯಿರವ ನಾಗಿಣಿ-2 ಧಾರಾವಾಹಿ ಮೊನ್ನೆ ಮೊನ್ನೆಯಷ್ಟೆ 400 ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡಿ ಯಶಸ್ವಿಯಾಗಿ ಮುನ್ನುಗ್ತಯಿದೆ..ಕಿರುತೆರೆಯಲ್ಲಿ ಅದೆಷ್ಟೋ ಧಾರಾವಾಹಿಗಳು ಬಂದ್ರು ಕೂಡ ರೋಚಕತೆ ಹುಟ್ಟಿಸುವ ಕಥೆಗಳಲ್ಲೊಂದು ನಾಗಿಣಿ. ಯಾವುದೇ ಭಾಷೆ, ಸಿನಿಮಾ, ಸೀರಿಯಲ್​ ಆದ್ರೂ ಅಲ್ಲಿ ನಾಗಿಣಿ ಇದಾಳೆ ಅಂದ್ರೆ ಅದ್ರ ಸಂಚಲನವೇ ಬೇರೆ.

ನಾಗಿಣಿ 2 ಧಾರಾವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಕೂಡ ಅದರದ್ದೆಯಾದ ಪಾಮುಖ್ಯತೆಯಿದೆ.. ಆದ್ರೇ ಇಡೀ ಕತೆ ಶಿವಾನಿ ಹಾಗೂ ತ್ರಿಶೂಲ್​ ಸುತ್ತ ಹೆಣೆಯಲಾಗಿದ್ದು, ಜನ್ಮ ಜನ್ಮಾಂತರದ ಬಂಧವನ್ನ ಬಿಚ್ಚಿಡುವ ಬ್ಯೂಟಿಫುಲ್​ ಲವ್​ ಸ್ಟೋರಿ ಇದೆ. ಆಗಾಗ ಒಂದಲ್ಲಾ ಒಂದು ಸುದ್ದಿಯಲ್ಲಿ ಸದ್ದು ಮಾಡುವ ನಾಗಿಣಿ 2 ಟೀಮ್​ನಿಂದ ಮತ್ತೊಂದು ವಿಷಯ ಹೊರಬಿದ್ದಿದೆ.. ಅದು ಏನಪ್ಪಾ ಅಂದ್ರೆ ನಾಗಿಣಿ 2 ಸೀರಿಯಲ್​ನ ಪ್ರಮುಖ ಪಾತ್ರ ಅಂದ್ರೆ ಧಮಯಂತಿ ಪಾತ್ರ ನಿಭಾಯಿಸ್ತಾಯಿದ್ದ ಜೆನ್ನಿಫರ್​ ಸೀರಿಯಲ್​ನಿಂದ ಹೊರ ನೆಡೆದಿದ್ದಾರೆ..

ಹೌದು, ಧಾರಾವಾಹಿ ಶುರುವಿನಿಂದ ಜನ್ನಿಫರ್​ ದಮಯಂತಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾಯಿದ್ರು.. ತ್ರಿಶೂಲ್​ ತಾಯಿ ಅಂದ್ರೆ ದಿಗ್ವಿಜಯನ ಹೆಂಡತಿ ಪಾತ್ರದಲ್ಲಿ ಜನ್ನಿಫರ್​ ಆ್ಯಂಟೊನಿ ಕಾಣಿಸಿಕೊಂಡಿದ್ರು.. ಇದೀಗ ವೈಯಕ್ತಿಕ ಕಾರಣದಿಂದಾಗಿ ರಾಮ್​ಜಿ ಅವರ ನಾಗಿಣಿ 2 ಸೀರಿಯಲ್​ನಿಂದ ಹೊರ ಬಂದಿದ್ದಾರೆ.

ಇದೀಗ ಜನ್ನಿಫರ್​ ಬದಲು ನಟಿ ರೇಖಾ ಸಾಗರ್ ಧಮಯಂತಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.. ಈಗಾಗಲೆ ರೇಖಾ ನಾಗಿಣಿ 2 ಸೆಟ್​ಗೆ ತೆರಳಿ ಶೂಟಿಂಗ್​ ಕೂಡ ಶುರುವಾಗಿದೆ. ಸದ್ಯದಲ್ಲಿ ರೇಖಾ ಧಮಯಂತಿ ಪಾತ್ರದ ಮೂಲಕ ನಿಮ್ಮನ್ನು ರಂಜಿಸಲಿದ್ದಾರೆ..
ಇನ್ನೂ ನಾಗಿಣಿ ಸೀರಿಯಲ್​ಗೆ ಫಿದಾ ಅಗಾದವ್ರೇ ಇಲ್ಲ. ಅದೇ ಹಾದಿಯಲ್ಲಿ ಬಂದ ನಾಗಿಣಿ-2 ಕೂಡ ಅದೇ ಹವಾ ಕ್ರಿಯೇಟ್​ ಮಾಡಿದೆ. ಟ್ವಿಸ್ಟ್​ ಮೇಲೇ ಟ್ವಿಸ್ಟ್​ ನೀಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.

ಒಟ್ನಲ್ಲಿ ನಾಗಿಣಿ 2 ಟೀಮ್​ನಿಂದ ಹೊರ ನೆಡೆದಿರುವ ಧಮಯಂತಿ ಮುಂದೆ ಯಾವ ಪಾತ್ರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ ಎಂಬುವುದನ್ನ ಕಾದು ನೋಡ್ಬೇಕು..

News First Live Kannada


Leave a Reply

Your email address will not be published. Required fields are marked *