ಶಾಖ ಉತ್ಪತ್ತಿ ಮಾಡುವ ದಿನಬಳಕೆಯ ವಸ್ತುಗಳಿಂದ ಚರ್ಮ ಸುಡಬಹುದು; ಎಚ್ಚರಿಕೆಯಿಂದಿರಿ | Using these things for long time cause to skin problem


ಶಾಖ ಉತ್ಪತ್ತಿ ಮಾಡುವ ದಿನಬಳಕೆಯ ವಸ್ತುಗಳಿಂದ ಚರ್ಮ ಸುಡಬಹುದು; ಎಚ್ಚರಿಕೆಯಿಂದಿರಿ

ಪ್ರಾತಿನಿಧಿಕ ಚಿತ್ರ

ಕೆಲವೊಮ್ಮೆ ಆರೋಗ್ಯವಾಗಿದ್ದರೂ ಚರ್ಮದ ಕಾಂತಿ ಮಾತ್ರ ಇರುವುದಿಲ್ಲ. ಸುಟ್ಟ ಚರ್ಮದಂತಹ ಭಾವ, ಕಳೆಗುಂದಿ ಚರ್ಮ ಉಂಟಾಗುತ್ತದೆ ಇದನ್ನು ಟೋಸ್ಟೆಡ್​ ಸ್ಕಿನ್​ ಸಿಂಡ್ರೋಮ್ (toasted skin syndrome)​ ಎಂದು ಕರೆಯುತ್ತಾರೆ. ನಾವು ದಿನನಿತ್ಯ ಬಳಸುವ ಲ್ಯಾಪ್​ಟಾಪ್ (Laptop)​, ರೋಮ್​ ಹೀಟರ್(Room Heater)​ ಗಳಂತಹ ಎಲೆಕ್ಟ್ರಾನಿಕ್​ ಡಿವೈಸ್​ಗಳಿಂದ ಚರ್ಮ ಕಾಂತಿಯನ್ನು ಕಳೆದುಕೊಂಡು ಸುಟ್ಟಂತಾಗುತ್ತದೆ. ಕೆಲವೊಮ್ಮೆ ತುರಿಕೆ, ಚರ್ಮದ ಬಣ್ಣ ಬದಲಾವಣೆ ಉಂಟಾಗುತ್ತದೆ. ಇದಕ್ ಕಾರಣ ದಿನನಿತ್ಯ ಬಳಸುವ ಎಲೆಕ್ಟ್ರಾನಿಕ್​ ಉಪಕರಣ ಮತ್ತು ವಸ್ತುಗಳಾಗಿವೆ. ಹೌದು, ತಂತ್ರಜ್ಞಾನ ಬೆಳೆದಂತೆ ಅವುಗಳ ಉಪಯೋಗ ಹಾಗೂ ಅವುಗಳಿಗೆ ಒಗ್ಗಿಕೊಳ್ಳುವುದು ಸಾಮಾನ್ಯ. ಆದರೆ ಅವು ಚರ್ಮ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದ ಮಾತ್ರಕ್ಕೆ ಅವುಗಳ ಬಳಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ಇಂದಿನ ದಿನಗಳಲ್ಲಿ ಎಲೆಕ್ಟ್ರಿಕ್​ ಉಪಕರಣಗಳಿಲ್ಲದೆ ಬದುಕು ಸಾಗುವುದೇ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅವುಗಳ ಬಳಕೆಯ ವಿಧಾನವನ್ನು ಬದಲಿಸಿಕೊಂಡರೆ ಅವುಗಳಿಂದಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ. ಈ ಕ್ರಮಗಳನ್ನು ಅನುಸರಿಸಿ ಇಲೆಕ್ಟ್ರಾನಿಕ್​ ಉಪಕರಣಗಳಿಂದ ಚರಮ್ದ ಮೇಲಾಗುವ ಹಾನಿಯನ್ನು ತಪ್ಪಿಸಿ,

