ಶಾಕಿಂಗ್ ಘಟನೆ! ಮೊಬೈಲ್​ಗೆ ಚಾರ್ಜ್ ಹಾಕ್ತಿದ್ದಂತೆ ಪವರ್​ ಬ್ಯಾಂಕ್ ಸ್ಫೋಟಗೊಂಡು ವ್ಯಕ್ತಿ ಸಾವು​

ಶಾಕಿಂಗ್ ಘಟನೆ! ಮೊಬೈಲ್​ಗೆ ಚಾರ್ಜ್ ಹಾಕ್ತಿದ್ದಂತೆ ಪವರ್​ ಬ್ಯಾಂಕ್ ಸ್ಫೋಟಗೊಂಡು ವ್ಯಕ್ತಿ ಸಾವು​

ಮಧ್ಯ ಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಪವರ್ ಬ್ಯಾಂಕ್​​ನಂತೆ ಕಾಣುವ ವಸ್ತುವೊಂದು ಬಿದ್ದಿತ್ತು. ಅದನ್ನ ಎತ್ತಿಕೊಂಡ ಯುವಕ ತನ್ನ ಮೊಬೈಲ್​ ಚಾರ್ಜ್​ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಪವರ್​ ಬ್ಯಾಂಕ್​ ಎನ್ನಲಾಗಿರುವ ವಸ್ತು ಸ್ಫೋಟಗೊಂಡಿದೆ ಅಂತಾ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ದುರ್ಘಟನೆಯು ಕಳೆದ ಶುಕ್ರವಾರ ನಡೆದಿದೆ. ಸ್ಫೋಟಗೊಂಡ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಆದರೆ ಸ್ಫೋಟಗೊಂಡಿರೋದು ಪವರ್​ ಬ್ಯಾಂಕ್​​ ಅಥವಾ ಬೇರೆ ಎಲೆಕ್ಟ್ರಿಕ್ ಡಿವೈಸ್ ಅನ್ನೋದು ಇನ್ನೂ ಪ್ರೂವ್ ಆಗಿಲ್ಲ ಎಂದು ಸಬ್ ಡಿವಿಸನಲ್ ಆಫೀಸರ್ ಆಫ್ ಪೊಲೀಸ್ ಭಾರ್ತಿ ಜಾಟ್ ತಿಳಿಸಿದ್ದಾರೆ.

ರಾಮ್ ಸಹಿಲ್ ಪಾಲ್ ಮೃತ ದುದೈವಿ ಎಂದು ಗುರುತಿಸಲಾಗಿದೆ. ಮನ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿ ಸಿಕ್ಕ ಡಿವೈಸ್​ ಅನ್ನ ಪರಿಚಯಸ್ಥರ ಮನೆಗೆ ತೆಗೆದುಕೊಂಡು ಹೋಗಿ, ಅಲ್ಲಿ ತನ್ನ ಮೊಬೈಲ್ ಚಾರ್ಚ್​​ ಮಾಡಲು ಪ್ರಯತ್ನಿಸಿದಾಗ ದುರ್ಘ1ನೆ ಸಂಭವಿಸಿದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಸ್ಫೋಟಗೊಂಡಿರೋ ವಸ್ತುಗಳನ್ನ ಪೊಲೀಸರು ಲ್ಯಾಬ್​ಗೆ ಕಳುಹಿಸಿದ್ದಾರೆ. ಫೊರೆನ್ಸಿಕ್ ಸೈನ್ಸ್​ ಲ್ಯಾಬ್​​ ಬಳಿಕ ಅದು ಪವರ್ ಬ್ಯಾಂಕ್ ಆಗಿತ್ತಾ? ಅಥವಾ ಬೇರೆ ಯಾವುದೋ ಸ್ಫೋಟಕ ವಸ್ತು ಆಗಿತ್ತಾ ಎಂದು ತಿಳಿದುಬರಲಿದೆ.

The post ಶಾಕಿಂಗ್ ಘಟನೆ! ಮೊಬೈಲ್​ಗೆ ಚಾರ್ಜ್ ಹಾಕ್ತಿದ್ದಂತೆ ಪವರ್​ ಬ್ಯಾಂಕ್ ಸ್ಫೋಟಗೊಂಡು ವ್ಯಕ್ತಿ ಸಾವು​ appeared first on News First Kannada.

Source: newsfirstlive.com

Source link