ಕಾಲಿನ ಮೇಲೆ ಲ್ಯಾಪ್​ಟಾಪ್​ ಇರಿಸಿಕೊಳ್ಳುವುದನ್ನು ತಪ್ಪಿಸಿ
ಕೆಲವೊಮ್ಮೆ ಲ್ಯಾಪ್​ಟಾಪ್​ಗಳ್ನು ತೊಡೆಯ ಮೆಲೆ ಇಟ್ಟುಕೊಂಡು ಕೆಲಸ ಮಾಡುವುದೇ ಆರಾಮದಾಯಕ ಎನಿಸುತ್ತದೆ. ವರ್ಕ್​ ಫ್ರಾಮ್​ ಹೋಮ್​ ಆರಂಭವಾದಾಗಿನಿಂದಲಂತೂ ಈ ರೀತಿ ಅಭ್ಯಾಸಗಳು ಹೆಚ್ಚಾಗಿದೆ. ಆದರೆ ನೆನಪಿಡಿ, ಲ್ಯಾಪ್​ ಟಾಪ್​ ಬ್ಯಾಟರಿಗಳಿಂದ ಉತ್ಪತ್ತಿಯಾಗುವ ಬಿಸಿ ಶಾಖ ನಿಮ್ಮ ಚರ್ಮಗಳಿಗೆ ಹಾನಿಯುಂಟು ಮಾಡುತ್ತದೆ. ಇದು ಸ್ಕಿನ್​ ಸಿಂಡ್ರೋಮ್​ಗೆ ಕಾರಣವಾಗುತ್ತದೆ. ಹೀಗಾಗಿ ಲ್ಯಾಪ್​ಟಾಪ್​ಗಳ ಬಳಕೆಗೆ ಆದಷ್ಟು ಮರದ ಟೇಬಲ್​ಗಳನ್ನು ಬಳಸಿ.

ನ್ಯಾಪ್ಕಿನ್​ಗಳ ಬಳಕೆ
ಮಹಿಳೆಯರು ಬಳಸುವ ಪ್ಯಾಡ್​ ಅಥವಾ ನ್ಯಾಪ್ಕಿನ್​ಗಳು ಹೆಚ್ಚು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಹೀಗಾಗಿ ಅವುಗಳ ಬಳಕೆಯ ವೇಳೆ ಎಚ್ಚರವಿರಲಿ. ದಿನದಲ್ಲಿ 8 ಗಂಟೆಗಳ ಕಾಲ ಒಂದೇ ಪ್ಯಾಡ್​ಗಳನ್ನು ಬಳಸಬೇಡಿ. ಇದರಿಂದ ಚರ್ಮ ಸುಟ್ಟು ಉರಿ ಅಥವಾ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ,

ರೂಮ್​ ಹೀಟರ್​ಗಳಿಂದ ದೂರವಿರಿ
ಚಳಿಗಾಲದಲ್ಲಿ ರೂಮ್​ ಹೀಟರ್​​ಅನ್ನು ಬಂದ್​ ಮಾಡುವುದು ಕಷ್ಟದ ಕೆಲಸವೇ ಸರಿ. ಆದರೆ ನಿಮ್ಮ ಚರ್ಮದ ಸುರಕ್ಷತೆಯ ದೃಷ್ಟಿಯಿಂದ ಆದಷ್ಟು ರೂಮ್​ ಹೀಟರ್​ಗಳಿಂದ ದೂರವಿರಿ. ದೀರ್ಘಕಾಲದ ರೂಮ್​ ಹೀಟರ್​​ಗಳ ಬಳಕೆಯಿಂದ ಸ್ಕಿನ್​ ಸಿಂಡ್ರೋಮ್​ ಸಮಸ್ಯೆ ಕಾಣಿಸಕೊಳ್ಳುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆಯು ವ್ಯತಿರಿಕ್ತ ಪರಿಣಾಮ ಬೀರುತ್ತದೆ .

ಚರ್ಮವನ್ನು ಮಾಶ್ಚರೈಸ್ ಆಗಿ ಇರಿಸಿಕೊಳ್ಳಿ
ಒಣಗಿದ ಚರ್ಮ ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಬಹುದು. ಹೀಗಾಗಿ ಆದಷ್ಟು ಚರ್ಮವನ್ನು ಮಾಶ್ಚರೈಸ್​ ಆಗಿ ಇಟ್ಟುಕೊಳ್ಳಿ. ನಿಮ್ಮ ಗ್ಯಾಜೆಟ್​ಗಳ ಬಳಕೆ ಒಂ ಚರ್ಮವನ್ನು ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸಿ. ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸ್ಕಿನ್​ ಸಿಂಡ್ರೋಮ್​ನ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ
ಸ್ಕಿನ್​ ಸಿಂಡ್ರೋಮ್​ಗಳ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರಿಕೆವಹಿಸಿ. ಬಿಸಿ ಗಾಳಿಗೆ ಒಡ್ಡಿಕೊಳ್ಳುವ ನಿಮ್ಮ ದೇಹದ ಚರ್ಮದ ಬಗ್ಗೆ ನಿಗಾ ಇರಲಿ ಚರ್ಮದ ಬಣ್ಣ, ಉರಿಯೂತದ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.​

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೀಮ್ಸ್​ನೌ ವರದಿಯ ಮಾಹಿತಿಯನ್ನು ಆಧರಿಸಿದೆ.)

TV9 Kannada


Leave a Reply

Your email address will not be published. Required fields are marked *